Advertisement

ಯಾದಗಿರಿ: ಸೋಂಕಿತರ ಸಂಖ್ಯೆ 930ಕ್ಕೇರಿಕೆ

09:24 AM Jun 29, 2020 | Suhan S |

ಯಾದಗಿರಿ: ಜಿಲ್ಲೆಯಲ್ಲಿ ರವಿವಾರ ಒಬ್ಬನಿಗೆ ಸೋಂಕು ದೃಢವಾಗಿದ್ದು, ಮಹಾರಾಷ್ಟ್ರದದಿಂದ ಆಗಮಿಸಿದ್ದ ಅಲ್ಲಿಪುರ ದೊಡ್ಡ ತಾಂಡಾದ 39 ವರ್ಷದ ಪುರುಷ (ಪಿ-12310)ನಿಗೆ ಸೋಂಕು ತಗುಲಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 930ಕ್ಕೆ ಏರಿಕೆಯಾಗಿದೆ.

Advertisement

ಜಿಲ್ಲೆಯಲ್ಲಿ ಸೋಂಕಿತರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ರವಿವಾರದ 36 ಜನ ಸೇರಿದಂತೆ ಈವರೆಗೆ 821 ಜನರು ಗುಣಮುಖವಾಗಿದ್ದಾರೆ. 108 ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ. ರವಿವಾರ ಸೋಂಕಿತರ ಪ್ರಾಥಮಿಕ ಸಂಪರ್ಕಿತ 57 ಜನರು ಪತ್ತೆಯಾಗಿದ್ದು ಒಟ್ಟು 1562 ಜನ ಪ್ರಾಥಮಿಕ ಸಂಪರ್ಕ ಮತ್ತು ಇಂದಿನ ದ್ವಿತೀಯ ಸಂಪರ್ಕದ 85 ಜನ ಸೇರಿ ಒಟ್ಟು 2942 ಜನರಿದ್ದಾರೆ. ಜಿಲ್ಲೆಯಲ್ಲಿ 163 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿದ್ದು, ಇನ್ನೂ 1164 ಜನರ ಪರೀಕ್ಷಾ ವರದಿ ಬರಬೇಕಿದೆ. ಈವರೆಗೆ 23,196 ಜನರ ವದರಿ ನೆಗೆಟಿವ್‌ ಬಂದಿದೆ. ರವಿವಾರ ಹೊಸದಾಗಿ 3 ಕಂಟೈನ್ಮೆಂಟ್‌ ಝೋನ್‌ ರಚಿಸಲಾಗಿದ್ದು, ಮೂರನ್ನು ತೆರವುಗೊಳಿಸಲಾಗಿದೆ.

ಸದ್ಯ ಒಟ್ಟು 80 ಕಂಟೈನ್ಮೆಂಟ್‌ ಝೋನ್‌ ರಚಿಸಲಾಗಿದೆ.ಹೊಸ ಜಿಲ್ಲಾಸ್ಪತ್ರೆಯಲ್ಲಿ 28 ಜನರನ್ನು ಪತ್ಯೇಕವಾಗಿರಿಸಲಾಗಿದೆ. ಶಹಾಪುರ ಕೋವಿಡ್ ಕೇರ್‌ ಸೆಂಟರ್‌ನಲ್ಲಿ 24, ಸುರಪುರ ಕೋವಿಡ್ ಕೇರ್‌ ಸೆಂಟರ್‌ನಲ್ಲಿ 21 ಮತ್ತು ಬಂದಳ್ಳಿ ಏಕಲವ್ಯ ಕೋವಿಡ್ ಕೇರ್‌ ಸೆಂಟರ್‌ನಲ್ಲಿ 39 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಜಿಲ್ಲೆಯ 16 ಸಾಂಸ್ಥಿಕ ಕ್ವಾರಂಟೈನ್‌ ಸೆಂಟರ್‌ಗಳಲ್ಲಿ 669 ಜನರನ್ನು ಪ್ರತ್ಯೇಕ ಇಸಲಾಗಿದೆ ಎಂದು ರಜಪೂತ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next