ಯಲಬುರ್ಗಾ: ತಾಲೂಕಿನ ಸಂಗನಹಾಳ ಗ್ರಾಮದ ಕೆರೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ದತ್ತು ಪಡೆದು ಅಭಿವೃದ್ಧಿ ಪಡಿಸಿದ್ದು, ವರುಣನ ಕೃಪೆಯಿಂದ ಈ ಬಾರಿ ಮಳೆಯಾದ ಪರಿಣಾಮ ಕೆರೆಗೆ ನೀರು ಬಂದಿದೆ. ಧರ್ಮಸ್ಥಳ ಸಂಸ್ಥೆಯ ಕಾರ್ಯಕ್ಕೆ ಗ್ರಾಮದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
Advertisement
2.886 ಜನಸಂಖ್ಯೆ ಇರುವ ಸಂಗನಹಾಳದಲ್ಲಿ ಒಟ್ಟು 998 ಕುಟುಂಬಗಳಿವೆ. ಗ್ರಾಮದಲ್ಲಿರುವ ಕೆರೆ 1 ಎಕರೆ 8 ಗುಂಟೆ ಇದ್ದು, ಕೆರೆ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ 3 ಲಕ್ಷ ಅನುದಾನ ವಿನಿಯೋಗಿಸಿದರೆ, ಗ್ರಾಮಸ್ಥರು 9 ಲಕ್ಷ ರೂ. ಸಂಗ್ರಹಿಸಿದ್ದಾರೆ. ಒಟ್ಟು 12 ಲಕ್ಷ ರೂ ವೆಚ್ಚದಲ್ಲಿ ಕೆರೆ ಅಭಿವೃದ್ಧಿಗೊಂಡಿದೆ.