Advertisement

ಯಂಕ, ನಾಣಿ, ಶೀನ ಮನಬಂದಂತೆ ಮಾತನಾಡುತ್ತಾರೆ : ಯಡಿಯೂರಪ್ಪ

07:36 PM Dec 05, 2021 | Team Udayavani |

ಮೈಸೂರು : ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ,ಸಹೋದ್ಯೋಗಿಗಳಿಗೆ ಸಿಹಿ ಊಟ ನೀಡಿ ಅಲ್ಲಿಂದ ಹೊರಬಂದೆ.ನಾನು ಕಣ್ಣೀರು ಹಾಕಿ ಹೊರಬಂದಾಗ ಬೇರೆಬೇರೆ ಮಾತುಗಳನ್ನ ಆಡಿದರು. ಆದರೆ ವಾಸ್ತವ ಅದಲ್ಲ, ಇಷ್ಟು ವರ್ಷದ ಜನರ ಪ್ರೀತಿ ಒಮ್ಮೆಲೆ ಕಣ್ಮುಂದೆ ಬಂದು ಕಣ್ಣೀರು ಹಾಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರು ಭಾನುವಾರ ಹೇಳಿಕೆ ನೀಡಿದ್ದಾರೆ.

Advertisement

ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಯಡಿಯೂರಪ್ಪ , ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ ೧೪೩ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ.ನಾನು ಸುಮ್ಮನೆ ಕೂರುವುದಿಲ್ಲ, ನಿಮ್ಮನ್ನೂ ಸುಮ್ಮನೆ ಕೂರಲು ಬಿಡುವುದಿಲ್ಲ.ಇದು ನಿಮ್ಮಿಬ್ಬರಿಗೂ ದೊಡ್ಡ ಸವಾಲು. ಪ್ರಧಾನಿ ನರೇಂದ್ರ ಮೋದಿಗರ ಬಲ ತುಂಬುವ ಜವಾಬ್ದಾರಿ ನಮ್ಮಮೇಲಿದೆ.
ಯಂಕ, ನಾಣಿ, ಶೀನ ಮನಬಂದಂತೆ ಮಾತನಾಡುತ್ತಾರೆ.ಇದಕ್ಕೆ ಚುನಾವಣೆ ಮೂಲಕ ಉತ್ತರ ನೀಡಬೇಕು ಎಂದರು.

ಮೋದಿ ಬಗ್ಗೆ ಅಲ್ಪವಾಗಿ ಮಾತನಾಡುವವರಿಗೆ ಓಟ್ ನ ಮೂಲಕ ಉತ್ತರ ಕೊಡಬೇಕು.ಜನಗಳ ಪ್ರೀತಿ ವಿಶ್ವಾಸ ನಮ್ಮ ಬಳಿ ಇದೆ. ಇದು ಕೇವಲ ಮೈಸೂರು ಮಾತ್ರವಲ್ಲ ರಾಜ್ಯದ ಮೂಲೆ ಮೂಲೆಯಲ್ಲೂ ಜನ ಪ್ರೀತಿ ನೀಡ್ತಿದ್ದಾರೆ. ನನಗೆ ರಾಜಕೀಯ ತೃಪ್ತಿ ಇದೆ, ಸಮಾಧಾನ ಇದೆ. ಮುಂಬರುವ ದಿನಗಳಲ್ಲಿ ದೊಡ್ಡ ಮಟ್ಟದ ಸಂಘಟನೆ ಅವಶ್ಯಕತೆ ಇದೆ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತೇನೆ. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುತ್ತೇನೆ ಎಂದರು.

ಸರ್ವ ಸಮ್ಮತ ಅಭ್ಯರ್ಥಿ
ರಘು ಕೌಟಿಲ್ಯ ಅವರನ್ನ ಸರ್ವ ಸಮ್ಮತ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೇವೆ.ಈಗಾಗಲೇ ರಘು ಎಲ್ಲಾ ಪಂಚಾಯ್ತಿ ಕೇಂದ್ರಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದ್ದಾರೆ. ರಘು ಕೌಟಿಲ್ಯ ಕೊರೊನಾ ಸಂದರ್ಭದಲ್ಲಿ ವಾರಿಯರ್ಸ್ ಆಗಿ ಸಾರ್ವಜನಿಕವಾಗಿ ಕೆಲಸ ಮಾಡಿದ್ದಾರೆ. ಆ ಸಂದರ್ಭದಲ್ಲಿ ಅವರ ಶ್ರೀಮತಿಯೂ ಅನಾರೋಗ್ಯಗೊಂಡಾಗ ಪತ್ನಿಯನ್ನ ಕಳೆದುಕೊಂಡರು ಎಂದರು.

ರಘು ಕೌಟಿಲ್ಯ ಹೆಸರಿನ ಮುಂದೆ ಒಂದು ಎಂದು ಬರೆಯಿರಿ. ಅದರ ಮೇಲೆ ಮತ್ತೊಮ್ಮೆ ಬರೆದರೆ ಅದು ಅನ್ ವ್ಯಾಲಿಡ್. ಪ್ರತಿ ಚುನಾವಣೆಯಲ್ಲೂ ಈ ರೀತಿ ಮತಗಳು ಹಾಳಾಗುತ್ತಿವೆ.ವಿದ್ಯಾವಂತರೇ ಮಾಡುವ ತಪ್ಪು ಇದು. ಹಾಗಾಗಿ ಮತದಾರರು ಯಾರೂ ಈ ತಪ್ಪನ್ನು ಮಾಡಬೇಡಿ. ಬೆಳ್ಳಿಗ್ಗೆಯೇ ಮತದಾನ ಮಾಡಿ ಬಳಿಕ ನಿಮ್ಮ ನಿಮ್ಮ ಕೆಲಸಗಳಿಗೆ ತೆರಳಿ ಎಂದರು.

Advertisement

ಬಿಜೆಪಿ 20ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ರಘು ಕೌಟಿಲ್ಯ ಸೇರಿ 15ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. 100ಕ್ಕೆ 100ರಷ್ಟು ಬಿಜೆಪಿಗೆ ಬಹುಮತ ಬರುತ್ತದೆ. ಮಹಾತ್ಮ ಗಾಂಧೀಜಿಯವರ ರಾಮರಾಜ್ಯ ಕನಸು ನನಸಾಗಬೇಕು. ಅದಕ್ಕಾಗಿ ಬಿಜೆಪಿಯನ್ನ ಗೆಲ್ಲಿಸಬೇಕು. ಮತಗಟ್ಟೆಗಳ ಬಳಿನಿಂತು ಕೆಲಸ ಮಾಡಿ. ನೀವೂ ಮತ್ತೊಬ್ಬರಿಂದಲೂ ಮತ ಹಾಕಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ನಮ್ಮ ಪಕ್ಷ ಯಾರೋಂದಿಗೂ ಹೊಙದಾಣಿಕೆ ಮಾಡಿಕೊಳ್ಳುವುದಿಲ್ಲ.ಅಭ್ಯರ್ಥಿ ಇಲ್ಲದ ಕಡೆ ಬೆಂಬಲ ಮಾತ್ರ ಕೇಳಿದ್ದೇವೆ. ಇಲ್ಲಿ ಯಾವುದೇ ಒಳ ಒಪ್ಪಂದ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next