Advertisement

ಮಾರಣಕಟ್ಟೆ ಮೇಳದಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನಕ್ಕೆ ಸಿದ್ದತೆ

07:45 AM Jul 27, 2017 | |

ಕೊಲ್ಲೂರು:  ಉಡುಪಿ ಜಿಲ್ಲೆಯ ನಂಬಿದ ಭಕ್ತರ ಇಷ್ಟಾರ್ಥ ಪೂರೈಕೆಯ ಕ್ಷೇತ್ರವಾದ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಯಕ್ಷಗಾನ ಮೇಳದ ಆಟವನ್ನು ಕಾಲಮಿತಿಗೆ ಅಳವಡಿಸುವುದರೊಡನೆ ಹೊಸ ಆವಿಷ್ಕಾರದ ರೂಪರೇಷೆ ಗಳೊಡನೆ ಪರಿವರ್ತನೆಗೊಳಿಸಲಿದ್ದು ಮುಂಬರುವ ದಿನಗಳಲ್ಲಿ ರಾತ್ರಿ 8 ಗಂಟೆಯಿಂದ ರಾತ್ರಿ 1.30 ರ ತನಕ ಯಕ್ಷಗಾನ ಪ್ರದರ್ಶನ ನಡೆಯಲಿದೆ.

Advertisement

ಯಕ್ಷಗಾನ ಪರಂಪರೆಯ ಅಂತಃಸತ್ವಕ್ಕೆ ಕುಂದುಂಟಾಗದಂತೆ ಕಲಾಸಕ್ತರಿಗೆ ಹೊಸ ಚೆ„ತನ್ಯ ತುಂಬುವ ನಿಟ್ಟಿನಲ್ಲಿ ಈ ಒಂದು ಆವಿಷ್ಕಾರದ ಕಲಾ ಪ್ರಾಕಾರದ ಹೆಜ್ಜೆ ಹೊಸ ಅನುಭವ ನೀಡುವುದರ ಮೂಲಕ ಯಕ್ಷಗಾನ ಕಲೆಯ ನೆಲೆಯನ್ನು ಉಳಿಸಿ ಬೆಳೆಸುವುದರಲ್ಲಿ ಈ ಪ್ರಯೋಗವು ಯಶಸ್ಸು ಕಂಡುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ. 

ಇತ್ತೀಚಿನ ದಿನಗಳಲ್ಲಿ ಯಕ್ಷಗಾನದ 2 ನೇ ವೇಷಧಾರಿ ರಂಗಸ್ಥಳಕ್ಕೆ ಆಗಮಿಸುವ ಸಂದರ್ಭದಲ್ಲಿ ವೀಕ್ಷಕರ ಸಂಖ್ಯೆ ಬಹಳಷ್ಟು ಕಡಿಮೆಯಾಗುತ್ತಿರುವುದರನ್ನು ಗಮನಿಸಿದ ವಿವಿಧ ಧಾರ್ಮಿಕ ಕ್ಷೇತ್ರಗಳ ಹರಕೆಯ ಮೇಳಗಳ ಮುಖ್ಯಸ್ಥರು ಈ ಒಂದು ಹೊಸ ಪ್ರಯೋಗದತ್ತ ಚಿಂತನ ಮಂಥನ ನಡೆಸಿ ಪ್ರಾಯೋಜಿಕ ನೆಲೆಯಲ್ಲಿ ಈಗಾಗಲೇ ಕಾರ್ಯಾರಂಭಗೊಂಡಿದೆ.

