Advertisement

ಇಂದು ಟ್ರಿಪಲ್‌ ತಲಾಖ್‌ ಸಿನಿಮಾ ಪ್ರೀಮಿಯರ್ ಶೋ; ಉಚಿತ ಪ್ರವೇಶ

10:13 AM Jan 25, 2020 | Nagendra Trasi |

ಕುಂದಾಪುರ: ಇಲ್ಲಿನ ಯುವ ಮೆರಿಡಿಯನ್‌ ಹಾಲ್‌ನಲ್ಲಿ ಜ.25ರಂದು ಸಂಜೆ 5.45ಕ್ಕೆ ಟ್ರಿಪಲ್‌ ತಲಾಖ್‌ ಸಿನಿಮಾದ ಪ್ರೀಮಿಯರ್‌ ಪ್ರದರ್ಶನ ನಡೆಯಲಿದ್ದು ಸಾರ್ವಜನಿಕ ರಿಗೆ ಮುಕ್ತ ಪ್ರವೇಶ ಇದೆ ಎಂದು ಸಿನಿಮಾ ನಿರ್ದೇಶಕ ಯಾಕೂಬ್‌ ಖಾದರ್‌ ಗುಲ್ವಾಡಿ ಹೇಳಿದರು.

Advertisement

ಅವರು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು. ತ್ರಿವಳಿ ತಲಾಖ್‌ ಸಮಸ್ಯೆ ಹಾಗೂ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿದ ತೀರ್ಪಿನ ಸುತ್ತ ಕಥೆ ಹೆಣೆಯಲಾಗಿದೆ.

96 ನಿಮಿಷಗಳ ಸಿನಿಮಾ ಸಿದ್ಧಪಡಿಸಲಾಗಿದ್ದು ಈ ಮೊದಲೇ ಸಿನಿಮಾ ಚಿತ್ರೀಕರಣ ಮಾಡಲಾಗಿತ್ತು. ಆದರೆ ಮಾರುಕಟ್ಟೆಗೆ ಬಿಡಲು ಸಾಧ್ಯವಾಗಿರಲಿಲ್ಲ. ಅದೇ ಸಂದರ್ಭ ಸುಪ್ರೀಂ
ಕೋರ್ಟ್‌ ತೀರ್ಪು ಬಂದಿದ್ದು ಅನಂತರದ ದಿನಗಳಲ್ಲಿ ನಿರ್ಮಾಪಕರ ಸಹಕಾರದಿಂದ 90 ಶೇ.ದಷ್ಟು ಮರು ಚಿತ್ರೀಕರಣ ನಡೆಸಲಾಗಿದೆ.

ಕುಂದಾಪುರ ತಾಲೂಕಿನಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಸಿನಿಮಾದಲ್ಲಿ ರೂಪಾ ವರ್ಕಾಡಿ,ನವ್ಯಾ ಪೂಜಾರಿ, ಅಝರ್‌ ಷಾ, ನ್ಯಾಯವಾದಿ ರವಿಕಿರಣ್‌ ಮುರ್ಡೇಶ್ವರ, ಬೇಬಿ ಪಾಹಿಮಾ, ಸಾಹಿತಿ, ನ್ಯಾಯವಾದಿ ಎ.ಎಸ್‌.ಎನ್‌. ಹೆಬ್ಟಾರ್‌, ಅಮೀರ್‌ ಹಂಝ, ಮಾಸ್ಟರ್‌ ಫ‌ಹಾದ್‌, ಎಂ.ಕೆ. ಮಠ, ದೇವೇಂದ್ರ ಬಡಿಗೇರ್‌, ಮಹಮ್ಮದ್‌ ಬಡ್ಡೂರ್‌, ಉಮರ್‌ ಯು.ಎಚ್‌. ಮೊದಲಾದವರು ನಟಿಸಿದ್ದಾರೆ.

Advertisement

ಬ್ಯಾರಿ ಭಾಷೆಯ ಈ ಚಿತ್ರವನ್ನು ಮುಂದಿನ ದಿನಗಳಲ್ಲಿ ಕನ್ನಡಕ್ಕೆ ಭಾಷಾಂತರಿಸಿ ಟಾಕೀಸ್‌ನಲ್ಲಿ ಬಿಡುಗಡೆ ಮಾಡ ಲಾಗುವುದು. ಈಗ ಟಾಕೀಸ್‌ ನಲ್ಲಿ ಬಿಡುಗಡೆ ಮಾಡುವ ಯೋಜನೆ ಇಲ್ಲ. ಏಕೆಂದರೆ ಥಿಯೇಟರ್‌ಗಳ ಲಾಬಿ ಎದುರಿಸುವುದು ಕಷ್ಟ, ಥಿಯೇಟರ್‌ಗಳು ದೊರೆಯುವುದು ಕಷ್ಟ, ಥಿಯೇಟರ್‌ಗಳ ಬಾಡಿಗೆ ಕಟ್ಟುವುದೂ ಕಷ್ಟ . ಈಗಾಗಲೇ ಸಿನಿಮಾ ಲಂಡನ್‌ನಲ್ಲಿ ಚಿತ್ರೋತ್ಸವದಲ್ಲಿ
ಪ್ರದರ್ಶನ ಕಂಡಿದೆ ಎಂದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪೂರಕ ಮಾಹಿತಿ ನೀಡಿ, ಕನ್ನಡಕ್ಕೆ 2017ರಲ್ಲಿ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಗುಲ್ವಾಡಿ ಟಾಕೀಸ್‌ ನಿರ್ಮಾಣದ ಯಾಕೂಬ್‌ ಖಾದರ್‌ ತಲಾಖ್‌ ವಿಚಾರದಲ್ಲಿ ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಕಲ್ಪನೆಗಳಿವೆ. ಕುರಾನ್‌ನಲ್ಲಿ ತಲಾಖ್‌ ಬಗ್ಗೆ ಏನು ಹೇಳಲಾಗಿದೆ ಎನ್ನುವುದನ್ನು ಈ ಸಿನಿಮಾದಲ್ಲಿ ಹೇಳಲು
ಪ್ರಯತ್ನಿಸಲಾಗಿದೆ ಎಂದರು.

ಚಿತ್ರದ ನಿರ್ಮಾಪಕ ನಾರಾಯಣ ಪಿ. ಸುವರ್ಣ ಮುಂಬಯಿ ಮಾತನಾಡಿ, ಚಿತ್ರವು ಪ್ರಾದೇಶಿಕ ಭಾಷೆ ವಿಭಾಗದಲ್ಲಿ ಚಿತ್ರೀಕರಿಸಲ್ಪಟ್ಟಿದ್ದು ಬ್ಯಾರಿ ಭಾಷೆಯಲ್ಲಿದೆ. ಇಂಗ್ಲಿಷ್‌ ಸಬ್‌ಟೈಟಲ್‌ ಒಳಗೊಂಡಿದೆ.

ನ್ಯಾಯಾಲಯ ಹಾಗೂ ಪೊಲೀಸ್‌ ಠಾಣೆ ದೃಶ್ಯಗಳನ್ನು ಸಹಜವಾಗಿ ಬರಲು ಕನ್ನಡದಲ್ಲೇ ಉಳಿಸಿಕೊಳ್ಳಲಾಗಿದೆ. ಎಂದರು. ನಿರ್ಮಾಪಕಿ ಪ್ರಭಾ ಎನ್‌. ಸುವರ್ಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next