Advertisement

ಕನ್ನಡ ಸಂಸ್ಕೃತಿ ಉಳಿದಿದ್ದು ಹಳ್ಳಿಗಳಲ್ಲಿ: ಕುಂವೀ

12:00 PM Dec 23, 2019 | Naveen |

ಯಡ್ರಾಮಿ: ಕನ್ನಡ ಸಂಸ್ಕೃತಿ ಉಳಿದಿದ್ದು ಹಳ್ಳಿಗಳಲ್ಲಿ, ಅದು ಹೆಚ್ಚಾಗಿ ಕಂಡಿದ್ದು ಹೈದ್ರಾಬಾದ ಕರ್ನಾಟಕದ ಭಾಗವಾದ ಐತಿಹಾಸಿಕ ಯಡ್ರಾಮಿಯ ಪ್ರಥಮ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಎಂದು ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು.

Advertisement

ರವಿವಾರ ಯಡ್ರಾಮಿಯಲ್ಲಿ ನಡೆದ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮೇಳನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ರಾಜಕಾರಣಿಗಳ ಕಾರ್ಯಕ್ರಮಗಳಾಗದೇ ನಿಜವಾದ ಕವಿ, ಸಾಹಿತಿಗಳ ಕಾರ್ಯಕ್ರಮವಾಗಬೇಕು ಎಂದರು.

ಸಮ್ಮೇಳನದಲ್ಲಿ ನಡೆಯುವ ಗೋಷ್ಠಿಗಳಲ್ಲಿನ ಚಿಂತನೆ, ಸಲಹೆಗಳನ್ನು ರಾಜಕಾರಣಿಗಳು ಆಲಿಸಿ ಕಾರ್ಯರೂಪಕ್ಕೆ ತರಬೇಕು. ಕನ್ನಡದಲ್ಲಿ ಕಲಿತರೆ ಅನ್ನ ಕೊಡುವ ಶಕ್ತಿ ಇಲ್ಲ ಎನ್ನುವ ಸಂಶಯ ನಮ್ಮ ಜನರ ಮನದಲ್ಲಿದೆ. ಆದರೆ ಈ ನಾಡಿನಲ್ಲಿ ದೊಡ್ಡ ವ್ಯಕ್ತಿಗಳಾದವರೆಲ್ಲ ಕನ್ನಡ ಶಾಲೆಗಳಲ್ಲಿ ಓದಿದವರು ಎಂಬುದು ನೆನಪಿರಲಿ ಎಂದರು.

ಹೆಣ್ಣುಮಕ್ಕಳು ಧಾರಾವಾಹಿ ನೋಡುವ ಸಂಸ್ಕೃತಿ ಬಿಟ್ಟು ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ನಾಡಿನಲ್ಲಿ ಕನ್ನಡ ಶಾಲೆಗಳು ಮುಚ್ಚದಂತೆ ನೋಡಿಕೊಳ್ಳುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಮಕ್ಕಳಿಗೆ ಅಂಟಿ-ಅಂಕಲ್‌ ಎನ್ನುವುದನ್ನು ಬಿಡಿಸಿ, ಅಪ್ಪ-ಅಮ್ಮ ಎನ್ನುವುದನ್ನು ಕಲಿಸಿ. ಅಲ್ಲದೇ ಈ ಭಾಗದ ಎಲ್ಲ ಶಾಲೆಗಳಲ್ಲಿ ತತ್ವಪದ ಸಾಹಿತ್ಯದ ಕುರಿತು ಜ್ಞಾನ ಮೂಡಿಸುವಂತ ಕಾರ್ಯಕ್ರಮಗಳು ಆಗಬೇಕು ಎಂದರು.

ಇದಕ್ಕೂ ಮುನ್ನ ಸಾಹಿತ್ಯ ಸಮ್ಮೇಳನದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಜೇವರ್ಗಿ ಶಾಸಕ ಡಾ| ಅಜಯಸಿಂಗ್‌ ಮಾತನಾಡಿ, ಜಾತ್ಯತೀತ ಸಂಕೇತದ ಊರು ಯಡ್ರಾಮಿ, ಯಡ್ರಾಮಿಗೆ ಸಾವರಾರು ವರ್ಷಗಳ ಇತಿಹಾಸವಿದೆ. ಜಾತಿ, ಧರ್ಮಗಳ ಬೇಧ ಬಿಟ್ಟು ಎಲ್ಲರೂ ಒಂದಾದಾಗ ಇಂತಹ ಸಮ್ಮೇಳನಗಳು ಯಶಸ್ವಿಯಾಗಲು ಕಾರಣವಾಗುತ್ತದೆ ಎಂದರು.

