Advertisement

ಯಲಬುರ್ಗಾ: ರೈತನಿಗೆ ಭರವಸೆ ಮೂಡಿಸಿದ ಡ್ರ್ಯಾಗನ್‌ ಫ್ರೂಟ್‌

06:35 PM Jul 28, 2023 | Team Udayavani |

ಯಲಬುರ್ಗಾ: ಜೋಳ, ಸಜ್ಜೆ, ಮೆಕ್ಕೆಜೋಳ ದಂತಹ ಸಾಂಪ್ರದಾಯಿಕ ಬೆಳೆಗಳಿಂದ ಬೇಸತ್ತಿದ್ದ ರೈತರೊಬ್ಬರು ತೋಟಗಾರಿಕೆ
ಬೆಳೆಯಾದ ಡ್ರ್ಯಾಗನ್‌ ಫ್ರೂಟ್‌ ಬೆಳೆದು ಲಕ್ಷ, ಲಕ್ಷ ಆದಾಯದ ಜತೆಗೆ, ದಾರಿಹೋಕರ ಕಣ್ಮನ ಸೆಳೆಯುವಂತ ಬೆಳೆ ಬೆಳೆದು ಗಮನ
ಸೆಳೆದಿದ್ದಾರೆ.

Advertisement

ತಾಲೂಕಿನ ಬಳೂಟಗಿ ಗ್ರಾಪಂ ವ್ಯಾಪ್ತಿಯ ಹೊಸಳ್ಳಿ ಗ್ರಾಮದ ರೈತ ಗೂಳನಗೌಡ ಮಲ್ಲನಗೌಡ ಪಾಟೀಲ್‌ ಅವರು ಎರಡು
ಎಕರೆ ಜಮೀನಿನಲ್ಲಿ 2022-23ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ನರೇಗಾ ಯೋಜನೆಯಡಿ 256 ಮಾನವ ದಿನಗಳ ಸೃಜಿಸಿ 75 ಸಾವಿರ ಕೂಲಿ ಮೊತ್ತ ಪಡೆದು, 2500 ಡ್ರ್ಯಾಗನ್‌ ಫ್ರೂಟ್‌ ಸಸಿಗಳನ್ನು ನಾಟಿ ಮಾಡಿದ್ದಾರೆ. ಈಗ ಸಮೃದ್ಧವಾಗಿ ಬೆಳೆದ ಡ್ರ್ಯಾಗನ್‌ ಫ್ರೂಟ್‌ ಮಾರಾಟ ಮಾಡಿದ್ದು, ಮೊದಲ ವರ್ಷದ ಬೆಳೆಗೆ 1 ಲಕ್ಷ ರೂ. ಆದಾಯ ಪಡೆದಿದ್ದಾರೆ.

ಗಿಡ ನೆಟ್ಟಗೆ ನಿಂತು ಹರಡಿಕೊಳ್ಳಲು ಕಲ್ಲಿನ ಕಂಬ ಹಾಕಿದ್ದು, ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ. ಸಂಪೂರ್ಣ ಸಾವಯವ
ಗೊಬ್ಬರ ಬಳಕೆ ಮಾಡಿದ್ದು, ಒಂದು ಗಿಡಕ್ಕೆ 600ಕ್ಕೂ ಅಧಿಕ ವೆಚ್ಚ ಮಾಡಿದ್ದು, ರೈತ ಒಟ್ಟು 5 ಲಕ್ಷ ರೂಪಾಯಿ ಬಂಡವಾಳ
ಹಾಕಿ, ಮೊದಲ ವರ್ಷದಲ್ಲಿ 1 ಲಕ್ಷ ರೂ. ಆದಾಯ ಗಳಿಸಿದ್ದಾರೆ.

ಒಣ ಭೂಮಿಗೆ ಸೂಕ್ತ: ಕಡಿಮೆ ತೇವಾಂಶ ಇರುವ ಬಯಲು ಸೀಮೆಯಲ್ಲೂ ಈ ಬೆಳೆ ಬೆಳೆಯಬಹುದು ಎಂಬುದನ್ನು
ಇವರು ಸಾಬೀತು ಮಾಡಿದ್ದಾರೆ. ಒಣ ಭೂಮಿಯಲ್ಲಿ ತೇವಾಂಶ ಕಡಿಮೆ ಇದ್ದರೂ  ಡ್ರ್ಯಾಗನ್‌ ಫ್ರೂಟ್‌ನ್ನು ಬೆಳೆದು ಹೆಚ್ಚು
ಆದಾಯ ಪಡೆಯಬಹುದಾಗಿದೆ. ಇನ್ನು ಹೆಚ್ಚು ಶೀತವಿದ್ದರೆ ಇಳುವರಿ ಕಡಿಮೆ ಆಗಲಿದ್ದು, ಕಡಿಮೆ ತೇವಾಂಶ ಇರುವ ಒಣ
ಭೂಮಿ ಈ ಬೆಳೆಗೆ ಸೂಕ್ತವಾಗಿದೆ.

