Advertisement

ಯಕ್ಷಗಾನ ಅಕಾಡೆಮಿ: ಡಾ. ಜಿ.ಎಲ್.ಹೆಗಡೆ‌ ಅಧಿಕಾರ ಸ್ವೀಕಾರ

03:47 PM Jan 14, 2022 | Team Udayavani |

ಬೆಂಗಳೂರು: ಡಾ. ಜಿ.ಎಲ್.ಹೆಗಡೆ‌ ಅವರು ಶುಕ್ರವಾರ ಯಕ್ಷಗಾನ ಅಕಾಡೆಮಿಯ‌ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

Advertisement

ಅಧಿಕಾರ ಸ್ವೀಕರಿಸಿ ಮಾತನಾಡಿದ ಜಿ‌.ಎಲ್.ಹೆಗಡೆ, ಯಕ್ಷಗಾನ ಉಳಿದರೆ ಕನ್ನಡ ಉಳಿಯುತ್ತದೆ. ಅಕಾಡೆಮಿಯೂ ಉಳಿಯುತ್ತದೆ. ಯಕ್ಷಗಾನ ರಾಜ್ಯದ, ದೇಶದ ಕಲೆಯಾಗಬೇಕು. ಪ್ರಪಂಚದ ಎಲ್ಲಡೆ ಮನ ಗೆಲ್ಲಿಸುವ ಕೆಲಸ ಆಗಬೇಕು. ಎಲ್ಲರೂ ಸೇರಿ ಯಕ್ಷಗಾನ, ಮೂಡಲಪಾಯದ ಏಳಿಗೆಗೆ ಕೆಲಸ‌ ಮಾಡಬೇಕು. ಎಲ್ಲರೂ ಒಂದಾಗಿ ಕೆಲಸ ಮಾಡಿ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದರು.

ಯಕ್ಷಗಾನ ಅಕಾಡೆಮಿ ನೀಡುವ ಗೌರವ ಪ್ರಶಸ್ತಿ, ಯಕ್ಷಸಿರಿ‌ ಪ್ರಶಸ್ತಿ ಪ್ರದಾನ ಆಗಬೇಕಾಗಿದ್ದು, ಕೋವಿಡ್ ಪರಿಣಾಮ ನೋಡಿಕೊಂಡು, ಸಚಿವರ ಜತೆ‌ ಸಮಾಲೋಚನೇ ನಡೆಸಿ ದಿನಾಂಕ‌ ನಿಗದಿ ಮಾಡಲಾಗುತ್ತದೆ ಎಂದರು.

ಯಕ್ಷಗಾನದ ಪರಿಚಾರಕರಾದ ನಮಗೆ ಇಂಥದೊಂದು ಸೇವೆ‌ ಸಲ್ಲಿಸಲು ಸರಕಾರ ಅವಕಾಶ‌ಮಾಡಿಕೊಟ್ಟಿದೆ. ಈ ಜವಾಬ್ದಾರಿ ನಿರ್ವಹಿಸಲು ಅವಕಾಶ ಕೊಟ್ಟವರಿಗೆ ಕೃತಜ್ಞತೆ ಸಲ್ಲಿಸಿದರು.

Advertisement

ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ಶಿವರುದ್ರಪ್ಪ, ಜಾನಪದ ಅಕಾಡೆಮಿಯ ಜಾಹ್ನವಿ,ಸದಸ್ಯ ಶ್ರೀನಿವಾಸ ಸಾಸ್ತಾನ, ಶೇಖರ, ಸೆಲ್ಕೋ ಇಂಡಿಯಾದ ಸಿಇಓ ಮೋಹನ ಹೆಗಡೆ ಹೆರವಟ್ಟ, ಹಿರಿಯ ಲೆಕ್ಕಪರಿಶೋಧಕ ಗೋಪಾಲಕೃಷ್ಣ ಹೆಗಡೆ, ಡಾ. ಶ್ರೀಪಾದ ಹುಕ್ಲಮಕ್ಕಿ, ಯಕ್ಷಗಾನ ಸಂಶೋಧಕಿ ಮಮತಾ ಜೋಶಿ,ಉದ್ಯಮಿ ಶಾಂತಾರಾಮ‌ ಭಟ್ಟ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next