ಹಳೆಯಂಗಡಿ: ಕಲೆಯಲ್ಲಿ ಮಕ್ಕಳ ಜ್ಞಾನವೃದ್ಧಿಗೆ ಯಕ್ಷಗಾನ ಪೂರಕ ಕ್ಷೇತ್ರವಾಗಿದೆ ಎಂಬ ಸಮೀಕ್ಷೆಯನ್ನು ಸ್ವಯಂ ಪ್ರೇರಣೆಯಿಂದ ನಡೆಸಲಾಗಿದ್ದು ಅದು ಸರಿ ಎಂದು ಸಾಬೀತಾಗಿದೆ. ಯಕ್ಷಗಾನದಲ್ಲಿ ಕಾವ್ಯ, ಶೃಂಗಾರ, ಹಾವ, ಭಾವ, ಭಾಷಾ ಶುದ್ಧಿ, ಆಶು, ವೇದ, ಪುರಾಣಗಳ ಸಂಪೂರ್ಣ ಕಲೆಗಾರಿಕೆಯಾಗಿದ್ದು ಇದಕ್ಕಿಂತ ಬೇರೊಂದು ಕಲಾ ಕ್ಷೇತ್ರ ಇಲ್ಲ ಎಂದು ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಸಂಸ್ಥಾಪಕ ಹಾಗೂ ಕಟೀಲು ಕ್ಷೇತ್ರದ ಅರ್ಚಕರಾದ ಶ್ರೀ ಹರಿನಾರಾಯಣ ಆಸ್ರಣ್ಣ ಹೇಳಿದರು.
ಮಂಗಳೂರಿನ ಸನಾತನ ಯûಾಲಯದ 8ನೇ ವಾರ್ಷಿಕೋತ್ಸವವು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮೀ ದೇವಸ್ಥಾನದ ಶಾರಧ್ವತ ಯಜ್ಞಾಂಗಣದಲ್ಲಿ ಜರ ಗಿ ದ್ದು, ಅದರ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಎಸೆ ಸ ಲ್ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕೇಂದ್ರದ ವಿದ್ಯಾರ್ಥಿಗಳಾದ ಎನ್.ಆರ್. ಅನನ್ಯ ರಾವ್, ಕೃತಿ ವಿ. ರಾವ್ ಹಾಗೂ ಪಿ.ಸೌಂದರ್ಯ ಲಕ್ಷ್ಮೀ ಅವರನ್ನು ಸಮ್ಮಾನಿಸಲಾಯಿತು.
ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಶಶೀಂದ್ರಕುಮಾರ್, ಎ.ಜೆ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ವೈ.ಭರತ್ ಶೆಟ್ಟಿ, ಉಡುಪಿ ರೋಬೋಸೋಫ್ಟ್ ಟೆಕ್ನೋಲಜೀಸ್‌ನ ಶ್ರೀಪಾದ ಹೆಬ್ಟಾರ್, ಉದ್ಯಮಿ ಚಿತ್ತರಂಜನ್ ಶೆಟ್ಟಿ ನುಳಿಯಾಲು ಗುತ್ತು, ಮಂಗಳೂರಿನ ತುಳುನಾಡು ಚಿಟ್ಸ್ ಪ್ರೈ.ಲಿ.ನ ನಿರ್ದೇಶಕ ಸಂದೇಶ್ ಶೆಟ್ಟಿ, ಯಕ್ಷಗಾನ ಸಂಘಟಕಿ ಮುಂಬಯಿಯ ಗೋಪಿಕಾ ಸತೀಶ್ ಮಯ್ಯ, ಭಾರತೀಯ ನೌಕಾ ಸೇನೆಯ ಸುನಿಲ್ ಕುಮಾರ್ ಕುಲಾಲ್ ಮುಂಬಯಿ, ಸಂಸ್ಥೆಯ ಎಂ.ಚಂದ್ರಶೇಖರ್, ಶಂಕರ ಅರಿಗ, ದೀಪಕ್ ರೈ ವಾಮಂಜೂರು, ಲೀಲಾಧರ ಶೆಟ್ಟಿ, ಸುಕನ್ಯಾ ಶೇಖರ್, ಜಯಂತ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ರಾಕೇಶ್ ರೈ ಅಡ್ಕ ಅವರ ಶಿಷ್ಯವೃಂದದವರಿಂದ “ಧರ್ಮಕ್ಷೇತ್ರೇ-ಕುರುಕ್ಷೇತ್ರೇ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಬಾಲಕೃಷ್ಣ ರೈ ನುಳಿಯಾಲು ಗುತ್ತು ಸ್ವಾಗತಿಸಿದರು, ಸಂಸ್ಥೆಯ ನಿರ್ದೇಶಕ ರಾಕೇಶ್ ರೈ ಅಡ್ಕ ವಂದಿಸಿದರು, ಮಂಜುಳಾ ಶೆಟ್ಟಿ ಅವರು ಕಾರ್ಯ ಕ್ರಮ ನಿರೂಪಿಸಿದರು.