ಯಳಂದೂರು: ಬೆಳೆಗಳಿಗೆ ಶಾಸನ ಬದ್ಧ ದರವನ್ನುನಿಗದಿಪಡಿಸುವಂತೆ ವಿಧಾನಸಭೆಯಲ್ಲಿ ಧ್ವನಿ ಎತ್ತಲಿದ್ದೇನೆ ಎಂದು ಶಾಸಕ ಎನ್. ಮಹೇಶ್ ತಿಳಿಸಿದರು.
ತಾಲೂಕಿನ ಡಿ. ಕಂದಹಳ್ಳಿಯಲ್ಲಿ ಶುಕ್ರವಾರ ಸಮಗ್ರ ಕೃಷಿಅಭಿಯಾನ ಹಾಗೂ ಕಸಬಾ ಕೃಷಿ ಯಂತ್ರಧಾರೆ ಕೇಂದ್ರವನ್ನುಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ತಂದಿರುವಕೃಷಿ ಕಾಯ್ದೆಯಲ್ಲಿ ಕೆಲವು ಉತ್ತಮ ಅಂಶಗಳೂ ಇವೆ.ಇದರಿಂದ ರೈತರು ತಾವು ಬೆಳೆದ ಬೆಳೆಗಳನ್ನು ಎಲ್ಲಾದರೂಮಾರಾಟ ಮಾಡಬಹುದು. ಉತ್ಪಾದಕ ಹಾಗೂಮಾರಾಟಗಾರ ರೈತನೇ ಆದಾಗ ಹೆಚ್ಚಿನ ಆದಾಯಕಾಣಬಹುದು ಎಂದರು.ರೈತ ಸಂಘದಜಿಲ್ಲಾಧ್ಯಕ್ಷಹೊನ್ನೂರುಪ್ರಕಾಶ್‌ಮಾತನಾಡಿ,ಜಿಲ್ಲೆಯಲ್ಲಿ ರೈತರೇ ರಚಿಸಿಕೊಂಡಿರುವ “ನಮುª’ಬ್ರಾಂಡ್‌ನಲ್ಲಿಸಾವಯವ ಕೃಷಿ ಉತ್ಪನ್ನ ಮಾರಾಟವಾಗುತ್ತಿದ್ದು ಇದರಮಾರಾಟ ಮಳಿಗೆಗಳನ್ನು ಎಲ್ಲ ತಾಲೂಕುಗಳಿಗೂ ವಿಸ್ತರಿಸುವಯೋಜನೆ ಇದೆ. ರೈತರು ಹೆಚ್ಚು ಸಾವಯವ ಬೆಳೆಗಳನ್ನುಬೆಳೆಯಬೇಕು ಎಂದು ಮನವಿ ಮಾಡಿದರು.
ಜಂಟಿಕೃಷಿನಿರ್ದೇಶಕಎಚ್.ಟಿ.ಚಂದ್ರಕಲಾಮಾತನಾಡಿ,ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 23 ಬೆಳೆಗಳಿಗೆ ವಿಮಾಮೊತ್ತವನ್ನು ರೈತರು ಪಾವತಿಸಲು ಅವಕಾಶವಿದೆ ಎಂದರು.ಈ ವೇಳೆ ತಹಶೀಲ್ದಾರ್ ಜಯಪ್ರಕಾಶ್, ದುಗ್ಗಹಟ್ಟಿ ಗ್ರಾಪಂಅಧ್ಯಕ್ಷೆ ವಿಶಾಲಾಕ್ಷಿ, ಸದಸ್ಯ ಜವರಶೆಟ್ಟಿ, ಸಹಾಯಕ ನಿರ್ದೇಶಕಎನ್.ಜಿ. ಅಮೃತೇಶ್ವರ, ಕೃಷಿ ಅಧಿಕಾರಿ ವೆಂಕಟರಂಗಶೆಟ್ಟಿ, ಪಿ.ಮಾದೇಶ್, ನಾರಾಯಣಸ್ವಾಮಿ ಮತ್ತಿರರು ಉಪಸ್ಥಿತರಿದ್ದರು.