Advertisement

ಸಂತ್ರಸ್ತರಿಗೆ ಅಡುಗೆ ಬಡಿಸಿ ಧನ್ಯತೆ

10:06 AM Aug 24, 2019 | Naveen |

ಯಡ್ರಾಮಿ: ನೆರೆ ಹಾವಳಿಗೆ ತತ್ತರಿಸಿ ಕಂಗಾಲಾಗಿದ್ದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸೂರ್ಪಾಲಿ ಗ್ರಾಮದ ನೆರೆ ಸಂತ್ರಸ್ತರಿಗೆ ಅಡುಗೆ ಮಾಡಿ, ಊಟ ಬಡಿಸಿ, ಧನ್ಯತಾಭಾವ ವ್ಯಕ್ತಪಡಿಸಿದ್ದು ತಾಲೂಕಿನ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಯುವಕರು.

Advertisement

ಪಟ್ಟಣದ ಮುರಘೇಂದ್ರ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನೆರೆ ಸಂತ್ರಸ್ತರಿಗಾಗಿ ಯಡ್ರಾಮಿ ಸೇರಿದಂತೆ ಮಳ್ಳಿ, ಹಂಹರಗಾ (ಕೆ), ಸುಂಬಡ, ಮಾಗಣಗೇರಿ, ಹರನಾಳ, ಕಾಚಾಪುರ, ಕಡಕೋಳ ಮುಂತಾದ ಗ್ರಾಮಗಳಿಂದ ಏಳೆಂಟು ದಿನಗಳವರೆಗೆ ದವಸ-ಧಾನ್ಯ, ಬಟ್ಟೆ, ಹಾಸಿಗೆ- ಹೊದಿಕೆ, ಆರು ಲಕ್ಷ ರೂ. ಗಿಂತ ಅಧಿಕ ಮೌಲ್ಯದ ದಿನಬಳಕೆ ವಸ್ತುಗಳನ್ನು ಸಂಗ್ರಹಿಸಿ ನೇರವಾಗಿ ಸೂರ್ಪಾಲಿ ಗ್ರಾಮಕ್ಕೆ ತಲುಪಿಸಿದರು.

ಇವೆಲ್ಲ ಸಾಮಗ್ರಿಗಳನ್ನು ಸಂಗ್ರಹಿಸಲು ಬಸವರಾಜ ಪಾಟೀಲ ಎನ್ನುವವರು ತಮ್ಮ ವಾಹನವನ್ನು ಉಚಿತವಾಗಿ ನೀಡಿದ್ದರು. ಯಡ್ರಾಮಿಯಿಂದ ನೆರೆ ಪ್ರದೇಶ ಜಮಖಂಡಿ ತಾಲೂಕಿನ ಸೂರ್ಪಾಲಿ ಗ್ರಾಮಕ್ಕೆ ತೆರಳಲು ಮಡಿವಾಳಪ್ಪ ಜವಳಗಿ ಎನ್ನುವರು ಉಚಿತ ಟ್ರಕ್‌ ಸೇವೆ ಒದಗಿಸಿದ್ದರು.

ಸಂಗ್ರಹಿಸಿದ ಸೀರೆ, ಧೋತಿ, ಮಕ್ಕಳ ಬಟ್ಟೆ, ಲುಂಗಿ ಹಾಗೂ ಒಂದು ಟನ್‌ ಅಕ್ಕಿಯನ್ನು ಸಂತ್ರಸ್ತರಿಗೆ ಹಂಚಿದ ಯುವಕರು, ಸ್ಥಳದಲ್ಲೇ ಬಿಡಾರ ಹೂಡಿ ಒಂದು ದಿನದ ಅಡುಗೆ ತಯಾರಿಸಿ, ಊಟ ಬಡಿಸಿದರು.

ಸ್ಥಳಕ್ಕೆ ಆಗಮಿಸಿದ್ದ ಜಮಖಂಡಿ ತಾಲೂಕಿನ ಶಾಸಕ ಆನಂದ ನ್ಯಾಮಗೌಡ ಯುವಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಯುವಕರಾದ ಸಾಹೇಬಗೌಡ ದೇಸಾಯಿ, ವಿಶ್ವನಾಥ ಪಾಟೀಲ, ಸಂತೋಷ ಕೊಡೆಕಲ್ಲ, ಅಫ್ರೂೕಜ್‌ ಅತನೂರ, ಬಸವರಾಜ ಗುರಶೆಟ್ಟಿ, ಅನೀಲ ಗುತ್ತೇದಾರ, ಅಜರುದ್ದೀನ್‌ ಮಳ್ಳಿಕರ್‌, ಶರಣು ಬೆಲ್ಲದ, ಸಮರ್ಥ ಬೆಲ್ಲದ, ಸಾಯಿ ಡಂಬಳ, ಆನಂದ ಮಾದರ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next