Advertisement

ಮನುಷ್ಯನಿಗೆ ಆರೋಗ್ಯ ಬಹು ಮುಖ್ಯ

03:43 PM Apr 18, 2019 | Naveen |

 

Advertisement

 

ಯಾದಗಿರಿ: ಮನುಷ್ಯನಿಗೆ ಆರೋಗ್ಯ ಬಹು ಮುಖ್ಯ
ಆರೋಗ್ಯವಿಲ್ಲದ ಮನುಷ್ಯ ಯಾವುದೆ ಸಾಧನೆ
ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ನಮ್ಮ ಆರೋಗ್ಯದ
ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಆಡಳಿತ
ವೈದ್ಯಾಧಿಕಾರಿ ಸಂಜಯ ಸಂಗಾವಿ ಹೇಳಿದರು.

ಶಹಾಪುರ ತಾಲೂಕು ವನದುರ್ಗ ಪ್ರಾಥಮಿಕ
ಆರೋಗ್ಯ ಕೇಂದ್ರದ ವ್ಯಾಪ್ತಿಯ ಗಂಗನಾಳ
ಗ್ರಾಮದಲ್ಲಿ ಆಯೋಜಿಸಲಾಗಿದ್ದ ವಿಶ್ವ ಆರೋಗ್ಯ
ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು
ಮಾತನಾಡಿದರು.

ದೇಶ ಸದೃಢವಾಗಿರಲು ದೇಶದ
ಜನಸಂಪನ್ಮೂಲಶಕ್ತಿ ಕೂಡ ಅವಶ್ಯಕವಾಗಿದೆ. ಆ
ಜನಶಕ್ತಿ ಆರೋಗ್ಯಕರವಾಗಿರಲು ಪೌಷ್ಟಿಕತೆ ಅವಶ್ಯಕತೆ
ಇದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಪೌಷ್ಟಿಕ
ಆಹಾರದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ
ಇದೆ. ಮಾನಸಿಕವಾಗಿ ಸದೃಢ ಆರೋಗ್ಯ ವೃದ್ಧಿಯಾಗಿ
ದೇಶ ಅಭಿವೃದ್ಧಿಯಾಗಲು ಆರೋಗ್ಯ ಇಲಾಖೆ
ಸಿಬ್ಬಂದಿ ಶ್ರಮಿಸಬೇಕು ಎಂದು ಹೇಳಿದರು.

Advertisement

ತಾಲೂಕು ಹಿರಿಯ ಆರೋಗ್ಯ ಸಹಾಯಕ
ಸಂತೋಷ ಮುಳಜೆ ಮಾತನಾಡಿ, ಮನುಷ್ಯನ
ಆರೋಗ್ಯ ಉತ್ತಮವಾಗಿದ್ದರೆ ಜೀವನದಲ್ಲಿ
ಸಾಧನೆ ಮಾಡಲು ಸಾಧ್ಯವಿದೆ. ಮಕ್ಕಳು ಶಾರೀರಿಕ
ಮತ್ತು ಮಾನಸಿಕವಾಗಿ ಸದೃಢರಾದಾಗ ಮಾತ್ರ
ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ
ಹಾಗೂ ನಿರಂತರವಾಗಿ ಆರೋಗ್ಯ ತಪಾಸಣೆ
ಮಾಡಿಕೊಳ್ಳುವುದರ ಮೂಲಕ ಆರೋಗ್ಯ
ಸಂರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
ಆರೋಗ್ಯ ಸಂಚಾರಿ ಘಟಕದ ಹಿರಿಯ
ವೈದ್ಯಾಧಿಕಾರಿ ಯು.ಎಂ. ಬಾನುಶಾಲಿ, ಅಂಗನವಾಡಿ
ಮೇಲ್ವಿಚಾರಕಿ ನಂದಾ ಕೆ. ಮಾತನಾಡಿದರು.

ಕಿರಿಯ ಆರೋಗ್ಯ ಸಹಾಯಕ ಮಲ್ಲೇಶ
ಕುರಕುಂದಿ, ಷಣ್ಮುಖ ಹೊಸಳ್ಳಿ, ವಿಶ್ವರಾಧ್ಯ
ಶಹಾಬಾದ, ಎಂ.ಎಲ್‌.ಎಚ್‌.ಪಿ ಷರೀಫ್‌,
ಮಹೇಶ ಪೂಜಾರಿ, ಕಿರಿಯ ಮಹಿಳಾ ಆರೋಗ್ಯ
ಸಹಾಯಕಿ ಕು.ಲಕ್ಷ್ಮೀ ಪಾಟೀಲ, ಮಂಗಳಾ ಬೀದರ,
ದೇವಕ್ಕಿ ಹಾಗೂ ಅಂಗನವಾಡಿ ಮತ್ತು ಆಶಾ
ಕಾರ್ಯಕರ್ತರು ಹಾಜರಿದ್ದರು.

ಯಾದಗಿರಿ: ಶಹಾಪುರ ತಾಲೂಕು ವನದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ
ಗಂಗನಾಳ ಗ್ರಾಮದಲ್ಲಿ ನಡೆದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ವೈದ್ಯಾಧಿಕಾರಿ
ಸಂಜಯ ಸಂಗಾವಿ ಉದ್ಘಾಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next