Advertisement

ದಿಲ್ಲಿ ರಣಜಿ ತಂಡಕ್ಕೆ ಯಶ್‌ ಧುಲ್‌ ಸೇರ್ಪಡೆ

10:54 PM Feb 10, 2022 | Team Udayavani |

ಹೊಸದಿಲ್ಲಿ: ಅಂಡರ್‌-19 ಏಕದಿನ ವಿಶ್ವಕಪ್‌ ವಿಜೇತ ತಂಡದ ನಾಯಕ ಯಶ್‌ ಧುಲ್‌ ಈ ಯಶಸ್ಸಿನ ಬೆನ್ನಲ್ಲೇ ದಿಲ್ಲಿ ರಣಜಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಇದೇ ವೇಳೆ ಹಿರಿಯ ವೇಗಿ ಇಶಾಂತ್‌ ಶರ್ಮ ತಂಡದ ಆಯ್ಕೆಗೆ ಲಭ್ಯರಿಲ್ಲ ಎಂದಿದ್ದಾರೆ.

Advertisement

ಭಾರತದ ಕಿರಿಯರ ತಂಡದ ಅತ್ಯಂತ ಯಶಸ್ವಿ ನಾಯಕನಾಗಿ ಗುರುತಿಸಲ್ಪಟ್ಟಿರುವ ಯಶ್‌ ಧುಲ್‌, ಕಳೆದ ಅಂಡರ್‌-19 ವಿಶ್ವಕಪ್‌ನಲ್ಲಿ 76.33 ಸರಾಸರಿಯಲ್ಲಿ 229 ರನ್‌ ಪೇರಿಸಿದ್ದರು. ಒಂದು ಶತಕ ಹಾಗೂ ಅರ್ಧ ಶತಕ ಇದರಲ್ಲಿ ಸೇರಿದೆ.

ಟೀಮ್‌ ಇಂಡಿಯಾವನ್ನು ಪ್ರತಿನಿಧಿಸುತ್ತಿರುವ ನವದೀಪ್‌ ಸೈನಿ ಕೂಡ ದಿಲ್ಲಿ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರದೀಪ್‌ ಸಂಗ್ವಾನ್‌ ನಾಯಕರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next