Advertisement

Yadgir; ಭಾರೀ ಬಿರುಗಾಳಿ ಸಹಿತ ಮಳೆ: ಭೀತರಾದ ಜನರು

08:28 PM May 26, 2024 | Team Udayavani |

ಯಾದಗಿರಿ: ಜಿಲ್ಲಾದ್ಯಂತ ಸುರಿದ ಬಿರುಗಾಳೆ ಸಮೇತ ಮಳೆಗೆ ಧರಗೆ ಮರಗಳು ಉರುಳಿದ ಘಟನೆ ನಡೆದಿದೆ. ಜಿಲ್ಲೆಯ ಸೈದಾಪುರ, ನಾಯ್ಕಲ್, ಖಾನಾಪುರ, ಗುರುಸುಣಗಿ ಗ್ರಾಮಗಳಲ್ಲಿ ಜೋರು ಗಾಳಿ ಸಮೇತ ಮಳೆಯಾಗಿದೆ.ಜಿಲ್ಲೆಯ ಗುರಸುಣಗಿ ಗ್ರಾಮ ಬಳಿ ಗಾಳೆ ಮಳೆಗೆ ಬೃಹತ್ ಮರ ಉರುಳಿ ರಸ್ತ ಬಿದ್ದ ಪರಿಣಾಮ ಯಾದಗಿರಿ- ಶಹಾಪುರ ಮುಖ್ಯರಸ್ತ ಮೂರು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತು.

Advertisement

ಶಹಾಪುರ ಮುಖ್ಯ ರಸ್ತೆಯ ನಾಯ್ಕಲ್ ಕ್ರಾಸ್ ನಿಂದ ಗುರಸುಣಗಿ ಗ್ರಾಮದವರೆಗೆ ವಾಹನಗಳು ಸಂಚಾರಕ್ಕೆ ಪರದಾಡುವ ಸ್ಥಿತಿ ತಲುಪಿತು. ಮರ ಉರುಳಿ ಎರಡು ತಾಸು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು, ಇಲಾಖೆಯವರು ಬರದೇ ಇರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಯಿತು.

ಇಬ್ರಾಹಿಮಪುರ ತಾಂಡಾದಲ್ಲಿ ಮರವೊಂದು ಧರಗೆ ಉರುಳಿದ ಪರಿಣಾಮ ವಿದ್ಯುತ್ ಕಂಬ ಹಾಗೂ ವೈಯರ್ ರಸ್ತೆಯ ಮೇಲೆ ಬಿದ್ದು ತಾಂಡಾದ ಜನರಿಗೆ ಕೆಲ‌ಕಾಲ ಭಯದ ವಾತಾವರಣ ಸೃಷ್ಟಿಸಿತು. ಇಬ್ರಾಹಿಮಪುರ, ಗುರುಸುಣಗಿ, ನಾಯ್ಕಲ್, ಖಾನಾಪುರ, ಮನಗನಹಾಳ, ಗುಂಡಳ್ಳಿ, ಚಟ್ನಳ್ಳಿ, ತಂಗಡಗಿ ಸೇರದತೆ ಅನೇಕ ತಾಂಡಾಗಳಲ್ಲಿ ದಾರಿಯುದ್ದಕ್ಕೂ ಮರಗಳು ಬಿದ್ದವು, ಹೊಲ-ಗದ್ದೆಗಳು‌ ಜಲಾವೃತಗೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next