Advertisement

ಜೀವನಕ್ಕೆ ಬೆಳಕು ನೀಡುವ ಕಲೆ ಯಕ್ಷಗಾನ

11:25 PM Mar 31, 2019 | sudhir |

ಕೊಲ್ಲೂರು: ಜೀವನ ಮೌಲ್ಯ, ನೈತಿಕತೆಯನ್ನು ಸಾರುವ, ಭಕ್ತಿಯ ಪಾರಮ್ಯವನ್ನು ತಿಳಿಸಿಕೊಡುವ ಯಕ್ಷಗಾನ ಕಲೆ, ಉಳಿದೆಲ್ಲ ಭಾರತೀಯ ಕಲೆಗಳಿಗಿಂತ ಭಿನ್ನವಾಗಿದೆ. ಈ ದೈವಿಕ ಕಲೆ ವೃತ್ತಿಯಾಗಿ, ಪ್ರವೃತ್ತಿಯಾಗಿ ತೊಡಗಿಸಿಕೊಂಡ ಕಲಾವಿದರ ಜೀವನಕ್ಕೆ ಬೆಳಕನ್ನು ನೀಡುವುದರ ಜತೆಯಲ್ಲಿ ನೋಡುಗರ ಜೀವನದಲ್ಲಿಯೂ ಬೆಳಕು ಹರಿಯುವಂತೆ ಮಾಡುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಡಾ| ಕನರಾಡಿ ವಾದಿರಾಜ್‌ ಭಟ್‌ ಹೇಳಿದರು.

Advertisement

ಯûಾಂಗಣ ಟ್ರಸ್ಟ್‌ ಬೆಂಗಳೂರು ಅವರು ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇಗುಲದ ಸ್ವರ್ಣಮುಖೀ ಮಂಟಪದಲ್ಲಿ ಆಯೋಜಿಸಿದ್ದ ಯಕ್ಷ ಸಮ್ಮಾನ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಯಕ್ಷ ಸಮ್ಮಾನಕ್ಕೆ ಭಾಜನರಾಗಿರುವ ಹಿರಿಯ ಪ್ರಸಾಧನ ಕಲಾವಿದ ಕೃಷ್ಣಸ್ವಾಮಿ ಜೋಯಿಸರಿಗೆ ಅಭಿನಂದನೆ ಮಾತುಗಳನ್ನಾಡಿದ ಎಚ್‌. ಶ್ರೀಧರ ಹಂದೆ, ಜೋಯಿಸರು ಪ್ರಸಾಧ‌ನ ಕಲೆಯೊಂದಿಗೆ ಮದ್ದಳೆ ವಾದನ, ಭಾಗವತಿಕೆಯಲ್ಲಿಯೂ ಪರಿಣತರು. ಯಾವುದೇ ವಿಭಾಗದಲ್ಲಿಯೂ ಕಲಾವಿದರ ಕೊರತೆ ಉಂಟಾದರೂ ಅದನ್ನು ತುಂಬಬಲ್ಲರು. ಅಲ್ಲದೆ ಚಿತ್ರಕಲೆ, ಮಣ್ಣಿನ ಗಣೇಶ ಮೂರ್ತಿಯ ರಚನೆಯಲ್ಲಿಯೂ ಸಿದ್ಧಹಸ್ತರು. ಈ ಸಮ್ಮಾನ ಅವರ ಬಹುಮುಖ ಪ್ರತಿಭೆಗೆ ಸಂದ ಗೌರವ ಎಂದರು.

ಯûಾಂಗಣ ಟ್ರಸ್ಟ್‌ನ ಮ್ಯಾನೇಜಿಂಗ್‌ ಟ್ರಸ್ಟಿ ವೀಣಾ ಕೆ. ಮೋಹನ್‌ ಅಧ್ಯಕ್ಷತೆ ವಹಿಸಿದ್ದರು.

ಶ್ರೀ ಮೂಕಾಂಬಿಕಾ ಪದವಿಪೂರ್ವ ಕಾಲೇಜು ಕೊಲ್ಲೂರು ಇದರ ಪ್ರಾಂಶು ಪಾಲ ಅರುಣಕುಮಾರ್‌ ಶೆಟ್ಟಿ, ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ರಮೇಶ ಗಾಣಿಗ, ಶ್ರೀ ಮೂಕಾಂಬಿಕಾ ಯಕ್ಷಗಾನ ಕಲಾ ಸಂಘದ ಗಣೇಶ್‌ ಉಡುಪ, ಕಾರ್ಯಕ್ರಮ ಸಂಯೋಜಕ ಸುದರ್ಶನ ಉರಾಳ ಉಪಸ್ಥಿತರಿದ್ದರು.

Advertisement

ಲಂಬೋದರ ಹೆಗಡೆ ನಿಟ್ಟೂರು ಸ್ವಾಗತಿಸಿ, ಸುದೀಪ ಉರಾಳ ವಂದಿಸಿ ದರು. ಉಪನ್ಯಾಸಕ ರಾಘವೇಂದ್ರ ತುಂಗ ಕೋಟ ನಿರೂಪಿಸಿದರು. ಅನಂತರ ಕಲಾವಿದರಿರ ಕೂಡುವಿಕೆಯಿಂದ ಲವ -ಕುಶ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next