Advertisement

“ಯಕ್ಷಗಾನದಲ್ಲಿ ನಟನೆ, ನಾಟ್ಯ, ಭಾಗವತಿಕೆಗೆ ಇರುವ ಪ್ರಾಶಸ್ತ್ಯ ವೇಷಕ್ಕೂ ಇದೆ’

11:38 PM Oct 09, 2019 | sudhir |

ಬದಿಯಡ್ಕ: ಯಕ್ಷಗಾನದ ಪ್ರಮುಖ ಆಕರ್ಷಣೆ ಬಣ್ಣದ ವೇಷಗಳು. ಮುಗಿಲು ಮುಟ್ಟುವ ಅಟ್ಟಹಾಸ, ಗಗನಕ್ಕೆ ಚಿಮ್ಮುವ ಅಗ್ನಿಜಿಹ್ವಾ, ಬೆಚ್ಚಿಬೀಳಿಸುವ ನೋಟ ಎಂತವರ ಎದೆಯನ್ನೂ ನಡುಗಿಸುತ್ತದೆ. ಯಕ್ಷಗಾನದಲ್ಲಿ ನಟನೆ, ನಾಟ್ಯ, ಭಾಗವತಿಕೆಗೆ ಇರುವ ಪ್ರಾಶಸ್ತŒÂ ವೇಷಕ್ಕೂ ಇದೆ. ಅದರಲ್ಲೂ ಬಣ್ಣದ ವೇಷಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ ಆದುದರಿಂದ ಯಕ್ಷಗಾನ ವರ್ಣರಂಜಿತವಾದ ಕಲೆ ಎಂದು ‰‰‰ಹಿರಿಯ ಯಕ್ಷಗಾನ ಕಲಾವಿದ ಕೋಳ್ಯೂರು ರಾಮಚಂದ್ರ ರಾವ್‌ ಅವರು ಹೇಳಿದರು.

Advertisement

ಅವರು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೆ„ಯರ್‌ ಸೆಕೆಂಡರಿ ಶಾಲೆಯಲ್ಲಿ ಜರಗಿದ ಬಣ್ಣದ ಮಾಲಿಂಗ ಸಂಸ್ಮರಣಾ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಬಣ್ಣದ ವೇಷಗಳ ಗತ್ತು, ವಿಶಿಷ್ಟ ಬಣ್ಣಗಾರಿಕೆಗೆ ಒಪ್ಪುವಂತ ಸ್ವರಭಾವ, ತಾಳಕ್ಕೆ ತಕ್ಕ ಹೆಜ್ಜೆ, ರಂಗಕಲ್ಪನೆ, ಕರ್ಕಶ ಸ್ವರದಲ್ಲೂ ಸ್ಪಷ್ಟತೆಯ ಮಾತುಗಳು ಕಲಾವಿದನ ಕಲಾಚತುರತೆಗೆ ಹಿಡಿದ ಕೈಗನ್ನಡಿ. ಮಾತ್ರವಲ್ಲದೆ ಅದರ ಹಿಂದಿರುವ ಪರಿಶ್ರಮ, ತೆಗೆದುಕೊಳ್ಳುವ ಸಮಯ, ವೇಷಭೂಷಣಗಳ ಭಾರವನ್ನೂ ಮರೆತು ತನ್ನ ಪಾತ್ರಕ್ಕೆ ಜೀವ ತುಂಬುವ ರೀತಿ ಮೆಚ್ಚತಕ್ಕದ್ದು.

ಬಣ್ಣದ ಲೋಕದಲ್ಲಿ ತನ್ನ ವಿಭಿನ್ನ ಶೈಲಿಯ ಮೂಲಕ ಆಸ್ತಿತ್ವವನ್ನು ಉಳಿಸಿಕೊಂಡ, ಯಕ್ಷರಂಗದ ಮಹಾನಾಯಕನಾಗಿ ಮೆರೆದ ಬಣ್ಣದ ಮಾಲಿಂಗರು ಪ್ರಾತಃ ಸ್ಮರಣೀಯರು ಎಂದವರು ಶ್ಲಾಘಿಸಿದರು.

