Advertisement
ನಗರದ ಗಂಜ್ ಆವರಣದಲ್ಲಿರುವ ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಆನ್‌ಲೈನ್ ತೆರಿಗೆ ಪಾವತಿ ಮತ್ತು ಟಿಡಿಎಸ್ ವ್ಯವಸ್ಥೆ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ರೈತರು ಹೆಚ್ಚಾಗಿ ನಗದು ವ್ಯವಹಾರ ಮಾಡುತ್ತಾರೆ. ಅವರು ಹಣ ತಂದು ಕೊಡುವುದರಿಂದ ಅವರ ಜತೆ ಆನ್‌ಲೈನ್ ವ್ಯವಹಾರ ಸಾಧ್ಯವಾಗುತ್ತಿಲ್ಲ. ಗಂಜ್ ಒಂದರಲ್ಲಿಯೇ ನಿತ್ಯ ಒಂದು ಕೋಟಿ ನಗದು ಸಂಗ್ರಹವಾದರೆ ಇದಕ್ಕೆ 2 ಲಕ್ಷ ರೂ. ಸರ್ಕಾರ ಕಡಿತ ಮಾಡಿಕೊಂಡು ಹಣ ಇಟ್ಟುಕೊಂಡರೆ ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗುತ್ತದೆ. ಇದು ಒಂದು ರೀತಿ ರೈತರು ಆನ್‌ಲೈನ್ ವ್ಯವಹಾರ ಮಾಡದಿದ್ದರೆ ವರ್ತಕರಿಗೆ ಬರೆ ಎಳೆದಂತೆ ಸರಿ. ಆದ್ದರಿಂದ ಇದಕ್ಕೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಎಲ್ಲ ವ್ಯವಹಾರಸ್ಥರಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಯಾದಗಿರಿ ನಗರದ ಹಿರಿಯ ಲೆಕ್ಕ ಪರಿಶೋಧಕ (ಚಾರ್ಟೆಡ್ ಅಕೌಂಟೆಂಟ್) ಸಂತೋಷ ಪಾಟೀಲ ಟಿಡಿಎಸ್ ಕುರಿತು ವಿವರವಾಗಿ ಮಾತನಾಡಿ, ತೆರಿಗೆ ಕಡಿತವಾದರೂ ನಂತರ ಶಿಸ್ತುಬದ್ಧವಾಗಿ ಆದಾಯ ತೆರಿಗೆ ಪಾವತಿ ಮಾಡಿದಾಗ ನಿಮ್ಮ ಹೆಚ್ಚುವರಿ ಹಣ ಮರಳಿ ಪಡೆಯಲು ಇದರಲ್ಲಿ ಅವಕಾಶ ವಿದೆ. ಆದರೆ ದೊಡ್ಡ ವ್ಯವಹಾರಸ್ಥರಿಗೆ ಟಿಡಿಎಸ್‌ನಿಂದ ಆರ್ಥಿಕ ಸಮಸ್ಯೆಯಾಗುತ್ತದೆ. ಇದು ಸರ್ಕಾರ ಮಟ್ಟದಲ್ಲಿ ಆಗಿರುವ ತೀರ್ಮಾನವಾಗಿದೆ. ಆದ್ದರಿಂದ ಸರ್ಕಾರ ಮಟ್ಟದಲ್ಲಿಯೇ ಪರಿಹಾರ ಸಾಧ್ಯ ಎಂದು ಹೇಳಿದರು.
ಉಪಾಧ್ಯಕ್ಷ ವಿಷ್ಣುಕುಮಾರ ವ್ಯಾಸ್ ಕಾಂತಿಲಾಲ್ ದೋಕಾ, ದಿನೇಶ ಜೈನ್, ಭರತ ಭಾನುಷಾಲಿ, ಸೋಮನಾಥ ಜೈನ್, ರಾಜೇಂದ್ರ ಗಾಂದಿ, ಪರಮಾನಂದರೆಡ್ಡಿ ಕೊಲ್ಲೂರು, ಲಾಯಿಕ್ ಹುಸೇನ ಬಾದಲ್, ಸುರೇಶ ಬಾಣಾ, ವೀರೇಶಗೌಡ ಗೋನಾಲ ಸೇರಿದಂತೆ ವ್ಯಾಪಾರಸ್ಥರು ಇದ್ದರು.