Advertisement

ಅಧ್ವಾನ ಸೃಷ್ಟಿಸಿದ ನಗರೋತ್ಥಾನ ಯೋಜನೆ

08:03 PM Mar 05, 2020 | Naveen |

ಯಲ್ಲಾಪುರ: ವಾಸ್ತವವಾಗಿ ಇಲ್ಲಿಯ ಪಟ್ಟಣ ಪಂಚಾಯತ ಎಂದರೆ ಹೇಳುವವರು ಕೇಳುವವರು ಯಾರೂ ಇಲ್ಲದ ಆಡಳಿತ ವ್ಯವಸ್ಥೆಯಾಗಿದೆ. ಸರಕಾರದಿಂದ ಕೋಟ್ಯಾಂತರ ಹಣ ಬಂದರೂ ಜನರಿಗೆ ಮಾತ್ರ ಯಾವ ಮಾಹಿತಿಯೂ ಸಿಗುತ್ತಿಲ್ಲ. ರಾತ್ರಿ ಬೆಳಗಾಗುವುದರೊಳಗೆ ರಸ್ತೆ ಪಕ್ಕ, ನಡು ರಸ್ತೆ ಅಗೆಯುತ್ತಾರೆ.

Advertisement

ಎಲ್ಲೋ ರಸ್ತೆಯೇ ಆಗಿಬಿಡುತ್ತದೆ. ಈ ಬಗ್ಗೆ ಪ್ರಶ್ನಿಸಿದರೆ ಅವರಿಗೆ ಸಂಬಂಧವೇ ಇಲ್ಲವೆನ್ನುತ್ತಾರೆ. ಮಧ್ಯಂತರದಲ್ಲಿ ಒಮ್ಮೆ ಬಂದ ಈ ನಗರೋತ್ಥಾನ ಕಾಮಗಾರಿ ಸೃಷ್ಟಿಸಿದ್ದೇ ಅಧ್ವಾನಗಳನ್ನು ಮಾತ್ರ. ಈ ಕಾಮಗಾರಿ ಹೆಸರಲ್ಲಿ ಹಣ ಬರತೊಡಗಿತೋ ಅಂದಿನಿಂದ ನಗರದ ಸೌಂದರ್ಯ ಅವನತಿ. ಇದ್ದ ರಸ್ತೆ ಗಟಾರಗಳು ಹಾಳಾದವು.
ಅಭಿವೃದ್ಧಿಗಿಂತ ಅಧ್ವಾನವೇ ಆಗಿದ್ದೇ ಹೆಚ್ಚಾದವು. ಈ ನಗರೋತ್ಥಾನ ಕಾಮಗಾರಿ ಮಾಡಿದವರು ಇಲ್ಲಿಯವರ ನಿಯಂತ್ರಣದಲಿಲ್ಲ. ವಿಳಾಸವೂ ಸಿಗಲ್ಲ ಅಂತಹ ಸ್ಥಿತಿ.