Advertisement

ಮೆರವಣಿಗೆ: ಬೆಳಗ್ಗೆ 10 ಗಂಟೆಗೆ ಪಟ್ಟಣದ ಸಂತ ಶ್ರೀ ಸೇವಾಲಾಲ ವೃತ್ತದಲ್ಲಿ ತಾಲೂಕಿನ ದಂಡಾಧಿಕಾರಿ ಬಸಲಿಂಗಪ್ಪ ನಾಯೊRàಡಿ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಸರ್ವಾಧ್ಯಕ್ಷರ ಸಾರೋಟ ಮೆರವಣಿಗೆ ಅಂಬೇಡ್ಕರ ವೃತ್ತ, ಬಸವೇಶ್ವರ ವೃತ್ತ, ಟಿಪ್ಪು ಸುಲ್ತಾನ, ಕನಕದಾಸ ವೃತ್ತ ಮಾರ್ಗವಾಗಿ ಸರ್ದಾರ ಶರಣಗೌಡ ವೃತ್ತದ ಬಳಿಯ ಸರ್ಕಾರಿ ಪಬ್ಲಿಕ್‌ ಶಾಲಾ ಆವರಣದಲ್ಲಿನ ವೇದಿಕೆಗೆ ತಲುಪಿತು.

ಮೆರವಣಿಗೆಯಲ್ಲಿ ಬೊಂಬೆ ಕುಣಿತ, ಡೊಳ್ಳು ವಾದ್ಯ, ಕುಂಭ ಕಳಸ ಹೊತ್ತ ವಿವಿಧ ಶಾಲೆಗಳ ವಿದ್ಯಾರ್ಥಿನಿಯರು ಹಾಗೂ ಇನ್ನಿತರ ಕಲಾ ತಂಡಗಳು ಭಾಗವಹಿಸಿದ್ದವು.ಯಡ್ರಾಮಿ ವಿರಕ್ತಮಠದ ಪೂಜ್ಯ ಸಿದ್ದಲಿಂಗ ಸ್ವಾಮೀಜಿ, ಕಡಕೋಳದ ಮಹಾಮಠದ ಡಾ| ರುದ್ರಮುನಿ ಶಿವಾಚಾರ್ಯರು, ಸಂಸದ ಡಾ| ಉಮೇಶ ಜಾದವ, ಡಾ| ಅಜಯಸಿಂಗ್‌, ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಸುರೇಶ ಡಂಬಳ, ಗ್ರಾ.ಪಂ ಉಪಾಧ್ಯಕ್ಷ ಈರಣ್ಣ ಸುಂಕದ, ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಜಿ.ಪಂ ಸದಸ್ಯರಾದ ದಂಡಪ್ಪ ಸಾಹು ಕುರಳಗೇರಾ, ರೇವಣಸಿದ್ದಪ್ಪ ಸಂಕಾಲಿ, ತಾ.ಪಂ ಸದಸ್ಯರಾದ ಪ್ರಶಾಂತ ರಾಠೊಡ, ಗುರುಲಿಂಗಪ್ಪಗೌಡ ಪಾಟೀಲ, ಸಿದ್ದಣ್ಣ ಕವಾಲ್ದಾರ, ಸುರೇಖಾ ಶಂಕರಗೌಡ, ಮಡಿವಾಳಪ್ಪ ನಾಗರಹಳ್ಳಿ, ರಾಜಶೇಖರ ಸೀರಿ ಗೊಲ್ಲಾಳಪ್ಪಗೌಡ ಮಾಗಣಗೇರಾ, ದೇವಿಂದ್ರಪ್ಪಗೌಡ ಸರಕಾರ, ಕಸಾಪ ಗೌರವಾಧ್ಯಕ್ಷ ನಾಗಣ್ಣ ಹಾಗರಗುಂಡಗಿ, ಅಧ್ಯಕ್ಷ ಮಲ್ಲಿಕಾರ್ಜುನ ಆಲಮೇಲ, ಕಾರ್ಯದರ್ಶಿ ಚಿಂತನಗೌಡ ಪಾಟೀಲ ಇತರರು ಇದ್ದರು.

