ಬೈಲಹೊಂಗಲ: ಬೈಲವಾಡ ಗ್ರಾಪಂ ವ್ಯಾಪಿಯಲ್ಲಿ ಬರುವ ಯರಡಾಲ ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ.
ಸುಮಾರು 4500 ಜನಸಂಖ್ಯೆ ಹೊಂದಿದ ಈ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಇದೆ.
Advertisement
ನೀರಿಗಾಗಿ ಮೈಲುಗಟ್ಟಲೇ ಕೊಡ ಹಿಡಿದು ಅಲೆಯುವ ಪರಿಸ್ಥಿತಿ ಇದೆ. ಈ ಊರಿನಲ್ಲಿರುವ ಗಟಾರುಗಳು ಗಬ್ಬೆದ್ದು ನಾರುತ್ತಿವೆ. ಕೊಳಚೆ ನೀರು ಗಬ್ಬೆದ್ದು ನಾರುತ್ತಿದೆ. ರಸ್ತೆ ಅಗೆದು ಹಾಗೇ ಬಿಡಲಾಗಿದೆ. ಇಂಥ ಅನೇಕ ಸಮಸ್ಯೆಗಳ ಜತೆ ಜನರು ಬದುಕು ನಡೆಸಬೇಕಿರುವುದು ಅನಿವಾರ್ಯವಾಗಿದೆ.
ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಮನೆಗೆ ನೀರು ಯಾವಾಗ ಬರುವುದೋ ಎಂದು ಚಾತಕ ಪಕ್ಷಿಯಂತೆ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಮುಂದಿನ ತಿಂಗಳು ಗ್ರಾಮದಲ್ಲಿ ಗ್ರಾಮದೇವಿ ಜಾತ್ರೆ ನಡೆಯಲಿದ್ದು, ಬಹುಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ ಆಡಳಿತ ಕೂಡಲೇ ಜೆಜೆಎಂ ಯೋಜನೆ ಪೂರ್ಣಗೊಳಿಸಿ ಜನರಿಗೆ ಸಮರ್ಪಕ ನೀರೊದಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Related Articles
ಎದುರಾದ ಕಾರಣ ವಿಳಂಬವಾಗಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗುವುದು.
ಶಿವನಗೌಡಾ ಪಾಟೀಲ, ಸಹಾಯಕ ಅಭಿಯಂತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಬೈಲಹೊಂಗಲ
Advertisement
ಯರಡಾಲ ಗ್ರಾಮವು ಹಲವು ವರ್ಷಗಳಿಂದ ಕುಡಿಯುವ ನೀರಿನ ಬವಣೆ ಎದುರಿಸುತ್ತಿದ್ದು ಜಲ ಜೀವನ ಮಿಷನ್ ನನೆಗುದಿಗೆ ಬಿದ್ದ ಕಾರಣ ಜನರು ಸಂಕಷ್ಟ ಎದುರಿಸಬೇಕಿದೆ. ಬೇಗನೆ ಮನೆಗಳಿಗೆ ನೀರು ಹರಿಸಬೇಕಿರುವುದು ಅವಶ್ಯವಾಗಿದೆ.*ಶ್ರೀಶೈಲ ಮಲ್ಲಪ್ಪ ರಾಜಗೋಳಿ,
ಸಾಮಾಜಿಕ ಕಾರ್ಯಕರ್ತ, ಯರಡಾಲ.