Advertisement
ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ವತಿಯಿಂದ ಸೂರಂಬೈಲು ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ “ಶೇಣಿ ಸಂಸ್ಮರಣೆ ಹಾಗೂ ಯಕ್ಷ-ಸಂವಾದ’ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಉಪನ್ಯಾಸಗೈದು ಮಾತನಾಡಿದರು.
ದಿ| ಶೇಣಿಯವರು ಬಾಲ್ಯದಲ್ಲಿ ಕಥಾ ಸಂಕೀರ್ತನೆಗಳ ಮೂಲಕ ಕಲಾ ಸೇವೆಯನ್ನು ಆರಂಭಿಸಿ ಬಳಿಕ ಪರಿಸರದ ಯಕ್ಷಗಾನ ಆಟ-ಕೂಟಗಳಿಂದ ಪ್ರಭಾವಿತರಾಗಿ ಬಳಿಕ ತೊಡಗಿಸಿಕೊಂಡ ಯಕ್ಷಗಾನೋಪಾಸನೆ ಮತ್ತೂಬ್ಬರಿಂದ ಮಾಡಲಾಗದ ದಾಖಲೆಯ ಮಟ್ಟಕ್ಕೇರಿಸಿ ರುವುದು ಶೇಣಿಯವರದ್ದೇ ಅಳಿಸಲಾರದ ಮಹಾನ್ ಕೊಡುಗೆಗಳಾಗಿ ನಮಗೆ ಪ್ರೇರಣೆ ನೀಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಭಟ್ ಅವರು ವಿದ್ಯಾರ್ಥಿಗಳು ಯಕ್ಷಗಾನಕ್ಕೆ ಸಂಬಂ ಧಿಸಿ ಕೇಳಿದ ಅನೇಕ ಪ್ರಶ್ನೆಗಳಿಗೆ ಮತ್ತು ಸಂಶಯ ಗಳಿಗೆ ಸಮರ್ಪಕವಾಗಿ ಉತ್ತರಿಸಿ ಮಾರ್ಗದರ್ಶನ ನೀಡಿದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾ ಧ್ಯಕ್ಷ ಶಿವಾನಂದ ಪೆರ್ಣೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ದರು. ಪ್ರಭಾರ ಮುಖ್ಯೋಪಾಧ್ಯಾಯ ರಾಜೇಶ್ ಮಾಸ್ಟರ್ ಅಧ್ಯಕ್ಷತೆ ವಹಿಸಿ ದ್ದರು. ಶಾಲಾ ನೌಕರ ಸಂಘದ ಕಾರ್ಯ ದರ್ಶಿ ಕಿರಣ್ ಮಾಸ್ಟರ್ ಶುಭ ಹಾರೈಸಿ ದರು. ಶಶಿಕಲಾ ಟೀಚರ್ ಸ್ವಾಗತಿಸಿ, ಪ್ರಸನ್ನಕುಮಾರಿ ಟೀಚರ್ ವಂದಿಸಿದರು. ಮೋಹನ ನಾರಾಯಣ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ಟೀಚರ್ ಸಂಯೋಜಿಸಿದ್ದರು.ದಿ| ಶೇಣಿಯವರ ಪುಣ್ಯ ತಿಥಿಯ ಭಾಗವಾಗಿ ಕಾರ್ಯಕ್ರಮ ಆಯೋ ಜಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು.
Related Articles
-ದಿವಾಣ ಶಿವಶಂಕರ ಭಟ್
Advertisement