ಕಾಲಮಿತಿಗೆ ಅನುಗುಣವಾಗಿ ಕಥಾಪ್ರಸಂಗವನ್ನು ಸಂಕ್ಷಿಪ್ತಗೊಳಿಸಿ ನುರಿತ ಕಲಾವಿದರ ಅನುಭವದೊಡನೆ ಪ್ರಯೋಗಿಸ ಲಾಗುವುದು. ಮಾರಣಕಟ್ಟೆಯಲ್ಲಿ ಆಗಸ್ಟ್‌ 16,17,18 ರಂದು ಮೇಳದ ಕಲಾವಿದರಿಗೆ ಪ್ರಸಂಗವನ್ನು ಯಾವ ರೀತಿಯಲ್ಲಿ ಕಾಲಮಿತಿಗೆ ಅಳವಡಿಸಿ ಪ್ರಯೋಗಿಸಬಹುದೆಂಬ ಬಗ್ಗೆ ತರಬೇತಿ ನೀಡಲಾಗುವುದು ಎಂದು ದೇಗುಲದ ಅನುವಂಶೀಯ ಮುಕ್ತೇಸರ ಸದಾಶಿವ ಶೆಟ್ಟಿ ತಿಳಿಸಿದ್ದಾರೆ.

ಹೊಸ ಬದಲಾವಣೆಗೆ ಹಿಡಿದ ಕೈಗನ್ನಡಿ
ಆ. 7ರಿಂದ ಮಳೆಗಾಲದ ಹರಕೆ ಆಟ ನಡೆಸುವುದರ ಬಗ್ಗೆ ಚರ್ಚಿಸಿ ಆ ಮೂಲಕ ಮಳೆಗಾಲದ 3 ತಿಂಗಳು ಹರಕೆ ಆಟ ಮುಂದುವರಿಸುವ ಬಗ್ಗೆ ಸಿದ್ದತೆ ನಡೆಸಲಾಗಿದೆ. ಯಕ್ಷಗಾನವನ್ನು ಉಳಿಸಿ ಬೆಳೆಸುವುದರೊಡನೆ ಯಕ್ಷಗಾನ ಪ್ರೇಮಿಗಳು ಹಾಗೂ ಯುವ ಕಲಾವಿದರಿಗೆ ಅದರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುವ ಉದ್ದೇಶದಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನ ಪ್ರಯೋಗದ ಅನಿವಾರ್ಯತೆ ಇದೆ ಎಂದು ಹಿರಿಯ ಯಕ್ಷಗಾನ ವಿಮರ್ಶಕ ಹಾಗೂ ಖ್ಯಾತ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. 

Advertisement

ಸಂಪೂರ್ಣ ಯಕ್ಷಗಾನ ಪ್ರದರ್ಶನಗಳನ್ನು ರಾತ್ರಿ 8 ರಿಂದ ಬೆಳಗಿನ ಜಾವ 4.30ರ ತನಕ  ನಡೆಸಲಾಗುವುದು. ಹರಕೆಯ ಆಟ ಮುಂಗಡವಾಗಿ ಕಾದಿರಿಸುವವರಿಗೆ ಇವೆರಡರಲ್ಲಿ ಯಾವುದನ್ನೂ ಕೂಡಾ ಆಯ್ಕೆ ಮಾಡುವ ಮುಕ್ತ ಅವಕಾಶ ನೀಡಲಾಗಿದೆ ಎಂದು ಸಿ. ರಘುರಾಮ ಶೆಟ್ಟಿ ತಿಳಿಸಿದ್ದಾರೆ. ಕುಂದಾಪುರ ತಾಲೂಕಿನ ಬಹುತೇಕ ದೇಗುಲಗಳ ಯಕ್ಷಗಾನ ಮೇಳವು ಕಾಲಮಿತಿ ಯಕ್ಷಗಾನದ ಒಲವಿರುವವರಿಗೆ ಅವರ ಇಚ್ಛೆಯಂತೆ ಅದಕ್ಕನುಗುಣವಾಗಿ ಮೇಳದ ಪ್ರದರ್ಶನಕ್ಕೆ ಅಣಿಯಾಗುತ್ತಿರುವುದು ಹೊಸ ಬದಲಾವಣೆಗೆ ಹಿಡಿದ ಕನ್ನಡಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next