Advertisement
ಮಂಡ್ಯ, ಮದ್ದೂರು ತಾಲೂಕಿನ ವಿವಿಧೆಡೆ ಪ್ರಚಾರ ನಡೆಸಿದ ಸುಮಲತಾ ಸಿಎಂ ವಿರುದ್ಧ ಟೀಕಾಪ್ರಹಾರ ಮುಂದುವರಿಸಿದರು. ಅಂಬರೀಶ್‌ಗೆ ಅಭಿಮಾನಿಗಳು ನೀಡಿರುವ ಬೆಳ್ಳಿ ಗದೆ, ಚಿನ್ನದ ಕಿರೀಟಗಳನ್ನು ಮಾರಾಟ ಮಾಡಿ ಆ ಹಣದಿಂದ ಸುಮಲತಾ ಆಭರಣ ಮಾಡಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ನಮ್ಮದು ದಾನಶೂರ ಕರ್ಣನ ಮನೆ. ಅಂಬರೀಶ್‌ಗೆ ಕೊಟ್ಟ ಗದೆ, ಚಿನ್ನದ ಕಿರೀಟಗಳನ್ನು ಮಾರಿಕೊಳ್ಳುವಷ್ಟು ದರಿದ್ರ ನಮಗೆ ಬಂದಿಲ್ಲ. ಅಂಬರೀಶ್ ಬದುಕಿದ್ದಾಗಲೇ ಅವುಗಳನ್ನು ಶ್ರೀ ಆಂಜನೇಯಸ್ವಾಮಿ, ಶ್ರೀ ಶಿರಡಿ ಸಾಯಿಬಾಬ ಮಂದಿರಗಳಿಗೆ ದಾನವಾಗಿ ನೀಡಿದ್ದಾರೆಎಂದರು.
ಮದ್ದೂರಿನ ಶಿವಪುರದಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡುವ ವೇಳೆ ಸ್ಥಳೀಯ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು, ಪುರಸಭೆ ಸದಸ್ಯರು ಸೇರಿ 10 ಸಾವಿರ ರೂ.ಗಳ ದೇಣಿಗೆ ನೀಡಿ ಅಂಬರೀಶ್ ಹಾಗೂ ಸುಮಲತಾ ಪರ ಘೋಷಣೆ ಕೂಗಿ ತಮ್ಮ ಬೆಂಬಲ ವ್ಯಕ್ತಪಡಿಸಿದರು. ರಾಕಿ ಬಾಯ್ ಪ್ರಚಾರ:
ಈ ಮಧ್ಯೆ, ಪಾಂಡವಪುರ, ಶ್ರೀರಂಗಪಟ್ಟಣ ಸುತ್ತಮುತ್ತ ಯಶ್ ಪ್ರಚಾರ ನಡೆಸಿ, ಅಮ್ಮ ಸುಮಲತಾ ನಮ್ಮ ಜಿಲ್ಲೆಯ ಸೊಸೆ ಎಂದು ಹೆಮ್ಮೆಯಿಂದ ಮತ ಹಾಕಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ರೈತನಾಯಕಿ ಸುನೀತಾ ಪುಟ್ಟಣ್ಣಯ್ಯ ಸಾಥ್ ನೀಡಿದರು. ಗಂಜಾಂನಲ್ಲಿ ಮಹಿಳೆಯೊಬ್ಬರು ಯಶ್ ಇದ್ದ ವಾಹನಕ್ಕೆ ಆರತಿ ಬೆಳಗಿದರೆ, ಯುವಕರು ಮೈಸೂರು ಪೇಟ ತೊಡಿಸಿದರು.
Related Articles
ಕೆ.ಆರ್.ಪೇಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಮ್ಮ ಸುಮಲತಾಗೆ ಮತ ನೀಡಿ ಜಯಮಾಲೆ ತೊಡಿಸುವ ಮೂಲಕ ವಿರೋಧಿಗಳಿಗೆ ತಕ್ಕ ಪಾಠ ಕಲಿಸಿ ಎಂದು ಮನವಿ ಮಾಡಿದರು. ದರ್ಶನ್ ರೋಡ್ ಶೋನಲ್ಲಿ ಹಲವು ಸ್ಥಳೀಯ ಕಾಂಗ್ರೆಸ್ ಮುಖಂಡರು ಪಾಲ್ಗೊಂಡರು.
Advertisement
ಜೋಡೆತ್ತಿನ ಗಾಡಿ ಓಡಿಸಿದ ನಿಖೀಲ್:ಇದೇ ವೇಳೆ, ಮಂಡ್ಯ ತಾಲೂಕಿನ ವಿವಿಧೆಡೆ ನಿಖೀಲ್ ಕುಮಾರಸ್ವಾಮಿಯವರು ಬೈಕ್ ಹಾಗೂ ಜೋಡೆತ್ತಿನ ಗಾಡಿ ಓಡಿಸುವ ಮೂಲಕ ಮತದಾರರ ಗಮನ ಸೆಳೆದರು. ಸಚಿವ ಪುಟ್ಟರಾಜು, ಸ್ಥಳೀಯ ಜೆಡಿಎಸ್ ಮುಖಂಡರು ಸಾಥ್ ನೀಡಿದರು. ಹೊಳಲುವಿನಲ್ಲಿ ಪ್ರಚಾರ ನಡೆಸುತ್ತಿದ್ದ ನಿಖೀಲ್‌ಗೆ ಅಭಿಮಾನಿಯೊಬ್ಬ ಮುತ್ತು ಕೊಟ್ಟಿದ್ದು ವಿಶೇಷವಾಗಿತ್ತು. ಮದ್ದೂರು ತಾಲೂಕಿನ ವಿವಿಧೆಡೆ ಪುತ್ರನ ಪರ ಪ್ರಚಾರ ನಡೆಸಿದ ಅನಿತಾ ಕುಮಾರಸ್ವಾಮಿ, ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿಗೆ ನಿಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿರುವಂತೆ ನಿಖೀಲ್‌ಗೂ ಸ್ಥಾನ ನೀಡಬೇಕೆಂದು ಮನವಿ ಮಾಡಿದರು.