Advertisement

ಸಂಸ್ಕೃತಿ ಕಲಿಸುತ್ತದೆ ಯಕ್ಷಗಾನ: ಉಪೇಂದ್ರ ಪೈ

06:39 PM Mar 01, 2021 | Team Udayavani |

ಶಿರಸಿ: ಯಕ್ಷಧ್ವನಿ ಸಂಘಟನೆ ವಾರ್ಷಿಕೋತ್ಸವ ಯಕ್ಷಗಾನ ತಾಳಮದ್ದಳೆ ಸಪ್ತಾಹಕ್ಕೆ ನಗರದ ಟಿಎಂಎಸ್‌ ಸಭಾಂಗಣದಲ್ಲಿ ಉದ್ಯಮಿ ಉಪೇಂದ್ರ ಪೈ ಚಾಲನೆ ನೀಡಿದರು.

Advertisement

ನಂತರ ಮಾತನಾಡಿದ ಅವರು, ಸಂಸ್ಕಾರ, ಸಂಸ್ಕೃತಿಯ ಸಂದೇಶ ನೀಡುವ ಕಲೆ ಯಕ್ಷಗಾನ ಆಗಿದೆ. ಇದನ್ನು ಉಳಿಸಿ ಬೆಳಸಿಕೊಂಡುಹೋಗುವುದು ನಮ್ಮ ಜವಾಬ್ದಾರಿ. ಕಲೆ ಉಳಿದರೆ ಕಲಾವಿದ ಕೂಡ ಬೆಳೆಯುತ್ತಾನೆ. ಇಂಥ ಕಲೆಹಾಗೂ ಕಲಾವಿದರ ಉಳಿವಿಗೆ ನಮ್ಮ ಸೇವಾಟ್ರಸ್ಟ್‌ನಿಂದ ಶಿರಸಿ ಸಿದ್ದಾಪುರದಲ್ಲಿ ಒಟ್ಟು ಹತ್ತು ಕಾರ್ಯಕ್ರಮಗಳಿಗೆ ನೆರವು ನೀಡುತ್ತೇವೆ ಎಂದರು.

ಅಕಾಡೆಮಿ ಸದಸ್ಯೆ ನಿರ್ಮಲಾ ಹೆಗಡೆ ಗೋಳಿಕೊಪ್ಪ, ಯಕ್ಷಗಾನದ ಅಕಾಡೆಮಿ ತರಬೇತಿಶಿಬಿರ, ಹಿರಿಯರ ನೆನಪು ಕಾರ್ಯಕ್ರಮ ನಡೆಸುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ| ಶಿವರಾಮ ಕೆ.ವಿ. ಮಾತನಾಡಿ, ಕಲೆಗಳು ಕೇವಲ ಮನರಂಜನೆಗಲ್ಲ.ಪ್ರೇಕ್ಷಕರ ಉನ್ನತಿಗೆ ಕಾರಣವಾಗುತ್ತಿದೆ ಎಂದರು. ವಿಜ್ಞಾನಿ ಗೋಪಾಲಕೃಷ್ಣ ಹೆಗಡೆ ಕಲಗದ್ದೆ, ಸಮ್ಮಾನಿತರಾದ ಶಂಭು ಶರ್ಮಾ, ಸುಬ್ರಾಯಭಟ್ಟ ಗಡಿಗೆಹೊಳೆ, ಶ್ರೀಕಾಂತ ಹೆಗಡೆ ಪೇಟೆಸರ,ಗಣಪತಿ ಭಟ್ಟ ತಡುಗುಣಿ, ವೆಂಕಟ್ರಮಣ ಹೆಗಡೆಕುಪ್ಪನಮನೆ, ಪರಮೇಶ್ವರ ಹೆಗಡೆ ಕಂಚಿಕೈ ಇದ್ದರು.

ವಿಜಯನಳಿನಿ ರಮೇಶ ಅಭಿನಂದನಾ ಮಾತನಾಡಿದರು. ಯಕ್ಷಧ್ವನಿ ಸಂಘಟನೆಸಂಸ್ಥಾಪಕ ಅಧ್ಯಕ್ಷ, ವಾಗ್ಮಿ ಗ.ನಾ. ಭಟ್ಟ ಪ್ರಾಸ್ತಾವಿಕಮಾತನಾಡಿದರು. ಅಧ್ಯಕ್ಷ ರಾಮಚಂದ್ರ ಭಟ್ಟ ಸ್ವಾಗತಿಸಿದರು. ಸುರೇಶ ಹಕ್ಕಿಮನೆ ನಿರೂಪಿಸಿದರು. ಕಾರ್ಯದರ್ಶಿ ಪ್ರಸನ್ನ ಭಟ್ಟ ಓಣಿಕೈ ವಂದಿಸಿದರು.

Advertisement

ಬಳಿಕ ಪಟ್ಟಾಭಿಷೇಕ ಯಕ್ಷಗಾನ ತಾಳ ಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಅನಂತ ದಂತಳಿಕೆ, ಶಂಕರ ಭಾಗವತ, ಅರ್ಥಗಾರಿಕೆಯಲ್ಲಿ ಶಂಭುಶರ್ಮಾ, ಗಣಪತಿ ಭಟ್ಟ ಸಂಕದಗುಂಡಿ,ಗ.ನಾ. ಭಟ್ಟ ಮೈಸೂರು, ಡಾ| ವಿನಾಯಕ ಭಟ್ಟ ಗಾಳಿಮನೆ, ಸುರೇಶ ಶೆಟ್ಟಿ ಪೂಂಜಲಕಟ್ಟೆ,ರಾಮಚಂದ್ರ ಭಟ್ಟ ಶಿರಳಗಿ ಇತರರು ಪಾಲ್ಗೊಂಡಿದ್ದರು.

ಸಪ್ತಾಹದ ಎರಡನೇ ದಿನ ಮಾ.1 ರ ಸಂಜೆ 4:30ಕ್ಕೆ ಮಾ ನಿಷಾದ ಆಖ್ಯಾನ ನಡೆಯಲಿದೆ. ಕಲಾವಿದರಾಗಿ ದಂತಳಿಕೆ, ಶಂಕರ ಭಾಗವತ್‌,ಪ್ರಸನ್ನ ಹೆಗ್ಗಾರ, ವಿ.ಕೆರೇಕೈ, ಗಾಳಿಮನೆ, ಗ.ನಾ.ಭಟ್‌, ಪವನಕಿರಣ ಕಿರನಕೆರೆ, ಪ್ರಶಾಂತಕುಮಾರ ಪಾಲ್ಗೊಳ್ಳುವರು.

Advertisement

Udayavani is now on Telegram. Click here to join our channel and stay updated with the latest news.

Next