ಯಡ್ರಾಮಿ: ತೊಗರಿಗೆ ಇತ್ತೀಚೆಗೆ ಭೌಗೋಳಿಕ ಮಾನ್ಯತೆ(ಜಿಆರ್‌ಆಯ್) ದೊರಕಿದ್ದರಿಂದ, ಕಲ್ಯಾಣ ಕರ್ನಾಟಕ ಭಾಗದ ತೊಗರಿ ಬೆಳೆಗಾರರಿಗೆ ಏನು ಲಾಭವಾಗಬಲ್ಲದು ಎನ್ನುವ ಚರ್ಚೆ ಶುರುವಾಗಿದೆ. ಪ್ರಸಕ್ತ ವರ್ಷದ ಆರಂಭದಲ್ಲಿ ಮಳೆ ಕೊರತೆ ಎದ್ದು ಕಂಡರೂ, ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಬಂದ ಅಲ್ಪ ಸ್ವಲ್ಪ ಮಳೆ ರೈತನ ಮುಖದಲ್ಲಿ ಮಂದಹಾಸ ಮೂಡಿಸಿದೆ.
Advertisement
ತಾಲೂಕಿನಾದ್ಯಂತ ಶೇ. 40 ಹತ್ತಿ, ಶೇ. 35 ತೊಗರಿ ಬಿತ್ತನೆಯಾಗಿದೆ. ಸಹಕಾರ ಸಂಘಗಳು ರೈತ ಬೆಳೆದ ತೊಗರಿಯನ್ನು ಬೆಂಬಲ ಬೆಲೆಗೆ ಖರೀದಿಸುವುದು ಕೇವಲ 10 ಕ್ವಿಂಟಲ್ ಮಾತ್ರ. ಪ್ರತಿ ಕ್ವಿಂಟಲ್‌ಗೆ ನೀಡುವ 6100 ರೂ. ನಮ್ಮ ಖಾತೆಗೆ ಜಮೆ ಆಗಲು ಮೂರ್‍ನಾಲ್ಕು ತಿಂಗಳು ಕಾಯಲೇಬೇಕು. ಇನ್ನು ಉಳಿದ ತೊಗರಿ ಯಾರಿಗೆ, ಎಲ್ಲಿ ಮಾರಬೇಕು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.