ಉತ್ತಮ ಕಾಂಕ್ರೀಟ್‌ ರಸ್ತೆಯನ್ನು ಪೈಪ್‌ ಮಾರ್ಗಕ್ಕಾಗಿ ಮಾರು ಮಾರಿಗೆ ಅಗೆದಿದ್ದಾರೆ. ಒಳ್ಳೆಯ ರಸ್ತೆ ಅಂದುಕೊಂಡರೆ ಈಗ ಅದರಲ್ಲಿ ಬಿದ್ದೆದ್ದು ಹೋಗಬೇಕಾದ ಸ್ಥಿತಿ. ಸರಿಪಡಿಸಲು
ದೂರಿಕೊಂಡರೆ ಆ ಕಾಮಗಾರಿ ತಮ್ಮದಲ್ಲ ಎಂಬ ಉತ್ತರ ಪಪಂನಿಂದ ಸಿದ್ಧ. ಹಣ ಈ ಯೋಜನೆ ಬರದಿರಲಿ ಎಂದು ಜನ ಪ್ರಾರ್ಥಿಸಿಕೊಳ್ಳುವ ಸ್ಥಿತಿ ಬಂದಿದೆ. ಕಳೆದೆರಡು ವರ್ಷದಿಂದ ಈ ಅಧ್ವಾನಗಳನ್ನು ಸರಿಪಡಿಸಲು ರಸ್ತೆ ಗಟಾರಗಳಿಗೆ ವಿಶೇಷ ಅನುದಾನಗಳನ್ನು ಹಾಕುವುದೇ ಪ.ಪಂನವರ ಕೆಲಸವಾಗಿದೆ. ಪ.ಪಂಗೆ ಏನಿಲ್ಲವೆಂದರೂ ಜಾತ್ರಾ ಅನುದಾನಗಳು ಮೂರು ವರ್ಷಕ್ಕೊಮ್ಮೆ, ಶಾಸಕರ ವಿಶೇಷ ಅನುದಾನ, ಎಸ್‌ ಎಫ್‌ಸಿ ಕಾಯಂ ಅನುದಾನ ಹದಿನಾಲ್ಕನೇ ಹಣಕಾಸು ಹೀಗೆ ಅನುದಾನಗಳು ಹರಿದು ಬರುತ್ತಲೆ ಇದೆ. ಈಗಂತು ಸಚಿವರದ್ದೇ ಪಪಂ ಇಷ್ಟು ಅನುದಾನಗಳಲ್ಲಿ ಯಾವುದೇ ಒಂದು ಕಾಮಗಾರಿ ಸಮರ್ಪಕವಾಗಿದ್ದರೆ, ಯೋಗ್ಯವಾಗಿದ್ದರೆ ಸಾರ್ವಜನಿಕರ ಬೇಡಿಕೆಯಂತೆ ಇದೆ ಎಂಬುದನ್ನು ದುರ್ಬಿನು ಹಿಡಿದು ಹುಡಕಬೇಕಾಗುತ್ತದೆ.

ಸ್ಲ್ಯಾಬ್ ತರಹದಲ್ಲೆ ಕಾಂಕ್ರೀಟ್‌ ರಸ್ತೆಗಳನ್ನು ಮಾಡಬೇಕಿದ್ದರೂ
ನಗರ ಹೃದಯ ಭಾಗದಲ್ಲೇ ಕಂದಾಯ ತೋಟಗಾರಿಕೆ ಇಲಾಖೆಗಳಿಗೆ ಹೋಗುವ ರಸ್ತೆಗಳನ್ನು ಮನಸಿಗೆ ತೋಚಿದ ಹಾಗೇ ಮಾಡುತ್ತಿರುವುದು ತಾಜಾ ಉದಾಹರಣೆಯಾಗಿದೆ. ಬೆಲ್‌ ರಸ್ತೆಯ ಪಕ್ಕಕ್ಕೆ ಗಟಾರ್‌, ಸ್ಲ್ಯಾಬ್ ಕವರಿಂಗ್‌ ಅಳವಡಿಸಿ ಫೆವರ್ಸ್‌ ಹಾಕಿ ಫುಟ್‌ಪಾತ್‌ ನಿರ್ಮಾಣದ 97 ಲಕ್ಷ ವೆಚ್ಚದ ಕಾಮಗಾರಿಯಲ್ಲಿ ಅರ್ಧದಷ್ಟು ಕೆಲಸವನ್ನೂ ಮಾಡಿಲ್ಲ. ಆದರೆ ವಿಶೇಷ ಅನುದಾನದಲ್ಲಿ 85 ಲಕ್ಷ ಖರ್ಚು ಕಾಣಿಸಿದೆ. ಯಾರಿಗೆ ದೂರಿಯೂ ಈ ತನಕ ಪ್ರಯೋಜನವಾಗಿಲ್ಲ. ಇಂತಹ ಹತ್ತಾರು ಅಧ್ವಾನಗಳು ಪ್ರತಿ ಕಾಮಗಾರಿಯಲ್ಲೂ ಇದೆಯೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

