Advertisement

ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವ ಕಾರ್ಯ ಸ್ತುತ್ಯರ್ಹ

01:29 PM Sep 10, 2019 | Suhan S |

ಪುಣೆ, ಸೆ. 9: ತುಳು ನಾಡಿನ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ಪುಣೆಯಲ್ಲಿ ಉಳಿಸುವ ದೃಷ್ಟಿಕೋನದಿಂದ ಪ್ರಾಮಾಣಿಕವಾಗಿ ತೊಡಗಿಸಿಕೊಂಡು ಮಹಾಗಣಪತಿ ಯಕ್ಷಗಾನ ಮಂಡಳಿಯ ಮೂಲಕ ಪ್ರಯತ್ನಶೀಲನಾಗಿದ್ದೇನೆ. ಬಾಲ್ಯದಿಂದಲೂ ಯಕ್ಷಗಾನದ ಬಗ್ಗೆ ಅಪಾರ ಅಭಿಮಾನವನ್ನು ಬೆಳೆಸಿಕೊಂಡು ಅದರ ಬೆಳವಣಿಗೆಗೆ ಶ್ರಮಿಸುತ್ತಿದ್ದೇನೆ. ಪಿಂಪ್ರಿ-ಚಿಂಚ್ವಾಡ್‌ ತುಳು ಸಂಘವು ತುಳುನಾಡಿನ ಆಚಾರ ವಿಚಾರ, ಕಲೆ ಸಂಸ್ಕೃತಿಯನ್ನು ಪೋಷಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನೀಯವಾಗಿದೆ. ಸಂಘದ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಅಪೇಕ್ಷೆಯಂತೆ ಸೀಮಿತ ಕಾಲಾವಕಾಶದಲ್ಲಿ ಇಂದಿನ ಪ್ರದರ್ಶನವನ್ನು ಆಯೋಜಿಸುವಲ್ಲಿ ನಮ್ಮ ಮಂಡಳಿ ಯಶಸ್ವಿಯಾಗಿದೆ ಎನ್ನಲು ಹೆಮ್ಮೆಯಾಗುತ್ತಿದೆ. ತುಳು ಸಂಘದ ಕಲಾಭಿಮಾನಕ್ಕೆ ಅಭಿನಂದನೆಗಳು ಎಂದು ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಪುತ್ತೂರು ಅವರು ನುಡಿದರು.

