Advertisement
ಶ್ರೀ ಕ್ಷೇತ್ರ ಕಟೀಲು, ಧರ್ಮಸ್ಥಳ, ಸಾಲಿಗ್ರಾಮ, ಮಂದಾರ್ತಿ, ಪೆರ್ಡೂರು, ಪಾವಂಜೆ, ಬಪ್ಪನಾಡು, ಸಸಿಹಿತ್ಲು, ಹನುಮಗಿರಿ, ಸುಂಕದಕಟ್ಟೆ ಸೇರಿದಂತೆ ಹಲವು ಮೇಳಗಳು ನವೆಂಬರ್ ಮಧ್ಯ ಹಾಗೂ ಕೊನೆಯಲ್ಲಿ ತಿರುಗಾಟ ಆರಂಭದ ಚಿಂತನೆ ನಡೆಸುತ್ತಿದ್ದು, ಅಂತಿಮ ತೀರ್ಮಾನ ಇನ್ನಷ್ಟೇ ಆಗಬೇಕಿದೆ.
Related Articles
Advertisement
ಪಾವಂಜೆ ಮೇಳದ ಸಂಚಾಲಕ ಪಟ್ಲ ಸತೀಶ್ ಶೆಟ್ಟಿ ಅವರ ಪ್ರಕಾರ, 2 ವರ್ಷಗಳಲ್ಲಿ ಪೂರ್ಣವಾಗಿ ತಿರುಗಾಟ ಇಲ್ಲದೆ ಯಕ್ಷಗಾನ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಚೌತಿ ಸೇರಿ ದಂತೆ ಶುಭ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶವಿಲ್ಲದೆ ಹವ್ಯಾಸಿ ಕಲಾವಿದರು ಕಷ್ಟದಲ್ಲಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಅನುಮತಿ ನೀಡಿ ಯಕ್ಷಗಾನ, ನಾಟಕಕ್ಕೆ ಅವಕಾಶ ಇಲ್ಲದಿರುವುದು ಯಾವ ನ್ಯಾಯ? ಕಲೆಯನ್ನೇ ನಂಬಿಕೊಂಡಿರುವ ಸಾವಿರಾರು ಕುಟುಂಬಗಳು ಬೇಸರದಲ್ಲಿವೆ ಎನ್ನುತ್ತಾರೆ.
ಬಡವಾದ ತುಳು ರಂಗಭೂಮಿಉಭಯ ಜಿಲ್ಲೆಯಲ್ಲಿ 40ಕ್ಕೂ ಅಧಿಕ ವೃತ್ತಿಪರ ನಾಟಕ ತಂಡಗಳು ಹಾಗೂ ಹವ್ಯಾಸಿ ತಂಡಗಳಿದ್ದು 3000ಕ್ಕೂ ಅಧಿಕ ಕಲಾವಿದರು, ತಂತ್ರಜ್ಞರು ಸೇರಿದಂತೆ ವಿವಿಧ ಪ್ರಕಾರದಲ್ಲಿ ದುಡಿಯುತ್ತಿದ್ದಾರೆ. ಈ ಮೂಲಕ ಶ್ರೀಮಂತ ವಾಗಿದ್ದ ಕರಾವಳಿಯ ತುಳು ರಂಗಭೂಮಿಯ ಮೇಲೂ ಕೊರೊನಾ ಹೊಡೆತ ನೀಡಿದ್ದು, 2 ವರ್ಷದಿಂದ ಬಡವಾಗಿದೆ. ಪರ್ಯಾಯ ಮಾರ್ಗವಿಲ್ಲದೆ ಕಲಾವಿದರು ಚಿಂತಿತರಾಗಿದ್ದಾರೆ. ಅವರು ಕೂಡ ಸರಕಾರದಿಂದ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಕಲಾ ಚಟುವಟಿಕೆ-ಚರ್ಚಿಸಿ ಅನುಮತಿ: ದ.ಕ.ದಲ್ಲಿ ಕೊರೊನಾ ಕಡಿಮೆಯಾಗುತ್ತಿರುವ ಕಾರಣ ವಿವಿಧ ವಲಯಗಳಿಗೆ ಅನುಮತಿ ನೀಡಲಾಗಿದೆ. ಯಕ್ಷಗಾನ, ನಾಟಕ ಸೇರಿದಂತೆ ವಿವಿಧ ಕಲಾಪ್ರಕಾರಗಳಿಗೆ ಅನುಮತಿಸುವಂತೆ ಆಗ್ರಹವಿದೆ. ಜನಪ್ರತಿನಿಧಿಗಳು, ಅಧಿಕಾರಿಗಳ ಉಪಸ್ಥಿತಿಯ ಮುಂದಿನ ಜಿಲ್ಲಾ ವಿಪತ್ತು ನಿರ್ವಹಣ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.– ಡಾ| ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