Advertisement
ಹಾವೇರಿ, ಚಿತ್ರದುರ್ಗ 2, ಕಡೂರು, ತೀರ್ಥಹಳ್ಳಿ, ದೇವನಹಳ್ಳಿ, ಮೈಸೂರು, ಸುಳ್ಯ, ಪುತ್ತೂರು, ಯಾದಗಿರಿ ತಲಾ 1, ಬೆಂಗಳೂರು 3, ಅತಿಹೆಚ್ಚು 8 ಉತ್ತರಕನ್ನಡದಿಂದ ಅದರಲ್ಲಿ ಕುಮಟಾದಿಂದ 4, ಇವುಗಳಲ್ಲಿ 3 ಒಮ್ಮೆ ಹೃದಯಾಘಾತವಾದ ಪ್ರಕರಣವಾಗಿದ್ದು ಅವರಿಗೆ ಕೂಡಲೇ ಮತ್ತು ಉಳಿದವರಿಗೆ ತಮಗೆ ಹತ್ತಿರದ ಊರಿನ ಹೃದಯ ತಜ್ಞರಲ್ಲಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಲಾಗಿದೆ. ಹೃದಯದ ಸಮಸ್ಯೆ ಕುರಿತು ಗೊಂದಲದಲ್ಲಿದ್ದ ಇವರಿಗೆ ಸರಿಯಾಗಿ ಮಾರ್ಗದರ್ಶನ ನೀಡಲಾಗಿದೆ. ಇದು ಹೃದಯ ಕಾಯಿಲೆಯ ಗಂಭೀರತೆ ಮತ್ತು ಸೂಕ್ತ ಚಿಕಿತ್ಸೆಯ ಅಲಭ್ಯತೆಯನ್ನು ತೋರಿಸುತ್ತಿದ್ದು ರೋಟರಿ, ಲಯನ್ ಮೊದಲಾದ ಸೇವಾ ಸಂಸ್ಥೆಯಲ್ಲಿರುವ ವೈದ್ಯರು ‘ಸಿಎಡಿ’ ಎಂಬ ತಮ್ಮ ವೈದ್ಯ ಗ್ರೂಪ್ ಬಳಗ ರಚಿಸಿಕೊಂಡು ಇಂತಹ ಸಲಹೆ ನೀಡಿ, ಜೀವ ಉಳಿಸಬಹುದು ಎಂಬುದು ಡಾ. ಕಾಮತ್‌ರ ಆಲೋಚನೆ.
Related Articles
Advertisement
ಮನೆ ಬಾಗಿಲಿಗೆ ಹೃದಯ ತಜ್ಞರು: ಆರೋಗ್ಯ ಪೂರ್ಣ ಯೋಜನೆಬಿಡುವಿಲ್ಲದೇ ದುಡಿಯುತ್ತಿರುವ ಹೃದಯ ತಜ್ಞ ಡಾ| ಪದ್ಮನಾಭ ಕಾಮತ್ ಭಾವಜೀವಿ, ಯಕ್ಷಗಾನ ಪ್ರೇಮಿ. ಹಳ್ಳಿಗಳಿಗೆ ಆಟಕ್ಕೆ ಹೋದಾಗ ಅಲ್ಲಿ ಕೆಲವರಿಗೆ ಹೃದಯಾಘಾತವಾಗಿರುವುದು ಅರಿಯದೆ, ವಿಳಂಬವಾಗಿ ಆಸ್ಪತ್ರೆಗೆ ಒಯ್ಯುವಾಗ ಮಧ್ಯದಲ್ಲಿ ಸಾವನ್ನಪ್ಪುವ ಪ್ರಕರಣಗಳನ್ನು ನೋಡಿ ಮನಕರಗಿದ ಕಾಮತರು ವಿಳಂಬ ತಪ್ಪಿಸಲು ಗ್ರಾಮೀಣ ಆಸ್ಪತ್ರೆಗಳಿಗೆ ಇಸಿಜಿ ಯಂತ್ರವನ್ನು ದಾನಿಗಳಿಂದ ಕೊಡಿಸಿ, ವಾಟ್ಸ್‌ಆ್ಯಪ್ ಮುಖಾಂತರ ವರದಿ ತರಿಸಿಕೊಂಡು ಸಲಹೆ ನೀಡುವುದನ್ನು ಸ್ನೇಹಿತರೊಂದಿಗೆ ಆರಂಭಿಸಿದರು. ಇದಕ್ಕೆ ಕಾರ್ಡಿಯಾಕ್ ಎಟ್ ಡೋರ್ ಸ್ಟೆಪ್ (ಮನೆ ಬಾಗಿಲಿಗೆ ಹೃದಯ ವೈದ್ಯರು) ಎಂದು ಹೆಸರಿಟ್ಟರು. ಇದು ಯಶಸ್ವಿಯಾಗಲು ಆರಂಭಿಸಿದಾಗ ಜನೌಷಧಿ ಕೇಂದ್ರ ಸಹಿತ ಸರ್ಕಾರಿ ಮತ್ತು ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ಉಪಕರಣ ಪೂರೈಸಿದರು. 10 ಜಿಲ್ಲೆಗಳಿಗೆ ಉಪಕರಣ ನೀಡಿದರು. ಉತ್ತಮ ಜನಸ್ಪಂದನೆ ಕೆಲವೆಡೆ, ಇನ್ನೂ ಕೆಲವೆಡೆ ನಿರ್ಲಕ್ಷ್ಯ. 175 ಉಪಕರಣ ವಿತರಿಸಿ ಆದ ಮೇಲೆ ಇದರ ಸಾಫಲ್ಯ ಸ್ಪಷ್ಟವಾಗಲಿಲ್ಲ. ಮಾರ್ಗ ಮಧ್ಯೆ ಸಾಯುವವರ ಸಂಖ್ಯೆ ನಿರೀಕ್ಷಿಸಿದಷ್ಟು ಕಡಿಮೆಯಾಗಲಿಲ್ಲ.