Advertisement

ಸಂಚಾರಿ ನಿಯಮ ಪಾಲನೆಗೆ ಯಮ ವೇಷಧಾರಿಯ ಜಾಗೃತಿ

11:41 AM Jul 22, 2018 | |

ಮಹಾನಗರ: ಕೆಂಪು ದೀಪ ಉರಿದಾಗ ರಸ್ತೆ ದಾಟಬೇಡಿ..ಸಂಚಾರಿ ಜಾಗೃತೆಯ ಕುರಿತು ಅಲ್ಲಲ್ಲಿ ಅಳವಡಿಸಿರುವ ಬೋರ್ಡ್‌ಗಳನ್ನು ಸರಿಯಾಗಿ ಗಮನಿಸಿ ಚಲಿಸಿ..ಒಟ್ಟಾರೆ ನಿಯಮ ಪಾಲನೆ ಮಾಡಿ..ಇಲ್ಲವಾದಲ್ಲಿ ಯಮ ಕಾಯುತ್ತಲೇ ಇರುತ್ತಾನೆ..ಹೀಗೊಂದು ಸಂದೇಶ ಹೊತ್ತ ವಿಶಿಷ್ಟ ಕಾರ್ಯಕ್ರಮವನ್ನು ನಗರದ ಪಶ್ಚಿಮ ಸಂಚಾರಿ ವಿಭಾಗದ ಪೊಲೀಸರು ಮಾಡುತ್ತಿದ್ದಾರೆ.

Advertisement

ಸಂಚಾರಿ ನಿಯಮ ಪಾಲನೆ ಬಗ್ಗೆ ಅರಿವು ಮೂಡಿಸಲು ರಸ್ತೆಯಲ್ಲೇ ಓಡಾಡಿದ ಯಮ ವೇಷಧಾರಿ ಹೆಲ್ಮೆಟ್‌ ಹಾಕದ‌ವರು, ತ್ರಿಬಲ್‌ ರೈಡಿಂಗ್‌ ಮಾಡಿದವರು, ರೆಡ್‌ ಸಿಗ್ನಲ್‌ ಆರುವ ಮೊದಲೇ ವಾಹನ ಚಲಾಯಿಸಿದವರಿಗೆ ನಿಯಮ ಪಾಲನೆಯ ಎಚ್ಚರಿಕೆ ನೀಡಿ ಗಮನ ಸೆಳೆದರು. ಯಮನಂತೆಯೇ ಗಧೆ ಹಿಡಿದು, ವೇಷ ಧರಿಸಿಕೊಂಡ ಈ ವ್ಯಕ್ತಿಯ ಚಲನವಲನ ನಗರದಲ್ಲಿ ಕುತೂಹಲಕ್ಕೆ ಕಾರಣವಾಯಿತು.

ಸಂಚಾರ ನಿಯಮ ಉಲ್ಲಂಘನೆ ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಗರ ಸಂಚಾರಿ ಪಶ್ಚಿಮ ಪೊಲೀಸ್‌ ಠಾಣೆಯು ಜುಲೈ ಮಾಸವನ್ನು ಸಂಚಾರ ನಿಯಮ ತಿಳಿವಳಿಕೆ ಮಾಸ ಎಂಬುದಾಗಿ ಆಚರಿಸುತ್ತಿದೆ. ಈಗಾಗಲೇ ಸಂಚಾರಿ ನಿಯಮ ಪಾಲನೆ ಸಂಬಂಧ ಶಾಲಾ ಕಾಲೇಜುಗಳಲ್ಲಿ ಮಾಹಿತಿ, ಬೀದಿನಾಟಕ ಆಯೋಜಿಸಲಾಗಿದೆ. ಅದರ ಭಾಗವಾಗಿ ಯಮ ವೇಷಧಾರಿಯ ಮುಖಾಂತರ ಅರಿವು ಮೂಡಿಸುವ ಕೆಲಸವನ್ನು ಶನಿವಾರ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next