Advertisement
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಆಶ್ರಯದಲ್ಲಿ ರವಿವಾರ ಅಡ್ಯಾರ್ ಗಾರ್ಡನ್‌ನಲ್ಲಿ ಡಾ| ಪುನೀತ್ ರಾಜ್‌ಕುಮಾರ್ ವೇದಿಕೆ ಯಲ್ಲಿ ಜರಗಿದ ಯಕ್ಷಧ್ರುವ ಪಟ್ಲ ಸಂಭ್ರಮ 2022 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತ ನಾಡಿದರು. ಪಟ್ಲ ಸತೀಶ್ ಶೆಟ್ಟಿ ಅವರಂಥ ಯುವ ಕಲಾವಿದರು ಹೊಸತನವನ್ನು ಪ್ರತಿಪಾದಿಸಿದ ಕಾರಣ ಈ ಕಲೆ ಸಾಕಷ್ಟು ಜನರನ್ನು ಆಕರ್ಷಿ ಸುತ್ತಿದೆ. ಸತೀಶ್ ಶೆಟ್ಟಿ ಅವರ ನೇತೃತ್ವದ ಟ್ರಸ್ಟ್ ಯಕ್ಷಗಾನ ಕಲೆ, ಕಲಾವಿದರ ಅಭಿವೃದ್ಧಿಗಾಗಿ ನಡೆಸುತ್ತಿರುವ ಕಾರ್ಯ ಅನನ್ಯ ಎಂದರು.
Related Articles
Advertisement
ಟ್ರಸ್ಟ್‌ನ ಮಹಾಪೋಷಕರಾದ ರಾಜ್ಯೋತ್ಸವ ಪುರಸ್ಕೃತ ಚೆಲ್ಲಡ್ಡ ಕೆ.ಡಿ. ಶೆಟ್ಟಿ ದಂಪತಿ ಹಾಗೂ ವಕ್ವಾಡಿ ಪ್ರವೀಣ್ ಶೆಟ್ಟಿ, ಅಂತಾರಾಷ್ಟ್ರೀಯ ಸೊಸೈಟಿ ಐಕಾನ್ ಪ್ರಶಸ್ತಿ ಪುರಸ್ಕೃತ ಕಡಂದಲೆ ಸುರೇಶ್ ಭಂಡಾರಿ ಹಾಗೂ ಸಹಕಾರಿ ರತ್ನ ಪುರಸ್ಕೃತ ಸವಣೂರು ಸೀತಾರಾಮ ರೈ ದಂಪತಿಗೆ ಗೌರವಾರ್ಪಣೆ ಸಲ್ಲಿಸಿ ಸಮ್ಮಾನಿಸಲಾಯಿತು. ಭಾರತೀಯ ಸೇನೆಯ ಮೇಜರ್ ಆಗಿ ಪದೋನ್ನತಿ ಹೊಂದಿರುವ ಭರತ್ ಶೆಟ್ಟಿ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಸ್ವಾಗತಿಸಿದರು. ಅಡ್ಯಾರ್ ಪುರುಷೋತ್ತಮ ಭಂಡಾರಿ, ಕದ್ರಿ ನವನೀತ್ ಶೆಟ್ಟಿ ನಿರೂಪಿಸಿದರು. ಬೆಳಗ್ಗೆ ಉದ್ಘಾಟನ ಸಮಾ ರಂಭ ಜರಗಿತು. ಸಮಾರಂಭ ದಲ್ಲಿ “ಯಕ್ಷಾಂಗಣ ಧ್ರುವತಾರೆ ಪಟ್ಲ’ ಮತ್ತು “ಧ್ರುವ ಪ್ರಭ’-ಸೇವಾಯಾನದ ಮೆಲುಕು ಕೃತಿ ಬಿಡುಗಡೆ ಮಾಡಲಾಯಿತು.
ಪಟ್ಲ ಪ್ರಶಸ್ತಿ ಪ್ರದಾನಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ 1 ಲಕ್ಷ ರೂ. ನಗದು ಸಹಿತ “ಪಟ್ಲ ಪ್ರಶಸ್ತಿ 2022′ ನೀಡಿ ಗೌರವಿಸಲಾಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ| ಎಂ.ಎಲ್. ಸಾಮಗ ಅಭಿನಂದನ ಭಾಷಣ ಮಾಡಿದರು. ಪದ್ಮನಾಭ ಉಪಾಧ್ಯ, ಸದಾಶಿವ ಶೆಟ್ಟಿಗಾರ್ ಸಿದ್ದಕಟ್ಟೆ, ಅಜ್ರಿ ಗೋಪಾಲ ಗಾಣಿಗ, ಯೋಗಾಕ್ಷಿ ಗಣೇಶ್ ಗುಜರನ್, ಮಾಧವ ಭಂಡಾರಿ ಕುಳಾಯಿ, ಕಲ್ಲುಗುಂಡಿ ಕೊರಗಪ್ಪ ಮಣಿಯಾಣಿ, ಉಜಿರೆ ನಾರಾಯಣ ಪೂಜಾರಿ, ವಿಜಯಕುಮಾರ್ ಶೆಟ್ಟಿ ಮೊಲೊಟ್ಟು, ಅರೆಹೊಳೆ ಸಂಜೀವ ಶೆಟ್ಟಿ, ಮಧುಕರ ಬೋಳೂರು ಅವರಿಗೆ ತಲಾ 20 ಸಾವಿರ ರೂ. ನಗದು ಸಹಿತ “ಯಕ್ಷಧ್ರುವ ಕಲಾ ಗೌರವ-2022′ ಪ್ರದಾನ ಮಾಡಲಾಯಿತು. ಕಲಾವಿದರಿಗೆ ನೆರವು
ಯಕ್ಷಧ್ರುವ ಪಟ್ಲ ಸಂಭ್ರಮ 2022 ಕಾರ್ಯಕ್ರಮದಲ್ಲಿ ಸೇವಾಯೋಜನೆಯಡಿ 13 ಮಂದಿ ಆಶಕ್ತ ಕಲಾವಿದರಿಗೆ ತಲಾ 50 ಸಾವಿರ ರೂ. ನೆರವು, 12 ಮಂದಿ ಕಲಾವಿದರಿಗೆ ತಲಾ 25 ಸಾವಿರ ರೂ.ಗಳಂತೆ ವೈದ್ಯಕೀಯ ನೆರವು, 24 ಮಂದಿ ಕಲಾವಿದರಿಗೆ ಮನೆ ನಿರ್ಮಾಣಕ್ಕೆ ತಲಾ 25 ಸಾವಿರ ರೂ. ನೆರವು, ಯಕ್ಷಾಶ್ರಯ ಯೋಜನೆಯಲ್ಲಿ ಮನೆ ನಿರ್ಮಾಣ ಸೇರಿದಂತೆ ಒಟ್ಟು 57.5 ಲಕ್ಷ ರೂ. ನೆರವು ನೀಡಲಾಯಿತು.