Advertisement
ಕೂಡ್ಲು ಮೇಳದ ವ್ಯವಸ್ಥಾಪಕ ರವಿರಾಜ ಅಡಿಗ ಮತ್ತು ಧಾರ್ಮಿಕ ಮುಂದಾಳು ವೆಂಕಟ್ರಮಣ ಹೊಳ್ಳ ಕಾಸರಗೋಡು ಶುಭಹಾರೈಸಿದರು. ಯಕ್ಷಾಭಿಮಾನಿ ಕೂಡ್ಲು ಇದರ ಅಧ್ಯಕ್ಷ ಸುನಿಲ್ ಗಟ್ಟಿ ಮತ್ತು ಕಾರ್ಯದರ್ಶಿ ಅರ್ಪಿತ್ ಶೆಟ್ಟಿ ಉಪಸ್ಥಿತರಿದ್ದರು. ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥನೆಯೊಂದಿಗೆ ರಾಮ್ ಪ್ರಸಾದ್ ಕೂಡ್ಲು ಸಭಾ ಕಾರ್ಯಕ್ರಮವನ್ನು ಆರಂಭಿಸಿದರು. ಕಿಶೋರ್ ಕೂಡ್ಲು ಸ್ವಾಗತಿಸಿದರು. ಕೋಶಾಧಿಕಾರಿ ಪ್ರವೀಣ್ ಕೂಡ್ಲು ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಪ್ರಸಿದ್ಧ ವೇಷಧಾರಿ ಕಟೀಲು ಮೇಳಗಳಲ್ಲಿ ಸುದೀರ್ಘ ವರ್ಷಗಳ ತಿರುಗಾಟದ ನಂತರ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಪೆರುವಾಯಿ ನಾರಾಯಣ ಶೆಟ್ಟಿ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ರಂಜಿತ್ ಗೋಳಿಯಡ್ಕ ಸಮ್ಮಾನ ಪತ್ರ ವಾಚಿಸಿದರು. ಯುವ ಕಲಾವಿದ ಗುರುರಾಜ್ ಹೊಳ್ಳ ಬಾಯಾರು ಅಭಿನಂದನ ಭಾಷಣ ಮತ್ತು ಒಟ್ಟು ಕಾರ್ಯಕ್ರಮವನ್ನು ನಿರೂಪಿಸಿದರು. ಯಕ್ಷಗಾನ ಪ್ರದರ್ಶನ
ತೆಂಕುತಿಟ್ಟಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಭಾನುಮತಿ ಪರಿಣಯ ಮತ್ತು ಚಿತ್ರಸೇನ ಕಾಳಗ’ ಎಂಬ ಯಕ್ಷಗಾನ ಪ್ರದರ್ಶಿಸಲಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಪದ್ಯಾಣ ಗಣಪತಿ ಭಟ್, ರಾಮಕೃಷ್ಣ ಮಯ್ಯ ಸಿರಿಬಾಗಿಲು, ತಲ್ಪನಾಜೆ ವೆಂಕಟ್ರಮಣ ಭಟ್ ಸಹಕರಿಸಿದರು. ಚೆಂಡೆ-ಮದ್ದಳೆಯಲ್ಲಿ ಹರೀಶ್ ರಾವ್ ಅಡೂರು, ಲವ ಕುಮಾರ್ ಐಲ, ಶ್ರೀಧರ ವಿಟ್ಲ, ಚಕ್ರತಾಳದಲ್ಲಿ ಚಂದ್ರಮೋಹನ ಕೂಡ್ಲು ಸಹಕರಿಸಿದರು. ಮುಮ್ಮೇಳದಲ್ಲಿ ಸ್ತ್ರೀ ಪಾತ್ರದಲ್ಲಿ ಬಾಲಕೃಷ್ಣ ಸೀತಾಂಗೋಳಿ, ಅರುಣ್, ಮವ್ವಾರು ಬಾಲಕೃಷ್ಣ ಮಣಿಯಾಣಿ ಸಹಕರಿಸಿದರು. ರಾಧಾಕೃಷ್ಣ ನಾವಡ ಮಧೂರು, ಶಂಭಯ್ಯ ಭಟ್ ಕಂಜರ್ಪಣೆ, ವಸಂತ ಗೌಡ ಕಾರ್ಯತ್ತಡ್ಕ, ಹರಿನಾರಾಯಣ ಎಡನೀರು, ಚಂದ್ರಶೇಖರ ಧರ್ಮಸ್ಥಳ, ಸಂತೋಷ್ ಮಾನ್ಯ, ಮೋಹನ ಬೆಳ್ಳಿಪ್ಪಾಡಿ, ನಾರಾಯಣ ಮೂಲಡ್ಕ, ಡಾ| ಶ್ರುತಕೀರ್ತಿ ರಾಜ್, ಪ್ರಕಾಶ್ ನಾಯಕ್ ನೀರ್ಚಾಲು, ಸಚಿನ್ ಕೆ. ಅಮೀನ್, ಶಿವರಾಜ್ ಬಜಕೂಡ್ಲು, ಕಿಶೋರ್ ಕೂಡ್ಲು, ರಂಜಿತ್ ಗೋಳಿಯಡ್ಕ, ವಿಕಾಸ್, ವಿಘ್ನೇಶ್ ಕೂಡ್ಲು, ದತ್ತೇಶ್ ಮಾವಿನಕಟ್ಟೆ, ಲತೇಶ್, ಶ್ರೀರಾಮ್ ಕೂಡ್ಲು ಮೊದಲಾದವರು ಸಹಕರಿಸಿದರು.