Advertisement
ಅಟೋಮೆಟಿಕ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್, ಸೈಡ್ ಸ್ಟಾಂಡ್ ಇಂಜಿನ್ ಕಟ್‌ಆಫ್ ಯುನಿಫೈ ಲಡ್ ಬ್ರೇಕ್ ಸಿಸ್ಟಂ ಸೇರಿ ಅನೇಕ ಫೀಚರ್‌ಗಳು ಇವೆ.ಈಸ್ಕೂಟರ್‌ಗಳ ಬೆಲೆ 76,830 ರೂಪಾಯಿಯಿಂದ ಆರಂಭವಾಗುತ್ತದೆ. ಕೇವಲ 999 ರೂ. ಡೌನ್ ಪೇಮೆಂಟ್ ಮಾಡುವ ಮೂಲಕ ಸ್ಕೂಟರ್ ಖರೀದಿಸಬಹುದಾಗಿದೆ.
ತನ್ನ ಬಳಕೆದಾರರಿಗೆ ಖಾಸಗಿತನವನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಿಟ್ಟಿರುವ ವಾಟ್ಸ್‌ಆ್ಯಪ್, ಬಳಕೆದಾರರ ಚಾಟಿಂಗ್ ಸಂದೇಶಗಳು ಹಾಗೂ ಮತ್ತಿತರ ಮಲ್ಟಿಮೀಡಿಯಾ ಸಂದೇಶಗಳ ಬ್ಯಾಕಪ್‌ಗ್ೂ “ಎಂಡ್-ಟು-ಎಂಡ್’ ಎನ್ ಕ್ರಿಪ್ಷನ್ ನೀಡಲಾಗಿದೆ. ಈವರೆಗೆ, ಚಾಟಿಂಗ್ ಸಂದೇಶಗಳು ಹಾಗೂ ಮಲ್ಟಿಮೀಡಿಯಾ ಸಂದೇಶಗಳಿಗೆ ಮಾತ್ರ “ಎಂಡ್-ಟು-ಎಂಡ್’ ಎನ್‌ಕ್ರಿಪ್ಷನ್ ಭದ್ರತೆ ನೀಡಲಾಗಿತ್ತು. ಆದರೆ, ವಾಟ್ಸ್‌ಆ್ಯಪ್ ಬಳಕೆದಾರ ತನ್ನ ಮೊಬೈಲ್ ಬದಲಾಯಿಸುವಾಗ ಪಡೆಯುವ ಸಂದೇಶಗಳ ಬ್ಯಾಕಪ್‌ಗೆ ಯಾವುದೇ ಸುರಕ್ಷತೆಯಿರಲಿಲ್ಲ. ಇದನ್ನು ಅಂತರ್ಜಾಲದಲ್ಲಿ ಯಾರಾದರೂದುರ್ಬಳಕೆ ಮಾಡಿಕೊಳ್ಳುವಂಥ ಅಪಾಯವನ್ನು ತಪ್ಪಿಸಲುಈ ರೀತಿಯ “ಎಂಡ್-ಟು-ಎಂಡ್’ ಎನ್‌ಕ್ರಿಪ್ಷನ್ ಒದಗಿಸಲಾಗಿದೆ ಎಂದು ವಾಟ್ಸ್‌ಆ್ಯಪ್ ತಿಳಿಸಿದೆ.