Advertisement

ಸಮಾಜದ ಕೊಳೆ ತೊಳೆಯುವ ಕೆಲಸ ಮಾಡಿದ ಮಾಚಿದೇವ

10:01 AM Feb 02, 2019 | |

ಯಲಬುರ್ಗಾ: ಮಡಿವಾಳ ಮಾಚಿದೇವರು ಜನತೆಯ ಬಟ್ಟೆಗಳನ್ನು ಕಾಯಕ ಮೂಲಕ ಶುದ್ಧ ಮಾಡಿದರೆ ಅವರು ರಚನೆ ಮಾಡಿದ ವಚನಗಳ ಮೂಲಕ ಸಮಾಜದ ಕೊಳೆಯನ್ನು ತೊಳೆಯುವ ಕೆಲಸ ಮಾಡಿದ್ದಾರೆ ಎಂದು ತಹಶೀಲ್ದಾರ್‌ ರಮೇಶ ಅಳವಂಡಿಕರ ಹೇಳಿದರು.

Advertisement

ಪಟ್ಟಣದ ಹಳೇ ಪಟ್ಟಣ ಪಂಚಾಯತಿ ಕಚೇರಿ ಆವರಣದಲ್ಲಿ ತಾಲೂಕಾಡಳಿತದ ವತಿಯಿಂದ ಹಮ್ಮಿಕೊಂಡ ಶಿವಶರಣ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿರೇಮ್ಯಾಗೇರಿ ಸರ್ಕಾರಿ ಪಪೂ ಕಾಲೇಜು ಪ್ರಾಚಾರ್ಯ ಸಂಗಮೇಶ ನರೇಗಲ್‌ ಉಪನ್ಯಾಸ ನೀಡಿ ಮಾತನಾಡಿ, ಸುಮಾರು 63 ಶರಣರಲ್ಲಿ ಮಡಿವಾಳ ಮಾಚಿದೇವರು ಜಗಜ್ಯೋತಿ ಬಸವಣ್ಣನವರಿಗೆ ಅಚ್ಚುಮೆಚ್ಚಿನ ಶರಣರಲ್ಲಿ ಅಗ್ರಗಣ್ಯರಾಗಿದ್ದರು. ಅವರು ಸಾಕಷ್ಟು ವಚನಗಳನ್ನು ರಚಿಸಿ ಸಮಾಜದಲ್ಲಿನ ಮೂಢನಂಬಿಕೆ, ಅಸ್ಪೃಶ್ಯತೆ ನಿವಾರಿಸಲು ಹಾಗೂ ಸಮಾಜದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನಮಾನಗಳು ದೊರೆಯುವಂತಾಗಲು ಶ್ರಮಿಸಿದವರಲ್ಲಿ ಮಹಾನ್‌ ಪುರುಷರಾಗಿದ್ದಾರೆ ಎಂದರು.

ಸಾಹಿತಿ ಕೊಟ್ರಪ್ಪ ತೋಟದ ಮಾತನಾಡಿ, ಮಡಿವಾಳ ಸಮಾಜ ತನ್ನದೆ ಆದ ಇತಿಹಾಸ ಹೊಂದಿದೆ. ಪ್ರತಿದಿನ ಜನರ ಸೇವೆ ಮಾಡುವುದು ನಿಮ್ಮ ಕಾಯಕವಾಗಿದೆ. ಆದರೆ ನೀವು ಪಡುತ್ತಿರುವ ಕಷ್ಟ ಹಾಗೂ ನೋವುಗಳನ್ನು ಮಕ್ಕಳಿಗೆ ಬರಬಾರದು. ಆದ್ದರಿಂದ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಬೇಕು ಎಂದರು.

ಪಪಂ ಮಾಜಿ ಅಧ್ಯಕ್ಷ ಸುರೇಶಗೌಡ ಶಿವನಗೌಡ ಮಾತನಾಡಿ, ಮಾಚಿದೇವರು ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಯಲ್ಲಿ ಸಾಕಷ್ಟು ಬದಲಾವಣೆ ತರುವಲ್ಲಿ ಅವರ ಪರಿಶ್ರಮ ಅಪಾರವಾಗಿದೆ ಎಂದರು.

Advertisement

ತಾಪಂ ಅಧ್ಯಕ್ಷೆ ಲಕ್ಷ್ಮೀ ಗೌಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಸಮಾಜದ ಅಧ್ಯಕ್ಷ ಈಶಪ್ಪ ಮಡಿವಾಳ, ತಾಪಂ ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ, ಪಪಂ ಸದಸ್ಯರಾದ ಅಮರೇಶ ಹುಬ್ಬಳ್ಳಿ, ಬಸವಲಿಂಗಪ್ಪ ಕೊತ್ತಲ, ಸ.ಶರಣಪ್ಪ ಪಾಟೀಲ, ಕಳಕಪ್ಪ ತಳವಾರ, ಸೋಮಣ್ಣ, ಹಂಚಾಳಪ್ಪ ಮಡಿವಾಳರ, ಶಿವಲಿಂಗಪ್ಪ ಮಡಿವಾಳ, ಹನುಮಂತಪ್ಪ ಮಡಿವಾಳ, ಮುಖ್ಯಾಧಿಕಾರಿ ನಾಗೇಶ, ನಾಗರಾಜ, ದೇವಪ್ಪ ವಾಲ್ಮೀಕಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next