Advertisement

“ಯಕ್ಷಗಾನ ಕಲೆಗೆ ಸಿಗುವ ಗೌರವ, ಅಭಿನಂದನೀಯ’

09:29 PM Sep 25, 2019 | Sriram |

ವಿದ್ಯಾನಗರ: ಕಾಸರಗೋಡಿನಲ್ಲಿ ಹುಟ್ಟಿ ಪ್ರಪಂಚದಾದ್ಯಂತ ಜನಜನಿತವಾದ ಯಕ್ಷಗಾನ ಕಲೆಗೆ ಮಾನ್ಯದಲ್ಲಿ ದೊರೆಯುತ್ತಿರುವ ಗೌರವ, ಪ್ರೋತ್ಸಾಹ ಅಭಿನಂದ ನೀಯ.

Advertisement

ಜತನದಿಂದ ಕಲೆಯ ಮೇಲಿನ ಪ್ರೀತಿ, ಅಭಿಮಾನ ವನ್ನು ಕಾಯ್ದುಕೊಂಡು ಕಲೆಯನ್ನು ಪೋಷಿಸುವ ಯಕ್ಷಕಲಾಭಿಮಾನಿಗಳ ಕಲಾಸೇವೆ ಮುಂದೆಯೂ ಸತತವಾಗಿ ಸಾಗಲಿ ಎಂದು ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರು ತಿಳಿಸಿಸಿದರು.

ಅವರು ನವೆಂಬರ್‌ 9ರಂದು ಯಕ್ಷನಾಟ್ಯಾಲಯ ದೇವರೆಕೆರೆ ಮಾನ್ಯ ಯಕ್ಷೊàತ್ಸವ-2019ರ ಆಮಂತ್ರಣಪತ್ರಿಕೆಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರುಈ ಸಂದರ್ಭದಲ್ಲಿ ನಾಟ್ಯಾಲಯದ ಅಧ್ಯಕ್ಷರಾದ ಶ್ಯಾಮಪ್ರಸಾದ್‌ ಮಾನ್ಯ, ಉಪಾಧ್ಯಕ್ಷ ಹರೀಶ್‌ ಮುಂಡೋಡು, ಕಾರ್ಯದರ್ಶಿ ಅನಿಲ್‌ ಕುಮಾರ್‌ ಬೆಳ್ಳೂರಡ್ಕ, ಸುಂದರ ಶೆಟ್ಟಿ ಕೊಲ್ಲಂಗಾನ, ನಾರಾಯಣ ಉಳ್ಳೋಡಿ, ಕೃಷ್ಣ ಮೇಗಿನಡ್ಕ, ವೇಣುಗೋಪಾಲ.ಎಸ್‌, ಹರೀಶ್‌ ದೇವರಕೆರೆ ಮುಂತಾದವರು ಉಪಸ್ಥಿತರಿದ್ದರು.

ಪ್ರೋತ್ಸಾಹ ಶ್ಲಾಘನೀಯ
ಯಕ್ಷಗಾನಕ್ಕೆ ಹೆಸರಾದ ಮಾನ್ಯದಲ್ಲಿ ಖ್ಯಾತ ಯಕ್ಷಗುರು ರಾಕೇಶ್‌ರೈ ಅಡ್ಕ ನೇತೃತ್ವದ ಯಕ್ಷನಾಟ್ಯಾಲಯದ ನೇತೃತ್ವದಲ್ಲಿ ದ್ವಿತೀಯ ಬಾರಿಗೆ ಮಾನ್ಯ ಯಕ್ಷೊàತ್ಸವ ಜರಗಲಿದೆ. ಹಲವು ವೈವಿಧ್ಯಗಳಿಂದ ಕೂಡಿದ ಕಾರ್ಯಕ್ರಮ ಇದಾಗಿದ್ದು ಯಕ್ಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಯಕ್ಷ ಕಲಾಪೋಷಣೆಗೆ ಹೆಸರಾದ ಮಾನ್ಯದ ಜನತೆಯ ಉತ್ಸಾಹ ಹಾಗೂ ಪ್ರೋತ್ಸಾಹ ಶ್ಲಾಘನೀಯ ಎಂದು ಕೊಲ್ಲಂಗಾನ ಸುಂದರ ಶೆಟ್ಟಿ ಅವರು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next