Advertisement

Yakshagana; ಖ್ಯಾತ ಪ್ರಸಾಧನ ಕಲಾವಿದ ಬಾಲಕೃಷ್ಣ ನಾಯಕ್‌ ವಿಧಿವಶ

09:25 PM Jul 04, 2024 | Team Udayavani |

ಬ್ರಹ್ಮಾವರ: ಪ್ರಸಿದ್ಧ ಯಕ್ಷಗಾನ ವೇಷ ಭೂಷಣ ತಯಾರಕ ಹಂದಾಡಿ ಬಾಲಕೃಷ್ಣ ನಾಯಕ್‌(76) ಅವರು ಜು.4ರಂದು ನಿಧನ ಹೊಂದಿದ್ದಾರೆ.

Advertisement

ಖ್ಯಾತನಾಮರಾದ ಹಂದಾಡಿ ಸುಬ್ಬಣ್ಣ ಭಟ್ಟರ ತಂಡದಲ್ಲಿ ಬಾಲ್ಯದಲ್ಲೇ ಗುರುತಿಸಿಕೊಂಡು ಯಕ್ಷಗಾನ ವೇಷ ಭೂಷಣ ನಿರ್ವಹಣೆಯಲ್ಲಿ ಸಕ್ರಿಯರಾಗಿದ್ದರು. ಅನಂತರ ಮಾವ ದೇವೇಂದ್ರ ನಾಯಕರ ತಂಡದಲ್ಲಿ ತೊಡಗಿಕೊಂಡರು. 1990ರಲ್ಲಿ ಶ್ರೀ ಗಜಾನನ ಯಕ್ಷಗಾನ ವೇಷ ಭೂಷಣ ತಯಾರಿಕಾ ಸಂಸ್ಥೆ ಪ್ರಾರಂಭಿಸಿ ಕೊನೆಯವರೆಗೂ ಸೇವೆ ನೀಡುತ್ತಿದ್ದರು. ಮೃತರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ.

ನೂರಾರು ಯಕ್ಷಗಾನ ಸಂಘ  ಸಂಸ್ಥೆಗಳು, ಸಾವಿರಾರು ಯಕ್ಷಗಾನ ಹವ್ಯಾಸಿ ಕಲಾವಿದರಿಗೆ ಬಣ್ಣ ಹಚ್ಚಿ, ವೇಷಭೂಷಣ ಕಟ್ಟಿರುವ ಖ್ಯಾತಿ ಬಾಲಕೃಷ್ಣ ನಾಯಕ್‌ ಅವರದ್ದಾಗಿದೆ. ಪರಂಪರೆಯ ಮುಖವರ್ಣಿಕೆ ಗುಟ್ಟು ಬಲ್ಲವರಾಗಿದ್ದರು. ಪ್ರಸಂಗಕ್ಕೆ ಅನುಗುಣವಾಗಿ ವೇಷಗಳನ್ನು ಸಿದ್ದಪಡಿಸಿ ರಂಗಕ್ಕೆ ಕಳುಹಿಸುವಲ್ಲಿ ನುರಿತವರಾಗಿದ್ದರು.

ಕರ್ನಾಟಕ ಸರಕಾರದ ಯಕ್ಷಗಾನ ಅಕಾಡೆಮಿಯ ಕಲಾಸಿರಿ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ, ಕಲಾರಂಗ, ಬೆಂಗಳೂರಿನ ರಂಗಸ್ಥಳ, ಕರ್ನಾಟಕ ಕಲಾದರ್ಶಿನಿ, ಅಜಪುರ ಯಕ್ಷಗಾನ ಸಂಘದ ದತ್ತಿನಿಧಿ ಪ್ರಶಸ್ತಿ ಸಹಿತ ನೂರಾರು ಸಮ್ಮಾನಗಳಿಗೆ ಪಾತ್ರರಾಗಿದ್ದರು. ಹಂದಾಡಿ ಶ್ರೀ ನಂದಿಕೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ, ಶ್ರೀ ಬೊಬ್ಬರ್ಯ ಪರಿಹಾರ ದೇವಸ್ಥಾನ ಆಡಳಿತ ಸಮಿತಿ, ಶ್ರೀ ರಾಮ ಭಜನ ಮಂಡಳಿಯ ಅಧ್ಯಕ್ಷರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next