Advertisement
ರಾಮದಾಸನಗರದ ಗಂಗೆ ದೇವರ ಗುಡ್ಡೆ ಶ್ರೀ ಶೈಲ ಮಹಾದೇವ ಕ್ಷೇತ್ರದಲ್ಲಿ 2020ರ ಫೆ. 26ರಿಂದ ಮಾ.1ರ ತನಕ ಜರಗುವ ಅತಿರುದ್ರ ಮಹಾಯಾಗದ ಮುನ್ನುಡಿಯಾಗಿ ಕ್ಷೇತ್ರ ಸಭಾಂಗಣದಲ್ಲಿ ನಡೆದ ಬೃಹತ್ ಮಾತೃಶಕ್ತಿ ಮತ್ತು ಯುವ ಶಕ್ತಿ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಸಭೆಯಲ್ಲಿ ಅತಿರುದ್ರ ಮಹಾಯಾಗದ ಪ್ರಧಾನ ಪುರೋಹಿತರಾದ ಶ್ಯಾಂ ಭಟ್, ಮಂಜೇಶ್ವರ ಶ್ರೀ ಮದನಂತೇಶ್ವರ ದೇವಸ್ಥಾನದ ಆಡಳಿತ ಟ್ರಿಸ್ಟಿಯವರಾದ ಡಾ|ಅನಂತ ಕಾಮತ್, ಸುಕನ್ಯಾ ಆಸ್ರ, ಮೀನಾಕ್ಷಿ ಅನಂತ್ ಕಾಮತ್, ಆಶಾ ಉಪಾಧ್ಯಾಯ, ರಾಜಕೀಯ ನೇತಾರ ಪ್ರಮೀಳಾ ಸಿ.ನಾೖಕ್, ನಾರಾಯಣ ಸೂರ್ಲು, ಚಂದ್ರಮೋಹನ್, ಅಜಿತ್ ರೈ, ಧನುಷ್ ಕನ್ನಿಗುಡ್ಡೆ, ದಿನೇಶ್ ಶಿವಶಕ್ತಿನಗರ, ರಾಜೇಂದ್ರನ್, ರಮೇಶ್ ರೈ, ಗಣೇಶ್ ಮೀಪುಗುರಿ, ವಾರ್ಡ್ ಸದಸ್ಯ ವೆಂಕಟ್ರಮಣ ಅಡಿಗ ಸಹಿತ ಊರಿನ ನಾನಾ ಸಂಘ ಸಂಸ್ಥೆಗಳ ಹಾಗೂ ಭಜನ ಮಂಡಳಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸ್ಥಳೀಯ ಬಾಲಗೋಕುಲದ ಮಕ್ಕಳು ಪ್ರಾರ್ಥನೆ ಹಾಗೂ ದೀಪ ಸ್ತುತಿ ಹಾಡಿದರು. ದೇವರಗುಡ್ಡೆ ಕ್ಷೇತ್ರದ ಶ್ರೀ ಮಹಾದೇವ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಸತೀಶ್ ಕೋಟೆಕಣಿ ಸ್ವಾಗತಿಸಿದರು.
ಉದಯ ಕುಮಾರ್ ಮನ್ನಿಪ್ಪಾಡಿ ಪ್ರಾಸ್ತಾವಿಕ ನುಡಿದರು. ಸುಬ್ಬಣ್ಣ ಆಳ್ವ ಕುಚ್ಚಿಕ್ಕಾಡು ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಗಟ್ಟಿ ಅತಿರುದ್ರ ಮಹಾಯಾಗದ ಯಶಸ್ಸಿಗೆ ರೂಪೀಕರಿಸಿದ ಸಮಿತಿಯ ಪದಾಧಿಕಾರಿಗಳ ಹೆಸರನ್ನು ಪ್ರಕಟಿಸಿದರು. ಸೇವಾ ಟ್ರಸ್ಟ್‌ನ ಅಧ್ಯಕ್ಷ ಡಾ| ಜಯಪ್ರಕಾಶ್ ನಾೖಕ್ ವಂದಿಸಿದರು.