Advertisement

ಯಕ್ಷಗಾನ ಆನ್ಲೈನ್‌ ತರಬೇತಿ

11:57 AM Apr 15, 2020 | Suhan S |

ಬೆಂಗಳೂರು: ಕೋವಿಡ್ 19 ಭೀತಿಯಿಂದ ದೇಶವೇ ಲಾಕೌ ಡೌನ್‌ ಆಗಿದ್ದು, ಎಲ್ಲ ರೀತಿಯ ತರಗತಿಗಳು ಸ್ತಬ್ಧಗೊಂಡಿವೆ. ಅನೇಕರು ಆನ್ಲೈನ್‌ ಪ್ಲಾಟ್‌ ಫಾರ್ಮ್ ಮೂಲಕ ತರಗತಿ ನಡೆಸುತ್ತಿದ್ದಾರೆ. ಇದೇ ಮಾದರಿಯಲ್ಲಿ ಯಕ್ಷಗಾನ ಆನ್ಲೈನ್‌ ತರಗತಿ ಕೂಡ ಆರಂಭವಾಗಲಿದೆ. ಬೆಂಗಳೂರಿನ ಸಂಕೃತಿ ಆನ್ಲೈನ್‌ ಯಕ್ಷಗಾನ ತರಬೇತಿ ಕೇಂದ್ರದಿಂದ ಬಡಗು ತಿಟ್ಟು ಯಕ್ಷಗಾನ ತಾಳ, ಹೆಜ್ಜೆಗಾರಿಕೆಯ ಪ್ರಾಥಮಿಕ ಪಾಠದ ಏಳು ದಿನದ ಆನ್ಲೈನ್‌ ಕೋರ್ಸ್‌ ಆರಂಭಿಸಲಿದೆ. ಪ್ರತಿದಿನ ಒಂದು ಗಂಟೆ, ತರಬೇತಿ ಇರಲಿದ್ದು ಏ.15ರಿಂದ ಸಂಜೆ 6 ಗಂಟೆಯಿಂದ ಆರಂಭವಾಗಲಿದೆ. ಯಕ್ಷಗಾನ ಗುರುಗಳಾದ ಎ.ಪಿ.ಫಾಟಕ್‌ ಮತ್ತು ಪ್ರಿಯಾಂಕ ಕೆ.ಮೋಹನ್‌ ಅವರ ನೇತೃತ್ವದಲ್ಲಿ ಜೂಮ್‌ ತಂತ್ರಜ್ಞಾನದ ಮೂಲಕ ಆನ್ಲೈನ್‌ ತರಬೇತಿ ನಡೆಯಲಿದೆ ಎಂದು ಸತೀಶ್‌ ಅಗ್ಪಲ ತಿಳಿಸಿದ್ದಾರೆ. ಮಾಹಿತಿಗೆ 9945031391 ಸಂಪರ್ಕಿಸಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next