ಗೋಷ್ಠಿ: ತಾಲೂಕಿನಲ್ಲಿ ಸಾವಿರ ವರ್ಷಗಳ ಹಿಂದಿನ ಐತಿಹಾಸಿಕ ಕುರುಹುಗಳು ನಮಗೆ ನೋಡಲು ಸಿಗುತ್ತವೆ. ಇಜೇರಿ, ಯಡ್ರಾಮಿ, ಮಳ್ಳಿ, ಮಾಗಣಗೇರಿ, ಕೊಂಡಗೂಳಿ, ಕಣಮೇಶ್ವರ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಶಾಸನಗಳು, ವೀರಗಲ್ಲುಗಳು ನೋಡಲು ಸಿಗುತ್ತವೆ ಎಂದು ಪ್ರೊ| ಹಣಮಾಕ್ಷಿ ಗೋಗಿ ಗೋಷ್ಠಿಯಲ್ಲಿ ಹೇಳಿದರು.

ಪ್ರೊ| ರಂಗರಾಜ ವನದುರ್ಗ, ಪ್ರಾಂಶುಪಾಲ ಎನ್‌.ಆರ್‌.ಕುಲಕರ್ಣಿ, ಬಸವರಾಜ ಹದನೂರ, ಪರಮೇಶ್ವರ ಮೇಲಿನಮನಿ, ಸಾಯಬಣ್ಣ ಕಾಳೆ, ಡಾ| ಎಸ್‌.ಎ. ಪಾಟೀಲ, ಡಾ| ಶ್ರೀಶೈಲ ನಾಗರಾಳ, ದೇವಿಂದ್ರಪ್ಪಗೌಡ ಸರಕಾರ ಈ ಸಂದರ್ಭದಲ್ಲಿದ್ದರು.

ಕವಿಗೋಷ್ಠಿ: 23ಕ್ಕೂ ಹೆಚ್ಚು ಕವಿಗಳು ಕವನಗಳನ್ನು ವಾಚಿಸಿದರು, ಪ್ರಸ್ತುತ ರಾಜಕೀಯ ಸನ್ನಿವೇಶ, ಐತಿಹಾಸಿಕ ಸ್ಥಳಗಳ ನಿರ್ಲಕ್ಷ್ಯ ದಿ. ಚಂದ್ರಕಾಂತ ಕರದಳ್ಳಿ ಕುರಿತು ಕವನಗಳನ್ನು ವಾಚಿಸಿದರು. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಎಲ್‌ ಬಿಕೆ ಆಲ್ದಾಳ ವಹಿಸಿದ್ದರು. ಶಿವನಗೌಡ ಪಾಟೀಲ ಹಂಗರಗಿ, ವಿರೇಶ ಕಂದಗಲ್‌, ನಾನಗೌಡ ಕೂಡಿ, ಶಂಬಣ್ಣ ಹೂಗಾರ, ಗುರುಶಾಂತಪ್ಪ ಚಿಂಚೋಳಿ ಅತಿಥಿಗಳಾಗಿ ಆಗಮಿಸಿದ್ದರು.

ಸಮಾರೋಪ: ಯಡ್ರಾಮಿ ನೂತನ ತಾಲೂಕು ಆಗಿದ್ದರಿಂದ ಇಂತಹ ಸಮ್ಮೇಳನಗಳ ಅಗತ್ಯ ತುಂಬಾ ಇದೆ. ಶರಣರ, ಸೂಫಿಗಳ, ಸಂತ ಮಹಾಂತರ ನಾಡು ಎಂದು ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಮಾಗಣಗೇರಿಯ ಪೂಜ್ಯ ಡಾ| ವಿಶ್ವಾರಾಧ್ಯ ಶಿವಾಚಾರ್ಯರು ನುಡಿದರು. ಮಳ್ಳಿಯ ಪೂಜ್ಯ ರುದ್ರಮುನಿ ಶಿವಾಚಾರ್ಯರು, ಚಿಗರಳ್ಳಿಯ ಪೂಜ್ಯ ಸಿದ್ದಬಸವ ಕಬೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಜಯಕುಮಾರ ತೆಗಲತಿಪ್ಪಿ, ಭಗವಂತ್ರಾಯ ಬೆಣ್ಣೂರ, ಗೊಲ್ಲಾಳಪ್ಪಗೌಡ ಬಿರಾದಾರ, ಶರಣಯ್ಯ ಚಿಕ್ಕಮಠ, ರುದ್ರಗೌಡ ಪಾಟೀಲ, ಬಸನಗೌಡ ಬಿರಾದಾರ, ಗೊಲ್ಲಾಳಪ್ಪ ಖಡಿ, ಶರಣು ಮಂದೇವಾಲ ಅಥಿತಿಗಳಾಗಿ ಆಗಮಿಸಿದ್ದರು. ನಿಂಗಣ್ಣ ರೂಗಿ, ಬಿಬಿ ವಾರದ, ಅಮೃತ ದೊಡಮನಿ ನಿರೂಪಿಸಿದರು, ಶಾಂತಗೌಡ ಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next