ನೈಕಂಬ್ಳಿ ಸಂಯೋಜನೆ ಯಕ್ಷಕ್ರಾಂತಿ ಬೆಂಗಳೂರಿನಲ್ಲಿ ಆಯೋಜನೆಗೊಳ್ಳುತ್ತಿದ್ದು, ಎರಡು ರಂಜನೀಯ ಕತೆಯುಳ್ಳ ಪ್ರಸಂಗಗಳು ಪ್ರದರ್ಶನ ಕಾಣುತ್ತಿವೆ. “ರಾಜಾ ಹರಿಶ್ಚಂದ್ರ’, “ಚಕ್ರ ಚಂಡಿಕೆ’ ಎಂಬ ಬಲು ಅಪರೂಪದ ಪ್ರಸಂಗಗಳು ಪ್ರೇಕ್ಷಕರನ್ನು ಸೆಳೆಯಲಿವೆ. ಕೊಳಗಿ ಕೇಶವ ಹೆಗಡೆ, ಸುರೇಶ ಶೆಟ್ಟಿ, ಗಣೇಶ ಹೆಬ್ರಿ, ಪ್ರಸನ್ನ ಭಾಳ್ಕಲ್ ಅವರ ಗಾನ ಸಾರಥ್ಯವಿರಲಿದೆ. ಜಲವಳ್ಳಿ ವಿಧ್ಯಾದರ್ ರಾವ್ ಹರಿಶ್ಚಂದ್ರರಾಗಿ, ಉಜಿರೆ ಅಶೋಕ್ ಭಟ್ ಅವರು ವಿಶ್ವಾಮಿತ್ರರಾಗಿ, ಡಾ. ಪ್ರದೀಪ ಸಾಮಗ ಅವರು ಚಂದ್ರಮತಿಯಾಗಿ ಸೆಳೆಯಲಿದ್ದಾರೆ. ಐರಬೈಲ್ ಆನಂದ ಶೆಟ್ಟಿಯವರು ಘಟೋತ್ಕಜ ಆಗಿ, ಕೊಳಲಿ ಕೃಷ್ಣ ಶೆಟ್ಟಿ ಅವರು ಭರ್ಭರಿಕ ಆಗಿ, ತೊಂಬಟ್ಟು ಅವರು ಕೃಷ್ಣ ನಾಗಿ, ಯಲಗುಪ್ಪ ಸುಬ್ರಮಣ್ಯ ಹೆಗಡೆ ವತ್ಸಲೆಯಾಗಿ ರಂಗಸ್ಥಳಕ್ಕೆ ಶೋಭೆ ತುಂಬಲಿದ್ದಾರೆ. ಅಜಿತ್ ಕಾರಂತ, ಕ್ಯಾದಗಿ, ಹಳ್ಳಾಡಿ, ಉಪ್ಪುಂದ, ವಂಡಾರು, ಪಂಜು ಕೂಡ ಇದೇ ವೇಳೆ ರಂಜಿಸಲಿದ್ದಾರೆ. ಈ ದಿಗ್ಗಜ ಕಲಾವಿದರ ಸಂಗಮದ ಈ ಪ್ರಸಂಗಗಳಿಗೆ ನೀವೂ ಸಾಕ್ಷಿಯಾಗಿ.
ಯಾವಾಗ?: ಸೆ.1, ಶನಿವಾರ, ರಾ.10
ಎಲ್ಲಿ?: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ
ಪ್ರವೇಶ: 150, 300, 500 ರೂ.
ಸಂಪರ್ಕ: 9741474255