ಬಣ್ಣದ ಮಾಲಿಂಗ ಯಕ್ಷ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಪಂಜತ್ತೂಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ|ಚಂದ್ರಶೇಖರ ದಾಮ್ಲೆ ಸಂಸ್ಮರಣಾ ಭಾಷಣ ಮಾಡಿದರು.

Advertisement

ಪ್ರಶಸ್ತಿ ಸಮ್ಮಾನದ ಸಡಗರ
ತೆಂಕುತಿಟ್ಟಿನ ಯಕ್ಷಗಾನ ಬಣ್ಣದ ವೇಷ ಮತ್ತು ಪರಂಪರೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ ಆರ್ಥಪೂರ್ಣ ಸಮಾರಂಭದಲ್ಲಿ ಬಣ್ಣದ ಮಹಾಲಿಂಗ ಯಕ್ಷ ಪ್ರಶಸ್ತಿಯನ್ನು ತೆಂಕುತಿಟ್ಟಿನ ಸುಪ್ರಸಿದ್ಧ ಹಿರಿಯ ಬಣ್ಣದ ವೇಷಧಾರಿಗಳಾದ ಮರ್ಕಂಜ ಬೊಮ್ಮಾರು ಐತಪ್ಪ ಗೌಡರಿಗೆ ಹಾಗೂ ರಂಗ ನಿರ್ದೇಶಕ ಜೀವನ್‌ ರಾಮ್‌ ಸುಳ್ಯರವರಿಗೆ ಬಣ್ಣದ ಮಹಾಲಿಂಗರ ಶಾಶ್ವತ ನೆನಪನ್ನು ಉಳಿಸುವಲ್ಲಿ ಸಹಕರಿಸಿದ ಮಹಾನುಭಾವರಿಗೆ ನೀಡುವ ಬಣ್ಣದ ಮಹಾಲಿಂಗ ಸƒ¾ತಿ ಪುರಸ್ಕಾರವನ್ನು ನೀಡಲಾಯಿತು.

ಇದೇ ಸಂದರ್ಭದಲ್ಲಿ ತೆಂಕುತಿಟ್ಟಿನ ಹಿರಿಯ ನಿವೃತ್ತ ಕಲಾವಿದರಾದ ಸರಾವು ತೇರಪ್ಪ ಪಾಟಾಳಿಯವರನ್ನು ಸನ್ಮಾನಿಸಲಾಯಿತು. ಕುಂಬಳೆ ಉಪ ಜಿಲ್ಲಾ ವಿದ್ಯಾಧಿಕಾರಿಗಳಾದ ಯತೀಶ್‌ ಕುಮಾರ್‌ ರೈ ಮುಳ್ಳೇರಿಯಾ ಅಭಿನಂದನಾ ಭಾಷಣ ಮಾಡಿದರು. ನೀರ್ಚಾಲು ಮಹಾಜನ ವಿದ್ಯಾ ಸಂಸ್ಥೆಯ ಪ್ರಬಂಧಕ ಜಯದೇವ ಖಂಡಿಗೆ, ಪ್ರತಿಷ್ಠಾನದ ಸದಸ್ಯರಾದ ಸುಬ್ಬಪ್ಪ ಪಟ್ಟೆ, ನಾರಾಯಣ ತೋರಣ ಗುಂಡಿ, ಸಚಿತ್‌ ಕಲ್ಮಡ್ಕ, ನಿವೃತ್ತ ಉಪ ತಹಸೀಲ್ದಾರ್‌ಮಹಾಲಿಂಗ ಮಂಗಳೂರು ಅವರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ನಾರಾಯಣ ದೇಲಂಪಾಡಿ ಸ್ವಾಗತಿಸಿ, ರವೀಂದ್ರ ಮಾಸ್ತರ್‌ ನೀರ್ಚಾಲು ವಂದಿಸಿದರು.

