Advertisement

“ಯಜಮಾನ’ಟೈಟಲ್‌ ಸಾಂಗ್‌ ಬಂತು

05:53 AM Feb 06, 2019 | |

ಇಲ್ಲಿಯವರೆಗೆ “ಯಜಮಾನ’ ಚಿತ್ರದ ಒಂದೊಂದೊಂದೆ ಹಾಡುಗಳನ್ನು ಬಿಡುಗಡೆ ಮಾಡುತ್ತ ಬರುತ್ತಿದ್ದ ಚಿತ್ರತಂಡ ನಿನ್ನೆ “ಯಜಮಾನ’ ಚಿತ್ರದ ಟೈಟಲ್‌ ಸಾಂಗ್‌ನ್ನು ಬಿಡುಗಡೆ ಮಾಡಿದೆ. “ನಿಂತ ನೋಡೋ ಯಜಮಾನ…’ ಎಂಬ ಸಾಲುಗಳಿಂದ ಶುರುವಾಗುವ ಈ ಹಾಡಿನಲ್ಲಿ “ಯಜಮಾನ’ ಚಿತ್ರದ ಥೀಮ್‌ ಮತ್ತು ನಟ ದರ್ಶನ್‌ ಅವರ ಪಾತ್ರದ ಗುಣವನ್ನು ತೆರೆದಿಡಲಾಗಿದೆ.

Advertisement

“ರಾಜಕುಮಾರ’ ಚಿತ್ರದ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ರಚಿಸಿರುವ ಈ ಗೀತೆಗೆ ಗಾಯಕ ವಿಜಯ ಪ್ರಕಾಶ್‌ ಧ್ವನಿಯಾಗಿದ್ದಾರೆ. ವಿ. ಹರಿಕೃಷ್ಣರ ಚಿತ್ರದ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ “ಯಜಮಾನ’ ಚಿತ್ರದ ಮೂರು ಹಾಡುಗಳೂ ದರ್ಶನ್‌ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಈ ಹಾಡಿಗೆ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next