Advertisement
ಬೃಹತ್ ಗಾತ್ರದ ಹುಲಿ ರಸ್ತೆ ಬದಿಯಲ್ಲೇ ನಿಂತು ಕಾರಿನಲ್ಲಿದ್ದವರನ್ನು ನೋಡಿ ಘರ್ಜಿಸಿತೆನ್ನಲಾಗಿದ್ದು ಕಾರನ್ನು ಹಿಂಬಾಲಿಸಿದಂತೆ ಮಾಡಿದ ಹುಲಿ ನಂತರ ಕೆಲವೇ ಕ್ಷಣದಲ್ಲಿ ಕಾಡಿನ ಒಳಹೊಕ್ಕು ಹೋಗಿದೆ.
ವರ್ಷಕ್ಕೆ ಒಂದೆರಡು ಸಲ ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಬಾರೆಯ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ತೆರಳುವ ಉದ್ಯೋಗಿಗಳು ಹಾಗೂ ಈ ಭಾಗದಿಂದ ಯಲ್ಲಾಪರ,ಹುಬ್ಬಳ್ಳಿ ಹೋಗುವವರು ಇದೇ ಮಾರ್ಗದಲ್ಲಿ ಸಾಗುತ್ತಾರೆ. ಅವರಿಗೆ ಆಗಾಗ್ಗೆ ಹುಲಿ- ಚಿರತೆಗಳು ವಾಹನ ಸವಾರರಿಗೆ ಕಾಣಿಸಿಕೊಳ್ಳುತ್ತದೆ.