Advertisement

ಯಮುನೋತ್ರಿ ರೋಪ್ ವೇಗೆ ಹಸಿರು ನಿಶಾನೆ: 5 ಗಂಟೆ ಪ್ರಯಾಣಕ್ಕೆ ಕೇವಲ 10 ನಿಮಿಷ ಸಾಕು!

01:12 PM Feb 15, 2023 | Team Udayavani |

ಡೆಹ್ರಾಡೂನ್(ಉತ್ತರಾಖಂಡ್): ಸುಮಾರು ಒಂದು ದಶಕಗಳ ವಿಳಂಬದ ನಂತರ ಯಮುನೋತ್ರಿ ಯಾತ್ರಾರ್ಥಿಗಳಿಗೆ ಖುಷಿ ಸುದ್ದಿಯೊಂದು ಹೊರಬಿದ್ದಿದ್ದು, ಯಮುನೋತ್ರಿ ದೇಗುಲಕ್ಕೆ ರೋಪ್ ವೇ ನಿರ್ಮಿಸುವ ಪ್ರಸ್ತಾವನೆಗೆ ಕೊನೆಗೂ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದಾಗಿ ಬುಧವಾರ (ಫೆ.15) ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Advertisement

ಇದನ್ನೂ ಓದಿ:ಹಾರ್ದಿಕ್‌ ಪಾಂಡ್ಯಾ- ನತಾಶಾ ಪುನರ್‌ ವಿವಾಹ: ಜೋಡಿಯ ಡ್ಯಾನ್ಸ್‌ ಸ್ಟೆಪ್‌ ಸಖತ್‌ ವೈರಲ್‌

ಯಮುನೋತ್ರಿ ದೇಗುಲ ಹಾಗೂ ಖಾರ್ಸಾಲಿ ಗ್ರಾಮ ಸಂಪರ್ಕಿಸುವ ಯೋಜನೆಯ ಅಭಿವೃದ್ಧಿಗಾಗಿ ಸರ್ಕಾರ ಶೀಘ್ರದಲ್ಲೇ 3.8 ಹೆಕ್ಟೇರ್ ಭೂಮಿಯನ್ನು ವರ್ಗಾಯಿಸಲಿದೆ. 3.7 ಕಿಲೋ ಮೀಟರ್ ಉದ್ದದ ರೋಪ್ ವೇ ನಿರ್ಮಾಣದಿಂದ 5 ಗಂಟೆಗಳ ಪ್ರಯಾಣದ ಸಮಯ ಕೇವಲ 10 ನಿಮಿಷಗಳಲ್ಲೇ ಕ್ರಮಿಸಬಹುದಾಗಿದೆ ಎಂದು ವರದಿ ವಿವರಿಸಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ, ಯೋಜನೆಯ ನಿರ್ಮಾಣ ಕಾರ್ಯ ಬೇಸಿಗೆಯಲ್ಲಿ ಪ್ರಾರಂಭವಾಗಲಿದ್ದು, ಎರಡು ವರ್ಷಗಳಲ್ಲಿ ರೋಪ್ ವೇ ನಿರ್ಮಾಣ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಇದು ಯಾತ್ರಾರ್ಥಿಗಳಿಗೆ, ವಿಶೇಷವಾಗಿ ವಯಸ್ಸಾದವರಿಗೆ ಪರ್ತತದ ತುದಿ ಏರಲು 5 ಕಿಲೋ ಮೀಟರ್ ಚಾರಣ ತಪ್ಪಿಸಲು ಸಹಾಯಕವಾಗಲಿದೆ.

ಕಳೆದ ವರ್ಷ ಯಮುನೋತ್ರಿಯ ಪುಣ್ಯಕ್ಷೇತ್ರದ ಯಾತ್ರೆಯಲ್ಲಿ 81 ಯಾತ್ರಿಕರು ದುರಂತ ಅಂತ್ಯ ಕಂಡಿದ್ದರು ಎಂಬುದನ್ನು ನೆನಪಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಯಮುನೋತ್ರಿಗೆ ರೋಪ್ ವೇ ಬೇಕೆಂಬ ಬಹುಕಾಲದ ಬೇಡಿಕೆ ಈಡೇರುತ್ತಿರುವುದರ ಬಗ್ಗೆ ದೇಗುಲದ ಅರ್ಚಕರು ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಸಾಮಾಜಿಕ ಕಾರ್ಯಕರ್ತ ಸೂರತ್ ರಾವಲ್, ಯಮುನೋತ್ರಿಗೆ ರೋಪ್ ವೇ ನಿರ್ಮಿಸುವ ಪ್ರಯತ್ನ 2006ರಲ್ಲಿ ಪ್ರಾರಂಭವಾಗಿತ್ತು. ಆದರೆ ಕಳೆದ 16 ವರ್ಷಗಳಿಂದ ಸರ್ಕಾರದ ಕಡತ ಧೂಳು ತಿನ್ನುತ್ತಾ ಬಿದ್ದಿತ್ತು ಎಂದು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next