Advertisement

ಹೆಚ್ಚು ವಿಟಮಿನ್‌: ಇದು ಉಷ್ಣವಲಯದ ಹಣ್ಣಾಗಿದ್ದು, ರೋಮಾಂಚಕ ಕೆಂಪು ಚರ್ಮ ಮತ್ತು ವಿಶಿಷ್ಠವಾದ ಹಣ್ಣುಗಳಲ್ಲಿ
ಒಂದಾಗಿದೆ. ತೋಟಗಾರಿಕೆ ಬೆಳೆಯಾದ ಡ್ರ್ಯಾಗನ್‌ ಫ್ರೂಟ್‌ ಈಗ ಬೇಡಿಕೆಯ ಹಣ್ಣಾಗಿದ್ದು, ಕೆ.ಜಿಗೆ 110 ರೂ. ಮಾರಾಟವಾಗುತ್ತದೆ. ಇದು ಕಡಿಮೆ ಕ್ಯಾಲೋರಿ ಹಣ್ಣಾಗಿದ್ದು, ಸುಮಾರು 60 ಕ್ಯಾಲೋರಿಗಳನ್ನು ಹೊಂದಿರುತ್ತವೆ. ಅಲ್ಲದೇ ಇದರಲ್ಲಿ ವಿಟಮಿನ್‌ ಸಿ, ಬಿ1, ಬಿ2, ಬಿ3 ಮತ್ತು ಕಬ್ಬಿಣ ಕ್ಯಾಲ್ಸಿಯಂ ಹಾಗೂ ರಂಜಕದಂತಹ ಖನಿಜಗಳನ್ನು ಹೊಂದಿದೆ.

ತಾಲೂಕಿನಲ್ಲಿ ರೈತರು ತೋಟಗಾರಿಕೆ ಬೆಳೆ ಬೆಳೆಯುತ್ತ ತಮ್ಮ ಆದಾಯ ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ರೈತರು ನರೇಗಾ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು.
ಸಂತೋರ್‌, ತಾಪಂ ಇಒಷ ಪಾಟೀಲ್‌ ಬಿರಾದಾ

ತಾಲೂಕಿನ ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ಡ್ರ್ಯಾಗನ್‌ ಫ್ರುಟ್‌ ಬೆಳೆ ಬೆಳೆದಿದ್ದು, ಸಮೃದ್ಧವಾಗಿದೆ. ರೈತನ ಕೈ ಹಿಡಿದಿದ್ದು, ಫಸಲು ಚನ್ನಾಗಿ ಬಂದಿದೆ. ಮೊದಲ ವರ್ಷ ಕಡಿಮೆ ಆದಾಯ ಬಂದರೂ ಪ್ರತಿವರ್ಷ ಆದಾಯ ಹೆಚ್ಚಾಗಲಿದೆ. ನಮ್ಮ ಇಲಾಖೆಯಿಂದ ಸೌಲಭ್ಯ ಪಡೆದ ರೈತರು ಇತರರಿಗೆ ಮಾದರಿಯಾಗಿದ್ದಾರೆ.
*ಶಿವಕುಮಾರ, ಸಹಾಯಕ ತೋಟಗಾರಿಕೆ ಅಧಿಕಾರಿ

ತೋಟಗಾರಿಕೆ ಇಲಾಖೆಯಿಂದ ಸಹಾಯ ಪಡೆದು ಕಳೆದ ವರ್ಷ ಎರಡು ಎಕರೆ ಜಮೀನಿನಲ್ಲಿ ಡ್ರ್ಯಾಗನ್‌ ಫ್ರೂಟ್‌ ಬೆಳೆ ಬೆಳೆದಿದ್ದೇನೆ. ಮೊದಲ ವರ್ಷವೇ 1 ಲಕ್ಷ ರೂಪಾಯಿ ಆದಾಯ ಬಂದಿದೆ. ಮುಂಬರುವ ಮೂರ್ನಾಲ್ಕು ತಿಂಗಳಲ್ಲಿ ಮತ್ತೊಂದು ಲಕ್ಷ ಆದಾಯ ಬರುವ ನಿರೀಕ್ಷೆ ಇದೆ. ಮೊದಲಿಗೆ ಇದರ ಬಗ್ಗೆ ನಂಬಿಕೆ ಇರಲಿಲ್ಲ. ಆದರೆ, ಈಗ ಭರವಸೆ ತಂದಿದೆ. ತೋಟ ರಸ್ತೆ ಪಕ್ಕ
ಇರುವುದರಿಂದ ಇಲ್ಲೇ ಜಾಸ್ತಿ ಮಾರಾಟವಾಗಿದೆ. ಕೆ.ಜಿ ಗೆ 110 ರೂ. ಗೆ ಮಾರಾಟವಾಗಿದೆ
ಗೂಳನಗೌಡ ಮಲ್ಲನಗೌಡ ಪಾಟೀಲ್‌, ರೈತ

*ಮಲ್ಲಪ್ಪ ಮಾಟರಂಗಿ

Advertisement

Udayavani is now on Telegram. Click here to join our channel and stay updated with the latest news.

Next