Advertisement
ಈ ಬಾರಿ ಅವರಿಗೆ ಸಾಥ್ ನೀಡಿದವರು ಹಿಂದೂಸ್ಥಾನಿ ಸಂಗೀತ ವಿದ್ವಾನ್ ಗಜಾನನ ಹೆಬ್ಟಾರರು. ಭಾಗವತರ ಪ್ರಬುದ್ಧ ಮಾತುಗಳು, ಹೆಬ್ಟಾರರ ಅನುಭವದ ನುಡಿಗಳು ಕಾರ್ಯಕ್ರಮಕ್ಕೆ ಉತ್ತಮ ಆರಂಭ ನೀಡಿದವು. ಗಣಪತಿ ಸ್ತುತಿಯನ್ನು ಯಕ್ಷಗಾನದ ಪದ್ಯ ಶೈಲಿಯಲ್ಲಿ ಹಾಡಿದ ಭಾಗವತರಿಗೆ ಸರಸ್ವತಿ ರಾಗದ ದೇವಿಸ್ತುತಿಯ ಪ್ರಾರ್ಥನೆಯ ಸಾಥ್ ಹೆಬ್ಟಾರರಿಂದ ದೊರಕಿತು. ಏಕತಾಳದಲ್ಲಿ ಸುಂದರ ತಾನ್‌ಗಳೊಂದಿಗೆ ಪೋಣಿಸಿದ ಈ ರಾಗ ಸಭೆಗೆ ಬೇಕಾದ ಉಠಾವ್ ನೀಡಿತು.”ವನದೇವಿಯ ವನರಾಸಿಯ …’ ಭಾಗವತರ ಪದ್ಯದಲ್ಲಿ ರಾಗದ ಸ್ಪಷ್ಟತೆ ಇರದಿದ್ದರೂ ಅವರ ಕಂಠಸಿರಿಯಲ್ಲಿ ಉತ್ತಮವಾಗಿ ಮೂಡಿ ಬಂತು. ಅದೇ ಹಾಡನ್ನು ಮಾರುಬಿಹಾಗ್ ರಾಗದಲ್ಲಿ ಎತ್ತಿಕೊಂಡ ಹೆಬ್ಟಾರರು ಶಾಸ್ತ್ರೀಯತೆಯ ಸ್ಪರ್ಷ ನೀಡಿದರು.ರಾಗ ಪಟದೀಪ, ಹರಿಕಾಂಭೋಜಿ ಪದ್ಯಗಳು ಯಕ್ಷಗಾನದ ಶೈಲಿಯಲ್ಲಿ ಕೇಳುಗರಿಗೆ ಖುಷಿ ನೀಡುವ ಹಾಗೆ ಭಾಗವತರಿಂದ ಹಾಡಲ್ಪಟ್ಟವು. ಮಾಜ್ ಖಮಾಜ್ ರಾಗದ “ಜಮುನಾ ಕಿನಾರೆ …’ ಹೆಬ್ಟಾರರ ಲಘುಶಾಸ್ತ್ರೀಯ ಶೈಲಿ ಮುದ ನೀಡುವಂತಿತ್ತು. ಭೀಮ ಪಲಾಸಿನಿ, ಸಾರಂಗ ರಾಗದ ವಿಸ್ತಾರ ಚೆನ್ನಾಗಿ ಪ್ರಸ್ತುತ ಪಡಿಸಿದರು.”ಎಲ್ಲೆಲ್ಲೂ ಸೊಬಗಿದೆ ..’ ಗೀತೆಯ ಜುಗಲಬಂಧಿ ಕಾರ್ಯಕ್ರಮಕ್ಕೆ ಸೂಕ್ತ ಮುಕ್ತಾಯ ನೀಡಿತು. ಅದರಲ್ಲಿ ಬರುವ ಕೋಗಿಲೆಯ “ಕುಹೂ ಕುಹೂ …’ ಕೂಗಿಗೆ ಹೆಬ್ಟಾರರ ಕಂಠ ಪಂಚಮದ ಸುಖವನ್ನು ನೀಡಿತು.ಇಬ್ಬರು ಅತ್ಯುತ್ತಮ ಕಲಾವಿದರಿಂದ ನಡೆಸಲ್ಪಟ್ಟ ಈ ಜುಗಲಬಂಧಿ ಒಂದು ಒಳ್ಳೆಯ ಪ್ರಯೋಗ ಅನ್ನಿಸಿತು.ಮೃದಂಗದಲ್ಲಿ ಎನ್.ಜಿ. ಹೆಗಡೆ, ತಬಲಾದಲ್ಲಿ ಅಕ್ಷಯ ಭಟ್ ಹಂಸಳ್ಳಿಸಾಥ್ ನೀಡಿದರು. ಅವರಿಬ್ಬರ ತನಿ ಆವರ್ತನ ಚೇತೋಹಾರಿಯಾಗಿತ್ತು. ಧಾರೇಶ್ವರರು ಮೃದಂಗವನ್ನು, ತಬಲಾವನ್ನು ಕೂಡಾ ಮಾತನಾಡಿಸುತ್ತಿದ್ದ ಪರಿ (ಇದು ಶಾಸ್ತ್ರೀಯ ಸಂಗೀತದಲ್ಲಿ ಸಾಧ್ಯವಾಗುವುದಿಲ್ಲ) ವಿಶೇಷವಾಗಿತ್ತು.ಒಂದು ವಿಶಿಷ್ಟ ಪ್ರಯೋಗ ಗಾಯಕ ಮತ್ತು ವಾದಕರ ಪ್ರತಿಭೆಯಿಂದ ಅದ್ಭುತವಾಗಿ ಮೂಡಿ ಬಂತು.
Advertisement
ಯಕ್ಷ ಗಾಯನ -ಹಿಂದುಸ್ಥಾನಿ ಸಂಗೀತ ಜುಗಲ್‌ಬಂದಿ
06:00 AM Nov 30, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.