Advertisement

ಲಂಡನ್‌ ಶೂಟ್‌,ಡಾನ್‌ ಲುಕ್, ಖ್ಯಾತ ನಟಿ ಎಂಟ್ರಿ.. ʼಟಾಕ್ಸಿಕ್‌ʼ ಲೇಟೆಸ್ಟ್‌ ಅಪ್ಡೇಟ್‌ ಔಟ್

10:58 AM Jun 15, 2024 | Team Udayavani |

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ ಚಿತ್ರದ ಮೂಲಕ ಮತ್ತೊಮ್ಮೆ ಪ್ಯಾನ್‌ ಇಂಡಿಯಾದಲ್ಲಿ  ಸುದ್ದಿಯಲ್ಲಿದ್ದಾರೆ.

Advertisement

ಚಿತ್ರದಲ್ಲಿ ಕರೀನಾ ಕಪೂರ್, ಶಾರುಖ್ ಖಾನ್,ಕಿಯಾರಾ ಅಡ್ವಾಣಿ ಮುಂತಾದ ಖ್ಯಾತ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಚರ್ಚೆ ಆಗಿತ್ತು. ‘ಟಾಕ್ಸಿಕ್’ ಚಿತ್ರದ ಶೂಟಿಂಗ್ ಲೋಕೇಶನಗ ನಲ್ಲಿ ಯಶ್ ನಿಂತಿರುವ ಫೋಟೋಗಳು ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಇದೀಗ ಚಿತ್ರದ ಬಗ್ಗೆ ಲೇಟೆಸ್ಟ್ ಅಪ್ಡೇಟ್ ಗಳು ಹೊರಬಿದ್ದಿವೆ.

“ಲೇಡಿ ಸೂಪರ್ ಸ್ಟಾರ್‌ ನಯನತಾರಾ ಯಶ್‌ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಭಾರತ ಹಾಗೂ ಲಂಡನ್‌ ನಲ್ಲಿ ಒಟ್ಟು 200 ದಿನಗಳ ಕಾಲ ʼಟಾಕ್ಸಿಕ್‌ʼ ಚಿತ್ರೀಕರಣ ನಡೆಯಲಿದೆ.  ಇದರಲ್ಲಿ ಕನಿಷ್ಠ 150 ದಿನಗಳ ಚಿತ್ರೀಕರಣ ಲಂಡನ್‌ ಸುತ್ತಮುತ್ತ ನಡೆಯಲಿದೆ. ಇದಕ್ಕಾಗಿ ಚಿತ್ರತಂಡದ ಎಲ್ಲರೂ ಲಂಡನ್‌ ಪಯಣ ಬೆಳಸಲಿದೆ. ಚಿತ್ರದ ಪ್ರಮುಖ ದೃಶ್ಯಗಳು ಲಂಡನ್‌ ನಲ್ಲೇ ಚಿತ್ರೀಕರಣಗೊಳ್ಳಲಿದೆ” ಎಂದು ಆಪ್ತ ಮೂಲಗಳು ತಿಳಿಸಿರುವುದಾಗಿ ʼಪಿಂಕ್‌ ವಿಲ್ಲಾʼ ವರದಿ ಮಾಡಿದೆ.

ಸಿನಿಮಾದಲ್ಲಿ ಯಶ್‌ ʼಕೆಜಿಎಫ್‌ʼ ಗಿಂತ ವಿಭಿನ್ನ ಲುಕ್‌ ನಲ್ಲಿ  ಕಾಣಿಸಿಕೊಳ್ಳಲಿದ್ದಾರೆ. ಯಶ್‌ ಸ್ಟೈಲಿಸ್ಟ್ ಡಾನ್‌ ಅವತಾರದಲ್ಲಿ‌ ಕಾಣಿಸಿಕೊಳ್ಳಲಿದ್ದಾರೆ. “ಅಂಡರ್‌ವರ್ಲ್ಡ್ ಡಾನ್” ಲುಕ್‌  ನೆಟ್‌ ಫ್ಲಿಕ್ಸ್ ನ ʼಪೀಕಿ ಬ್ಲೈಂಡರ್‌ʼನಂತೆ ಇರಲಿದೆ ಎಂದು ವರದಿ ತಿಳಿಸಿದೆ.

ಪ್ಯಾನ್‌ ಇಂಡಿಯಾ ಚಿತ್ರದಲ್ಲಿ ಯಶ್‌, ನಯನತಾರಾ ಜೊತೆ ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

Advertisement

ಗೋವಾ ಡ್ರಗ್ಸ್‌ ಮಾಫಿಯಾದ ಕಥೆಯನ್ನೊಳಗೊಂಡಿರುವ ʼಟಾಕ್ಸಿಕ್‌ 2025 ರ ಏ.10 ರಂದು ರಿಲೀಸ್‌ ಆಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next