Advertisement
ಇಲ್ಲಿ ಮೂವರು ಸಕ್ಸಸ್ ಮಂದಿಯ ಸ್ಪರ್ಶವಿದೆ. ನಾಯಕ ಯಶ್ ಯಶಸ್ಸಿನ ಅಲೆಯಲ್ಲಿದ್ದವರು. ನಿರ್ಮಾಪಕ ವಿಜಯ್ ಕಿರಗಂದೂರು ಸಕ್ಸಸ್ ಸಿನಿಮಾ ಕೊಟ್ಟವರು, ನಿರ್ದೇಶಕ ಪ್ರಶಾಂತ್ ನೀಲ್ “ಉಗ್ರಂ’ ಮೂಲಕ ಯಶಸ್ಸು ಕಂಡವರು. ಹೀಗಿದ್ದ ಮೇಲೆ ನಿರ್ದೇ ಶಕರಿಗೆ “ಕೆಜಿಎಫ್’ ಒಂದು ದೊಡ್ಡ ಸವಾಲು. ಅಂಥದ್ದೊಂದು ಸವಾಲು ಏನಿತ್ತು? ಈ ಪ್ರಶ್ನೆಗೆ ಉತ್ತರಿಸುವ ಪ್ರಶಾಂತ್ ನೀಲ್, “ಮೊದಲನೆ ಯದು ಇದೊಂದು ದೊಡ್ಡ ಕ್ಯಾನ್ವಾಸ್. ನನಗಿದು ಎರಡನೇ ಸಿನಿಮಾ. ಅನುಭವ ಬೇರೆ ಕಮ್ಮಿ. ದೊಡ್ಡ ತಂಡದ ಜೊತೆ ಕೆಲಸ. ನಿರೀಕ್ಷೆ ಮೀರಿದ ಸೆಟ್ಟು. ಯಾವು ದಕ್ಕೂ ಕೊರತೆ ಇಲ್ಲದ ಪ್ರೊಡಕ್ಷನ್. ಇವೆಲ್ಲವನ್ನೂ ಸಮನಾಗಿ, ಸರಿಯಾಗಿ ತೂಗಿಸಿಕೊಂಡು ಹೋಗಬೇಕಿದ್ದದ್ದೇ ದೊಡ್ಡ ಸವಾಲು.
Related Articles
Advertisement
ಯಾವುದೇ ಒಬ್ಬ ನಿರ್ದೇಶಕನಿಗೆ ತನ್ನ ಚಿತ್ರ ಎಷ್ಟೇ ಚೆನ್ನಾಗಿ ಮೂಡಿಬಂದಿದ್ದರೂ, ಇನ್ನೇನೋ ಬೇಕಿತ್ತು ಎಂಬ ಸಣ್ಣದ್ದೊಂದು ಪ್ರಶ್ನೆ ಕಾಡುತ್ತಲೇ ಇರುತ್ತೆ. ಅಂಥದ್ದೊಂದು ಪ್ರಶ್ನೆ ಪ್ರಶಾಂತ್‌ನೀಲ್ ಅವರಿಗೂ ಕಾಡಿದ್ದು ನಿಜ. ಈಗ ಚಿತ್ರ ರೆಡಿಯಾಗಿದೆ. ನವೆಂಬರ್‌ನಲ್ಲಿ ತೆರೆಗೆ ಬರುತ್ತಿದೆ. ಆದರೂ ಅವರಿಗೆ ಇನ್ನೂ ಸಮಯ ಸಿಕ್ಕರೆ ಕರೆಕ್ಷನ್ ಹಾಕುವ ಮನಸ್ಸೂ ಇದೆ. “ನಾನು ಏನಿಲ್ಲವೆಂದರೂ “ಕೆಜಿಎಫ್’ ಚಿತ್ರವನ್ನು ಸುಮಾರು ನೂರೈವತ್ತು ಸಲ ನೋಡಿರಬಹುದು. ನಿರ್ಮಾಪಕರು ಏನಾದರೂ ಟೈಮ್ ಬೇಕಾ ಅಂತ ಕೇಳಿದರೆ, ಇನ್ನು ಆರು ತಿಂಗಳು ಕೊಡಿ ಅಂತೀನಿ. ಯಾಕೆಂದರೆ, ಒಂದು ಸಿನಿಮಾ ಅಂದರೆ, ಪ್ರತಿ ಹಂತದಲ್ಲೂ ಗಟ್ಟಿಯಾಗಿರಬೇಕು. ಕೆಲಸ ಪಫೆìಕ್ಟ್ ಇದ್ದರೆ ತಾನೇ ಎಲ್ಲರಿಗೂ ಹೆಸರು. ಆದರೂ, ನಿರ್ಮಾಪಕರ ಹಿತದೃಷ್ಟಿ ನೋಡುವುದು ನಿರ್ದೇಶಕನ ಕರ್ತವ್ಯ. “ಕೆಜಿಎಫ್’ ಎಲ್ಲರಿಗೂ ಒಂದೊಳ್ಳೆಯ ಹೆಸರು ತಂದುಕೊಡುತ್ತೆ ಎಂಬ ಅದಮ್ಯ ವಿಶ್ವಾಸವಂತೂ ಇದೆ. ಇಷ್ಟು ವರ್ಷದ ಶ್ರಮ ಯಾರಿಗೂ ಮೋಸ ಮಾಡಲ್ಲ’ ಎಂಬ ನಂಬಿಕೆ ನನ್ನದು ಎನ್ನುತ್ತಾರೆ ಪ್ರಶಾಂತ್.