ಪರಂಪರೆಯನ್ನು ಮೇಳೆ„ಸಿ, ಪ್ರೇಕ್ಷಕ ಹƒದಯದಲ್ಲಿ ಸಿರಿವಂತಿಕೆಯ ಛಾಪು ಮೂಡಿಸುವಲ್ಲಿ ಶೂರ್ಪನಖಾ-ಖರಾಸುರ ಹಾಗೂ ಮಹಿರಾವಣ ಯಕ್ಷಗಾನ ಬಯ ಲಾಟ ಯಶಸ್ವಿಯಾಯಿತು. ಅನುಭವೀ ಕಲಾವಿದರೊಂದಿಗೆ ಯುವ ಕಲಾವಿದರೂ ಸೇರಿ ರಂಗದಲ್ಲಿ ಯಕ್ಷಲೋಕವನ್ನೇ ತೆರೆದಿಟ್ಟರು.

ಬಣ್ಣದ ಮಾಲಿಂಗ ಅವರ ಮಾಹಿತಿ ಯನ್ನೊಳಗೊಂಡ ವೀಡಿಯೋ ಪಕ್ಕದ ಪರದೆ ಯಲ್ಲಿ ಮೂಡಿ ಬರುತ್ತಿತ್ತು. ಜೀವನ, ಮಾತಿನ ಮೋಡಿ, ಛಾಯಾಚಿತ್ರಗಳು, ತುಣುಕುಗಳು ನೆನಪುಗಳಿಗೆ ಮರುಜೀವ ನೀಡಿತು.

ಅಜ್ಜನೇ ಪ್ರೇರಣೆ
ಬಾಲ್ಯದಲ್ಲಿ ಮಾಲಿಂಗಜ್ಜನ ಆಟಗಳನ್ನು, ಬಣ್ಣದ ವೇಷದ ಸೊಬಗನ್ನು ನೋಡುತ್ತಾ ಬೆಳೆದ ನನ್ನ ಕುತೂಹಲಗಳಿಗೆ ಸಮಾಧಾನದ ಉತ್ತರ ನೀಡುವ ಮೂಲಕ ಕಲಾವಿದನಗುವ ಕನಸನ್ನು ಕಟ್ಟಿಕೊಟ್ಟವರಲ್ಲಿ ಮಾಲಿಂಗಜ್ಜನ ಪಾತ್ರ ಹಿರಿದು. ಯಾವುದೇ ಸಂದೇಹಗಳಿಗೂ ಸ್ಪಷ್ಟ ಉತ್ತರ ನೀಡಿ, ತನ್ನ ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ಕಲಾರಾಧನೆ, ಸಮಯ ಪ್ರಜ್ಞೆ, ಜ್ಞಾನದಾಹ, ಸ್ಪಷ್ಟತೆ, ಹೊಂದಿಕೊಂಡು ಬೆರೆತು, ಅರಿತು ಬಾÙಲು ಮಾರ್ಗದರ್ಶನ ನೀಡುತ್ತಿದ್ದರು. .

– ಜೀವನ್‌ ರಾಮ್‌ ಸುಳ್ಯ ಪ್ರಶಸ್ತಿ ಪುರಸ್ಕೃತರು.

ಸ್ವಾಗತಾರ್ಹ
ಪಾರ್ತಿಸುಬ್ಬನ ಊರಾದ ಕಾಸರಗೋಡಿನಲ್ಲಿ ಅರ್ಥವತ್ತಾದ ಕಾರ್ಯಕ್ರಮವನ್ನು ಆಯೋಜಿಸಿರುವುದು ಸ್ವಾಗತಾರ್ಹ.
ಯಕ್ಷಪ್ರೇಮಿಗಳ ಊರಾದ ನೀರ್ಚಾಲಿನಲ್ಲಿ ನಡೆಯುತ್ತಿರುವುದು ಸಂತಸ ನೀಡಿದೆ. ಕಾರ್ಯಕ್ರಮವು ಸಂಘಟಕರ ಅವಿರತ ಪರಿಶ್ರಮ, ಉತ್ಸಾಹದ ಫಲವಾಗಿ ಮೂರನೇ ವರ್ಷಕ್ಕೆ ಕಾಲಿಟ್ಟಿರುವುದು ಹೆಮ್ಮೆಯ ವಿಚಾರ.

– ಕೆ.ಎನ್‌. ಕೃಷ್ಣ ಭಟ್‌ ಅಧ್ಯಕ್ಷರು, ಬದಿಯಡ್ಕ ಪಂಚಾಯತ್‌

Advertisement

Udayavani is now on Telegram. Click here to join our channel and stay updated with the latest news.

Next