ನವದೆಹಲಿ: ಕಳೆದ ಎರಡು ದಿನಗಳಿಂದ ಉತ್ತರ ಭಾರತದಲ್ಲಿ ಭಾರಿ ಮಳೆಯಾಗುತ್ತಿದ್ದು ಇಲ್ಲಿನ ಜೀವ ನದಿಯಾದ ಯಮುನೆ ಮತ್ತೆ ತನ್ನ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.
ಭಾರಿ ಮಳೆಗೆ ದೆಹಲಿಯ ಸುತ್ತಮುತ್ತಲ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ಜನಜೀವನ ಮತ್ತೆ ಅಸ್ತವ್ಯಸ್ತಗೊಂಡಿದೆ.
ಮಳೆಯ ಬಳಿಕ ಯಮುನಾ ನದಿಯ ನೀರಿನ ಮಟ್ಟವು ಮಂಗಳವಾರ 205.33 ಮೀಟರ್ ಅಪಾಯದ ಮಟ್ಟವನ್ನು ದಾಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೇಂದ್ರ ಜಲ ಆಯೋಗದ ಅಧಿಕಾರಿಯೊಬ್ಬರ ಪ್ರಕಾರ, ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಹಳೆಯ ರೈಲ್ವೆ ಸೇತುವೆಯ ನೀರಿನ ಮಟ್ಟವು 204.50 ಮೀಟರ್‌ನ ಎಚ್ಚರಿಕೆಯ ಗಡಿಯನ್ನು ದಾಟಿತ್ತು ಮತ್ತು ರಾತ್ರಿ 10 ಗಂಟೆ ವೇಳೆಗೆ 205.39 ಮೀಟರ್‌ಗೆ ಏರಿಕೆಯಾಗಿದ್ದು, ಬೆಳಗ್ಗೆ 5 ಗಂಟೆಗೆ ನೀರಿನ ಮಟ್ಟ 205.50 ಮೀಟರ್ ತಲುಪಲಿದ್ದು, ಹಗಲಿನಲ್ಲಿ ಮತ್ತಷ್ಟು ಏರಿಕೆಯಾಗುವ ಮುನ್ಸೂಚನೆ ಇದೆ ಎಂದು ಹೇಳಿದ್ದಾರೆ.
ಹರಿಯಾಣದ ಯಮುನಾನಗರ ಜಿಲ್ಲೆಯ ಹತ್ನಿಕುಂಡ್ ಬ್ಯಾರೇಜ್‌ನಲ್ಲಿ ಹರಿವಿನ ಪ್ರಮಾಣ ರಾತ್ರಿ 9 ಗಂಟೆಗೆ ಸುಮಾರು 27,000 ಕ್ಯೂಸೆಕ್ಸ್ ಇತ್ತು ಎಂದು ಹೇಳಲಾಗಿದೆ. ಸದ್ಯ ಯಾವುದೇ ಪ್ರದೇಶದ ಜನರನ್ನು ಸ್ಥಳಾಂತರಿಸುವ ಕಾರ್ಯ ನಡೆದಿಲ್ಲ ಅಂತಹ ಸಂದರ್ಭ ಬಂದಲ್ಲಿ ಮುಂಜಾಗ್ರತಾ ಕ್ರಮವಾಗಿ ಜನರನ್ನು ಸ್ಥಳಾಂತರಿಸುವ ಕಾರ್ಯ ನಡೆಸಲಾಗುವುದು ಎಂದು ಹೇಳಲಾಗಿದೆ.
ಇದನ್ನೂ ಓದಿ: Nehru Memorial Museum: ನೆಹರು ಸ್ಮಾರಕ ಇನ್ನು ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ…