Advertisement

ಮುಂಬಯಿ:ಯಕ್ಷಧ್ರುವ ಪಟ್ಲ ಸಂಭ್ರಮ-2017 ಆಮಂತ್ರಣ ಪತ್ರಿಕೆ ಬಿಡುಗಡೆ

02:42 PM Aug 04, 2017 | |

ಮುಂಬಯಿ: ಆಶಕ್ತ ಕಲಾವಿದರಿಗೆ ಸಹಕರಿಸುವ ಒಳ್ಳೆಯ ಉದ್ದೇಶದಿಂದ ಹುಟ್ಟಿಕೊಂಡ ಪಟ್ಲ ಫೌಂಡೇಷನ್‌ ಟ್ರಸ್ಟ್‌ ಇಂದು ದೇಶ-ವಿದೇಶಗಳಲ್ಲಿ ಇಪ್ಪತ್ತೆ$çದಕ್ಕೂ ಹೆಚ್ಚು ಘಟಕಗಳನ್ನು  ಹೊಂದಿರುವುದು ಹೆಮ್ಮೆಯ ಮತ್ತು ಅಭಿಮಾನದ ವಿಷಯವಾಗಿದೆ. ಸಂಸ್ಥೆಯು ಪ್ರಸ್ತುತ ಯಕ್ಷಪಟ್ಲಾಶ್ರಯ ಯೋಜನೆ ಯನ್ನು ಹಮ್ಮಿಕೊಂಡಿದ್ದು, ಈಗಾಗಲೇ ಮಾನ್ಯ  ಶಾಸಕ ಮೊದಿನ್‌ ಬಾವಾ ಸುಮಾರು 5-6 ಎಕರೆ ಜಮೀನನ್ನು ಸರಕಾರದಿಂದ ಒದಗಿಸಿಕೊಡುವ ಭರವಸೆ ನೀಡಿದ್ದಾರೆ. ಈ ಭೂಮಿಯಲ್ಲಿ ಯಕ್ಷಗಾನ ಕ್ಷೇತ್ರದ ಅಶಕ್ತ ಹಾಗೂ ಬಡತನ ಬೇಗೆಯಲ್ಲಿ ಬಳಲುತ್ತಿರುವ ಕಲಾವಿದರಿಗೆ ಸುಮಾರು 100 ಮನೆಗಳನ್ನು ನಿರ್ಮಿಸುವ ಬೃಹತ್‌ ಯೋಜನೆ ಸಂಸ್ಥೆಯ ಮುಂದಿದೆ. ಪ್ರತಿಯೊಂದು ಮನೆಗೂ 5 ಲಕ್ಷ ರೂ. ವೆಚ್ಚವಾಗಲಿದ್ದು, ದಾನಿಗಳ ಹೆಸರನ್ನು ಆ ಮನೆಗೆ ನೀಡಲಾಗುವುದು. ಸಂಸ್ಥೆಯ ಈ ಯೋಜನೆಗೆ  ಸಹೃದಯರು ಸಹಕರಿಸಬೇಕಾದ ಅಗತ್ಯ ಇದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಷನ್‌ ಇದರ ಗೌರವಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ಹೇಳಿದರು.

Advertisement

ಜು. 31ರಂದು ಕುರ್ಲಾ ಪೂರ್ವ ಬಂಟರ ಭವನದ ಅನೆಕ್ಸ್‌ ಕಟ್ಟಡದ ಕಿರುಸಭಾಗೃಹದಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಷನ್‌ ಮಂಗಳೂರು ಇದರ ಮುಂಬೈ ಘಟಕದ ಮುಂಬೈಯಲ್ಲಿ ಪಟ್ಲ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಟ್ಲ ಫೌಂಡೇಷನ್‌ ಯಾವುದೇ ರೀತಿಯ ಫಲಾಪೇಕ್ಷೆಯಿಲ್ಲದೆ ಕಲಾವಿದರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ. ಇಂದು ಕೆಲವು ಕಲಾವಿದರ ಸಂಕಷ್ಟಗಳನ್ನು ಕಂಡಾಗ ಮನಸ್ಸಿಗೆ ಬಹಳಷ್ಟು ನೋವಾಗುತ್ತದೆ. ಅವರ ಕಣ್ಣೀರೊರೆಸುವ ಕಾರ್ಯದಲ್ಲಿ ತೊಡಗಿಸಿಕೊಂಡ ಫೌಂಡೇಷನ್‌ಗೆ ಸಹೃದಯ ದಾನಿಗಳು, ಕಲಾಭಿಮಾನಿಗಳ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದು ನುಡಿದರು.
ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಿ ಮಾತನಾಡಿದ ಮುಂಬಯಿ ಘಟಕದ ಅಧ್ಯಕ್ಷ ಕಡಂದಲೆ ಸುರೇಶ್‌ ಭಂಡಾರಿ ಅವರು, ಇದೊಂದು ಅಪೂರ್ವ ಕಲಾಸೇವೆಯಾಗಿದೆ. ಸತೀಶ್‌ ಪಟ್ಲ ಅವರು ಫೌಂಡೇಷನ್‌ನ ಯೋಜನೆಗಳ ಯಶಸ್ಸಿಗೆ ಹಗಲಿರುಳು ದುಡಿಯುತ್ತಿದ್ದಾರೆ. ಓರ್ವ ಕಲಾವಿದನಿಂದ, ಕಲಾವಿದರ ಶ್ರೇಯೋಭಿವೃದ್ಧಿಗೆ ಹುಟ್ಟಿಕೊಂಡ ಈ ಸಂಸ್ಥೆಗೆ ಎಲ್ಲರ ಪ್ರೋತ್ಸಾಹ ಇರಲಿ ಎಂದು ಹೇಳಿದರು.

ಕನ್ನಡಿಗ ಕಲಾವಿದರ ಪರಿಷತ್‌ ಮಹಾ ರಾಷ್ಟ್ರ ಘಟಕದ ಅಧ್ಯಕ್ಷ ಸುರೇಂದ್ರ ಕುಮಾರ್‌ ಹೆಗ್ಡೆ ಅವರು ಮಾತನಾಡಿ, ಅಶಕ್ತ ಕಲಾವಿದರ ಆಶೋತ್ತರಗಳಿಗೆ ಸ್ಪಂದಿಸುತ್ತಿರುವ ಪಟ್ಲ ಫೌಂಡೇಷನ್‌ನ ಕಾರ್ಯಕ್ರಮಗಳು ನಿಜ ವಾಗಿಯೂ ಅಭಿನಂದನೀಯ. ಇಂತಹ ಕಾರ್ಯ ಕ್ರಮಗಳಿಗೆ ಕಲಾಭಿಮಾನಿಗಳ ಪ್ರೋತ್ಸಾಹ, ಸಹಕಾರ ಅಗತ್ಯವಾಗಿರಬೇಕು. ಪಟ್ಲಾಶ್ರಯ ಯೋಜನೆಯಲ್ಲದೆ, ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ವೈದ್ಯಕೀಯ ನೆರವು, ಪ್ರತಿಭಾ ಪುರಸ್ಕಾರ, ನಿಧಿ ಅರ್ಪಣೆ ಇತ್ಯಾದಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಿ
ರುವ ಈ ಸಂಸ್ಥೆಯು ಜಾತಿ, ಧರ್ಮವನ್ನು ಮರೆತು ಒಮ್ಮತದಿಂದ ಎಲ್ಲರಿಗೂ ಸಹಕರಿಸುತ್ತಿರುವುದು ಅಭಿನಂದನೀಯ ಎಂದರು.

ಬಂಟ ಸಮಾಜದ ಹಿರಿಯರಾದ ಉದ್ಯಮಿ ರಾಘ ಪಿ. ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಲಾವಿದರ ಬದುಕಿಗೆ ಆಶಾಕಿರಣವಾಗಿರುವ ಪಟ್ಲ ಫೌಂಡೇಷನ್‌ ಮಾಡುತ್ತಿರುವ ಕಲಾಸೇವೆ, ಕಲಾವಿದರ ಸೇವೆ ಅನನ್ಯವಾಗಿದೆ ಎಂದು ನುಡಿದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಘಟಕದ ಪದಾಧಿಕಾರಿ ಗಳಾದ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಸಂಸ್ಥೆಯ ಸಂಚಾಲಕ ಅಶೋಕ್‌ ಶೆಟ್ಟಿ ಪೆರ್ಮುದೆ, ದಿವಾಕರ ಶೆಟ್ಟಿ ಅಡ್ಯಾರ್‌, ವೇಣು ಗೋಪಾಲ್‌ ಶೆಟ್ಟಿ ಇನ್ನಂಜೆ, ಪ್ರಕಾಶ್‌ ಎಂ. ಶೆಟ್ಟಿ ಸುರತ್ಕಲ್‌, ದಿವಾಕರ ಬಿ. ಶೆಟ್ಟಿ ಕುರ್ಲಾ,  ನವೀನ್‌ ಶೆಟ್ಟಿ ಇನ್ನಬಾಳಿಕೆ, ಪಿ. ಧನಂಜಯ ಶೆಟ್ಟಿ ಗಿರ್ನಾರ್‌, ಬೊಲಾ°ಡುಗುತ್ತು ಚಂದ್ರಹಾಸ್‌ ಎಂ. ರೈ, ಡಾ| ಪ್ರಭಾಕರ ಶೆಟ್ಟಿ, ಜಯ ಎ. ಶೆಟ್ಟಿ, ದಯಾಸಾಗರ್‌ ಚೌಟ, ಪದ್ಮನಾಭ ಸಸಿಹಿತ್ಲು, ವಿಟuಲ್‌ ಎಸ್‌. ಆಳ್ವ, ರಾಘು ಪಿ. ಶೆಟ್ಟಿ, ಸುರೇಶ್‌ ಎಲ್‌. ಶೆಟ್ಟಿ, ಗಣೇಶ್‌ ಎರ್ಮಾಳ್‌, ಅಜೆಕಾರು ಬಾಲಕೃಷ್ಣ ಶೆಟ್ಟಿ, ಸುರೇಶ್‌ ಶೆಟ್ಟಿ ಯೆಯ್ನಾಡಿ, ಕರುಣಾಕರ ಶೆಟ್ಟಿ ಕುಕ್ಕುಂದೂರು, ಪ್ರವೀಣ್‌ ಎಸ್‌. ಶೆಟ್ಟಿ ವರಂಗ, ಉಮೇಶ್‌ ಶೆಟ್ಟಿ, ಶೇಖರ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಕರ್ನೂರು ಮೋಹನ್‌ ರೈ ವಂದಿಸಿದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next