2019-20 ರಲ್ಲಿ ಮೂರು ಕೋಟಿಯಷ್ಟು ಅನುದಾನ ಲಭ್ಯವಿದ್ದು ರಸ್ತೆ ಚರಂಡಿ ಗಟಾರದ ಕಮಗಾರಿ ಕೈಗೆತ್ತಿಕೊಂಡಿದೆ. ಅನುದಾನ ವಾಪಸ್ಸಾಗದ ರೀತಿಯಲ್ಲಿ ಯೋಜನೆ ಸಿದ್ಧಗೊಂಡಿದ್ದು ಹೆಚ್ಚಿನ ಕಾಮಗಾರಿ ಪ್ರಗತಿಯಲ್ಲಿದೆ ಎಂಬುದು ಮುಖ್ಯಾಧಿಕಾರಿ ಅರುಣ ನಾಯ್ಕ ಹೇಳಿಕೆ. ನಗರ ಅಭಿವೃದ್ಧಿಗೆ ವರ್ಷದಿಂದ ವರ್ಷಕ್ಕೆ ಹಣ ಬರುವುದಕ್ಕೇನೂ ಕೊರತೆಯಾಗುತ್ತಿಲ್ಲ. ಯಾವ ಕಾಮಗಾರಿಯನ್ನೂ ಪೂರ್ತಿಗೊಳಿಸಿ ಸರಿಪಡಿಸಿದ ಧಾಕಲೆ ಪ.ಪಂ ನ ಇತ್ತೀಚಿನ ಇತಿಹಾಸದಲ್ಲೇ ಇಲ್ಲವೆನ್ನಬಹುದಾಗಿದೆ. ಶಾಸಕರಾಗಿದ್ದಾಗ ಶಿವರಾಮ ಹೆಬ್ಟಾರವರು ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕಾಗಿ ಎರಡುವರೇ ಕೋಟಿ ಅನುದಾನ ತಂದಿದ್ದರೂ ಅದು ಸಾಧ್ಯವಾಗದೇ ಬೇರೆ ಯೋಜನೆಗೆ ಕ್ರಿಯಾ ಯೋಜನೆ ರೂಪಿಸಿ ಅನುಮೋದನೆಗೆ ಹೋಗಿದೆ. ಹೀಗೆ ಹಣ ಎಷ್ಟೇ ಬಂದಿದ್ದರೂ ಸದ್ವಿನಿಯೋಗದ ಬಗ್ಗೆ ಪ್ರಶ್ನೆ ಮಾಡಿ ಅಭಿವೃದ್ಧಿ ಮಾಡಿಸುವ ಮನೋಭಾವದವರು ಇಲ್ಲದಾಗಿದೆ.

Advertisement

ಅನುದಾನ ವಾಪಸ್ಸಾಗದಿದ್ದರು ಪೋಲಾಗಿದ್ದೇ ಜಾಸ್ತಿ. ಬೇಡ್ತಿ ಶುದ್ಧ
ಕುಡಿಯುವ ನೀರು 25 ಕೋಟಿ ರೂ ಗಳ ಯೋಜನೆ ಹಳ್ಳ ಹಿಡಿದಿದೆ. ನಯಾಪೈಸೆ ಉಪಯೋಗವಿಲ್ಲದೇ ಕೋಟ್ಯಾಂತರ ರೂ. ಸರಕಾರದ ಬೊಕ್ಕಸಕ್ಕೆ ಹಾನಿ ಮಾಡಿದೆ. ಪ.ಪಂ.ಗೆ ಜನಪ್ರತಿನಿಧಿಗಳಿಗೆ ಅಧಿಕಾರವಿಲ್ಲದ ಕಾರಣ ಅಧಿಕಾರಿಗಳ ದರಬಾರು, ಶಾಸಕ ಸಚಿವರಿಗೆ ತೋಚಿದಲ್ಲಿ ಕೆಲಸ. ಈ ಮಧ್ಯೆ ಜನ ಬೇಡಿಕೆಯಿದ್ದಲ್ಲಿ ಕೆಲಸವಿಲ್ಲ. ಕಳೆದ ವರ್ಷ ಮಾಡಿದ ಫುಟ್‌ ಪಾತ್‌ ಈಗಲೇ ಕಿತ್ತು ಬಿದ್ದಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಅಪಾಯದ ಪರಿ ಕೇಳುವವರಿಲ್ಲವಾಗಿದೆ. ಹೆಸರು ಮಾತ್ರ ನಗರೋತ್ಥಾನ. ಯಲ್ಲಾಪುರ ನಗರವಾಗುತ್ತಿದೆ ನರಕಸ್ಥಾನ ಎಂಬುದು ಕಟುಸತ್ಯ.

„ನರಸಿಂಹ ಸಾತೊಡ್ಡಿ.

Advertisement

Udayavani is now on Telegram. Click here to join our channel and stay updated with the latest news.

Next