Advertisement

ಅವರು ಸೆ. 7ರಂದು ತುಳು ಸಂಘ ಪಿಂಪ್ರಿ-ಚಿಂಚ್ವಾಡ್‌ ಆಶ್ರಯದಲ್ಲಿ ಪಿಂಪ್ರಿಯ ಆಚಾರ್ಯ ಅತ್ರೆ ರಂಗಮಂದಿರದಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯಿಂದ ದಾಳಿಂಬೆ ದಾರಗೆ ಯಕ್ಷಗಾನ ಪ್ರದರ್ಶನದ ಸಂದರ್ಭ ಉಪಸ್ಥಿತರಿದ್ದು ಮಾತನಾಡಿ, ಪುಣೆ ಯಲ್ಲಿರುವ ಸಂಘ ಸಂಸ್ಥೆಗಳು ಯಕ್ಷಗಾನ ಕಲೆಗೆ ಪ್ರೊತ್ಸಾಹ ನೀಡುವ ಕಾರ್ಯ ಮಾಡಬೇ ಕಾಗಿದೆ. ಇದರಿಂದ ಯಕ್ಷಗಾನ ಕಲೆ ವಿಪುಲವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭ ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಹರೀಶ್‌ ಶೆಟ್ಟಿ ಕುರ್ಕಾಲ್, ಬಂಟ್ಸ್‌ ಅಸೋಸಿಯೇಶನ್‌ ಪುಣೆ ಇದರ ಅಧ್ಯಕ್ಷರಾದ ಆನಂದ್‌ ಶೆಟ್ಟಿ ಮಿಯ್ನಾರ್‌, ಪಿಂಪ್ರಿ-ಚಿಂಚ್ವಾಡ್‌ ಬಂಟರ ಸಂಘದ ಅಧ್ಯಕ್ಷರಾದ ವಿಜಯ್‌ ಎಸ್‌. ಶೆಟ್ಟಿ ಬೋರ್ಕಟ್ಟೆ, ಪಿಂಪ್ರಿ-ಚಿಂಚ್ವಾಡ್‌ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಡಿ. ಶೆಟ್ಟಿ, ಮಹೇಶ್‌ ಹೆಗ್ಡೆ, ಪಿಂಪ್ರಿ-ಚಿಂಚ್ವಾಡ್‌ ಹೊಟೇಲ್ ಅಸೋಸಿಯೇಶನ್‌ ಅಧ್ಯಕ್ಷ ಕೆ. ಪದ್ಮನಾಭ ಶೆಟ್ಟಿ, ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿ, ಹಿರಿಯ ಯಕ್ಷಗಾನ ಕಲಾವಿದ ಮದಂಗಲ್ಲು ಆನಂದ್‌ ಭಟ್, ತುಳು ಸಂಘದ ಮಾಜಿ ಕಾರ್ಯಾಧ್ಯಕ್ಷರಾದ ಶ್ಯಾಮ್‌ ಸುವರ್ಣ, ಪಿಂಪ್ರಿ ಬಿಲ್ಲವ ಸಂಘದ ಅಧ್ಯಕ್ಷ ಶರತ್‌ ಕೋಟ್ಯಾನ್‌, ಮಾಜಿ ನಗರ ಸೇವಕ ಪ್ರಸಾದ್‌ ಶೆಟ್ಟಿ, ದಿನೇಶ್‌ ಶೆಟ್ಟಿ ಕಳತ್ತೂರು, ಕಲ್ಲಾಡಿ ಶ್ರೀಧರ ಶೆಟ್ಟಿ, ಜಯಾನಂದ್‌ ಶೆಟ್ಟಿ, ಸಂತೋಷ್‌ ಶೆಟ್ಟಿ ಎಣ್ಣೆಹೊಳೆ, ಗಿರೀಶ್‌ ಶೆಟ್ಟಿ, ಜಯಲಕ್ಷ್ಮಿ ಪಿ. ಶೆಟ್ಟಿ, ತುಳು-ಸಂಘದ ಉಪಾಧ್ಯಕ್ಷರಾದ ದಿನೇಶ್‌ ಶೆಟ್ಟಿ ಉಜಿರೆ, ಶೇಖರ ಚಿತ್ರಾಪು, ಪ್ರಧಾನ ಕಾರ್ಯದರ್ಶಿ ವಿನಯ್‌ ಶೆಟ್ಟಿ ನಿಟ್ಟೆ, ಗಣೇಶ್‌ ಅಂಚನ್‌, ಪದಾಧಿಕಾರಿಗಳಾದ ನಿತಿನ್‌ ಶೆಟ್ಟಿ ನಿಟ್ಟೆ, ಸಂತೋಷ್‌ ಶೆಟ್ಟಿ ಪೆರ್ಡೂರು, ಸಂತೋಷ್‌ ಕಡಂಬ, ಜಯ ಶೆಟ್ಟಿ ದೇಹುರೋಡ್‌, ಶುಭಕರ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಮಿಥುನ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಅತಿಥಿ-ಗಣ್ಯರು ದೀಪ ಬೆಳಗಿಸಿ ಯಕ್ಷಗಾನ ಪ್ರದರ್ಶನಕ್ಕೆ ಚಾಲನೆ ನೀಡಿದರು. ಪ್ರವೀಣ್‌ ಶೆಟ್ಟಿ ಪುತ್ತೂರು ಇವರನ್ನು ಸಂಘದ ವತಿಯಿಂದ ಶಾಲು ಹೊದೆಸಿ, ಸ್ಮರಣಿಕೆ, ಪುಷ್ಪಗುಚ್ಛ ನೀಡಿ ಸಮ್ಮಾನಿಸಲಾಯಿತು. ನೂತನ್‌ ಸುವರ್ಣ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಜಯಾನಂದ್‌ ಶೆಟ್ಟಿ ಹಾಗೂ ಸಂತೋಷ್‌ ಶೆಟ್ಟಿ ಪೆರ್ಡೂರು ಚಹಾ, ಉಪಾಹಾರದ ವ್ಯವಸ್ಥೆಯನ್ನು ಮಾಡಿದರು. ರಘು ಶೆಟ್ಟಿ ಪಿಎಂಟಿ ಕ್ಯಾಂಟೀನ್‌ ಭೋಜನದ ವ್ಯವಸ್ಥೆಯನ್ನು ಮಾಡಿದರು.

ಅನಂತರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಹಾಗೂ ಊರಿನ ನಾಮಾಂಕಿತ ಕಲಾವಿದರ ಕೂಡುವಿಕೆಯೊಂದಿಗೆ ದಾಳಿಂಬೆ ದಾರಗೆ ತುಳು ಯಕ್ಷಗಾನ ಪ್ರದರ್ಶನ ನಡೆಯಿತು. ಪ್ರದರ್ಶನದ ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಶಾಂತ್‌ ಶೆಟ್ಟಿ, ಚೆಂಡೆಯಲ್ಲಿ ಎಕ್ಕಾರು ಪ್ರವೀಣ್‌ ಶೆಟ್ಟಿ, ಮದ್ದಳೆಯಲ್ಲಿ ಆನಂದ್‌ ಶೆಟ್ಟಿ ಇನ್ನ, ಚಕ್ರತಾಳದಲ್ಲಿ ಕುಶರಾಜ ಪೂಜಾರಿ ಸಹಕರಿಸಿದರು. ಹಾಸ್ಯದಲ್ಲಿ ದಿನೇಶ್‌ ರೈ ಕಡಬ, ಸಿ. ಕೆ. ಪ್ರಶಾಂತ್‌, ರಾಜ ತುಂಬೆ, ಸುಧೀರ್‌ ಶೆಟ್ಟಿ ಕುಕ್ಕುಂದೂರು, ಸ್ತ್ರೀ ಪಾತ್ರದಲ್ಲಿ ಕಡಬ ಶ್ರೀನಿವಾಸ ರೈ, ಶ್ರೀಧರ ಮಲ್ಲೂರು, ಹರೀಶ್‌ ವೇಣೂರು ಪಾಲ್ಗೊಂಡಿದ್ದರು. ಮುಖ್ಯ ಪಾತ್ರದಲ್ಲಿ ಉದಯ ಕುಮಾರ್‌ ಅಡ್ಯನಡ್ಕ, ರಾಮಣ್ಣ ರೈ ಪುತ್ತೂರು, ರಘುನಾಥ ನಲ್ಲೂರು, ಹೆಜ್ಮಾಡಿ ಮನೋಜ್‌ ಕುಮಾರ್‌, ರಂಜಿತ್‌ ಶೆಟ್ಟಿ, ಗೋವಿಂದ ಸಫಲಿಗ ಸಹಕರಿಸಿದರು. ವೇಷಭೂಷಣದಲ್ಲಿ ಸುನಿಲ್ ದೇವಾಡಿಗ, ನಂದಿನಿ ಆರ್ಟ್ಸ್ ಸಹಕಾರ ನೀಡಿದರು. ಸಭಾಂಗಣ ಪೂರ್ತಿ ಕಲಾಭಿಮಾನಿಗಳು ತುಂಬಿದ್ದು ವಿಶೇಷತೆಯಾಗಿತ್ತು.

Advertisement

ಚಿತ್ರ-ವರದಿ : ಕಿರಣ್‌ ರೈ ಕರ್ನೂರು ಪುಣೆ

Advertisement

Udayavani is now on Telegram. Click here to join our channel and stay updated with the latest news.

Next