ಎಲ್ಲರಿಗೂ ತಿಳಿದಂತೆ “ಕೆಜಿಎಫ್ ಪಾರ್ಟ್ 2′ ಬರಲಿದೆ ಎಂಬುದು ಗೊತ್ತು. ಈ ಬಗ್ಗೆ ಪ್ರಶಾಂತ್ ಹೇಳುವುದು ಹೀಗೆ. “ಸೆಕೆಂಡ್ ಪಾರ್ಟ್ ಬರೋದು ಗ್ಯಾರಂಟಿ. ಆದರೆ, “ಕೆಜಿಎಫ್’ ಮೊದಲ ಭಾಗ ಜನರಿಗೆ ಇಷ್ಟ ಆಗಬೇಕು. ರಿಲೀಸ್ ಆಗಿ 10 ದಿನ ಕಳೆದ ನಂತರ ಜನರಿಗೆ ಯಾವ ಪಾತ್ರ ಇಷ್ಟವಾಗುತ್ತೆ. ಯಾವ ಭಾಗ ಇಷ್ಟವಾಗಲ್ಲ ಎಂಬುದನ್ನು ತಿಳಿದುಕೊಂಡು, ಆಮೇಲೆ ಎರಡನೇ ಭಾಗದಲ್ಲಿ ಅದನ್ನು ಸರಿಪಡಿಸಿಕೊಳ್ಳಬೇಕಿದೆ. ಎರಡನೇ ಭಾಗ ಪೂರ್ಣವಾಗಿಲ್ಲ. ಜನರ ಫಲಿತಾಂಶ ನೋಡಿಕೊಂಡು,ಸಣ್ಣಪುಟ್ಟ ಕರೆಕ್ಷನ್ ತಿದ್ದಿಕೊಂಡು ಬರಿ¤àವಿ.
“ಕೆಜಿಎಫ್’ ದಾಖಲೆಯ ಬಜೆಟ್ ಚಿತ್ರ ಅನ್ನೋದೆಲ್ಲಾ ಎಷ್ಟು ಸರಿಯೋ ಗೊತ್ತಿಲ್ಲ. ಆದರೆ, ಪ್ರಶಾಂತ್ ನೀಲ್ ಪ್ರಕಾರ ಬಜೆಟ್‌ನಿಂದ ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದು ಗೊತ್ತಿದೆ. “ಒಂದು ಚಿತ್ರ ಬಜೆಟ್‌ನಿಂದ ಗೆಲ್ಲುವುದಿಲ್ಲ. ಕಂಟೆಂಟ್‌ನಿಂದ ಗೆಲ್ಲುತ್ತೆ. ಬಜೆಟ್ ಸಿನಿಮಾ ಅಂದರೆ ಅದೊಂದು ಚಿಕ್ಕ ಹೈಪ್ ಪಡೆದುಕೊಳ್ಳುತ್ತೆ ವಿನಃ ಬೇರೇನೂ ಅಲ್ಲ. ಅದರಿಂದ ಹತ್ತು ಜನ ಬರ್ತಾರೆ. ಆ ಹತ್ತು ಜನ ನೂರು ಜನರಿಗೆ ಹೇಳ್ತಾರೆ ಅದೊಂದೇ ಪ್ಲಸ್ಸು. ಸತ್ಯವಾಗಿ ಹೇಳ್ತೀನಿ ನನಗೆ “ಕೆಜಿಎಫ್’ ಬಜೆಟ್ ಗೊತ್ತಿಲ್ಲ. ಯಾಕೆಂದರೆ, 9 ಜನರ ತಂಡ ಅದನ್ನು ನೋಡಿಕೊಳ್ಳುತ್ತಿತ್ತು. ಇಷ್ಟರಲ್ಲೇ ಟ್ರೇಲರ್ ಬಿಡ್ತೀವಿ. ಅಲ್ಲಿ ಯಶ್ ಪಾತ್ರದ ಸುಳಿವು ಕೊಡ್ತೀವಿ. ಯಶ್ ಪಾತ್ರ ಯಾವುದೇ ರಿಯಲ್ ಲೈಫ್ದಲ್ಲ. ಕಥೆ ಕೋಲಾರ ಹಿನ್ನೆಲೆಯದ್ದಲ್ಲ’ ಎನ್ನುತ್ತಾರೆ ಪ್ರಶಾಂತ್.
ವಿಜಯ್ ಭರಮಸಾಗರ