Advertisement

ಲಕ್ಷ್ಮೀಶ ಅಮ್ಮಣ್ಣಾಯರಿಗೆ ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿ ಪ್ರದಾನ

01:28 AM Nov 08, 2021 | Team Udayavani |

ಮೂಡುಬಿದಿರೆ: ಡಿಜಿ ಯಕ್ಷ ಫೌಂಡೇಶನ್‌ ಹಾಗೂ ಅಭಿನಂದನ ಸಮಿತಿ ಆಶ್ರಯದಲ್ಲಿ ಯಕ್ಷಗಾನ ಭಾಗವತರಾದ ಲೀಲಾವತಿ ಬೈಪಾಡಿತ್ತಾಯ-ಮದ್ದಳೆಗಾರ ಹರಿನಾರಾಯಣ ಬೈಪಾಡಿತ್ತಾಯ ದಂಪತಿ ಅಮೃತಮಹೋತ್ಸವ-ಯಕ್ಷಭಿನಂದನಂ, ಶಿಷ್ಯಾಭಿನಂದನಂ, ಯಕ್ಷ ನಾದೋತ್ಸವಂ ಹಾಗೂ ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ ಪ್ರದಾನ ಸಮಾರಂಭ ಅಲಂಗಾರಿನ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇಗುಲದಲ್ಲಿ ರವಿವಾರ ನಡೆಯಿತು.ಯಕ್ಷಗಾನ ಅಕಾಡೆಮಿ ಪೂರ್ವ ಅಧ್ಯಕ್ಷ ಎಂ. ಎಲ್‌. ಸಾಮಗ ಅಧ್ಯಕ್ಷತೆ ವಹಿಸಿದ್ದರು.

Advertisement

“ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಬರಿಯ ಮಾತಿಗಿಂತ ಕೃತಿಯಲ್ಲಿ ಉಳಿಸಿ ಬೆಳೆಸಿದ ಬೈಪಾಡಿತ್ತಾಯ ದಂಪತಿಗಳಂಥ ಕಲಾತಪಸ್ವಿಗಳ ಕಲಾ ಸೇವೆ ದೊಡ್ಡದು. ಶಿಷ್ಯರು ಬದುಕಿನಲ್ಲಿ ಯಾವುದೇ ದಾರಿ ಹಿಡಿದರೂ ಕಲೆಯ ಕುರಿತಾದ ಅಭಿಮಾನ, ಪ್ರೀತಿ ಉಳಿಸಿಕೊಳ್ಳಬೇಕು’ ಎಂದು ಅವರು ಕರೆ ನೀಡಿದರು.

ಗ್ರಂಥ, ಆತ್ಮ ಕಥನ ಬಿಡುಗಡೆ”ಶ್ರೀಹರಿಲೀಲಾ-75 ಯಕ್ಷಗಾನ ಕಲಾಯಾನ’ ಅಭಿನಂದನ ಗ್ರಂಥ ಹಾಗೂ “ಯಕ್ಷಗಾನ ಲೀಲಾವಳಿ’ ಆತ್ಮಕಥನವನ್ನು ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಅವರು ಬಿಡುಗಡೆಗೊಳಿಸಿದರು.

ಇದನ್ನೂ ಓದಿ:ಮುಸ್ಲಿಮೇತರರಿಗೆ ಕೌಟುಂಬಿಕ ಕಾನೂನು ಸವಲತ್ತು : ಅಬುಧಾಬಿ ಸರ್ಕಾರದಿಂದ ಮಹತ್ವದ ನಿರ್ಧಾರ

ಶ್ರೀಹರಿಲೀಲಾ – ಯಕ್ಷನಾದ ಪ್ರಶಸ್ತಿ ಪ್ರದಾನ
ಹಿರಿಯ ಮದ್ದಳೆಗಾರ ಲಕ್ಷ್ಮೀಶ
ಅಮ್ಮಣ್ಣಾಯ ಅವರಿಗೆ “ಶ್ರೀಹರಿ ಲೀಲಾ- ಯಕ್ಷನಾದ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಯಕ್ಷಗಾನ ವಿದ್ವಾಂಸ ಉಜಿರೆ ಅಶೋಕ ಭಟ್‌, ಕಲಾವಿದ ದೇವಾನಂದ ಭಟ್‌ ಬೆಳುವಾಯಿ, ಶಾಸಕ ಉಮಾನಾಥ ಕೋಟ್ಯಾನ್‌, ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್‌, ಸಮಿತಿ ಗೌರವಾಧ್ಯಕ್ಷ ಡಾ| ಎಂ. ಮೋಹನ ಆಳ್ವ, ಕಲಾ ಪೋಷಕ ಟಿ. ಶ್ಯಾಂ ಭಟ್‌, ಪಂಚಮೇಳಗಳ ಯಜಮಾನ ಪಿ. ಕಿಶನ್‌ ಹೆಗ್ಡೆ, ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್‌, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಲೇಖಕಿ ವಿದ್ಯಾರಶ್ಮಿ ಪೆಲತ್ತಡ್ಕ, ಉದ್ಯಮಿ ಕೆ. ಶ್ರೀಪತಿ ಭಟ್‌ ಮುಂತಾದವರು ಉಪಸ್ಥಿತರಿದ್ದರು.

Advertisement

ಅಭಿನಂದನ ಸಮಿತಿ ಅಧ್ಯಕ್ಷ ಚಂದ್ರ ಶೇಖರ ಭಟ್‌ ಕೊಂಕಣಾಜೆ ಸ್ವಾಗತಿಸಿ, ಸಹಕಾರ್ಯದರ್ಶಿ ಸಾಯಿಸುಮಾ ನಾವಡ ವಂದಿಸಿದರು. ಆರ್ಥಧಾರಿ ಗಣರಾಜ ಕುಂಬ್ಳೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next