Advertisement

371(ಜೆ) ಅಡಿ ಸಾರಿಗೆ ಸಿಬ್ಬಂದಿ ನೇಮಿಸಿ: ಗದ್ದಗಿ

03:44 PM Aug 17, 2019 | Naveen |

ಯಾದಗಿರಿ: ಸಾರಿಗೆ ಇಲಾಖೆಯಲ್ಲಿ ಹೈಕ ಭಾಗಕ್ಕೆ 371(ಜೆ) ಜಾರಿಯಾದಾಗಿನಿಂದ ಈಶಾನ್ಯ ಸಾರಿಗೆ ಸಂಸ್ಥೆಯಲ್ಲಿ ಮೇಲ್ವಿಚಾರಕ, ಅಧಿಕಾರಿ ದರ್ಜೆ 2 ಮತ್ತು 1ರ ಕಿರಿಯ ಶ್ರೇಣಿ ವರೆಗಿನ ಹುದ್ದೆಗಳನ್ನು ನೇಮಕ ಮಾಡಬೇಕು ಎಂದು ಅಖೀಲ ಕರ್ನಾಟಕ ರಾಜ್ಯ ಸಾರಿಗೆ ನೌಕರರ ಮಹಾ ಮಂಡಳ ಅಧ್ಯಕ್ಷ ಚಂದ್ರಕಾಂತ ಗದ್ದಗಿ ಒತ್ತಾಯಿಸಿದರು.

Advertisement

ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಯಾದಗಿರಿ ವಿಭಾಗದ ರಾಜ್ಯ ಸಾರಿಗೆ ನೌಕರರ ಸಂಘದ 5ನೇ ಮಹಾ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನೌಕರರ ಅಗತ್ಯತೆಯ ಕುರಿತು ಸರ್ಕಾರದ ಮಟ್ಟದಲ್ಲಿ ಹೋರಾಟಗಳನ್ನು ರೂಪಿಸಲು ಸಂಘ ನಿರ್ಧರಿಸಿದ್ದು, ಸಂವಿಧಾನ ಸರ್ವರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಆದರೇ ಅಧಿಕಾರದಲ್ಲಿರುವವರು ಸಂವಿಧಾನದ ಆಶಯದಂತೆ ಸರ್ವರಿಗೂ ಒಳ್ಳೆಯದಾಗುವಂತೆ ಸೌಕರ್ಯಗಳನ್ನು ಒದಗಿಸಬೇಕು ಎಂದರು.

ಕಲಬುರಗಿ ವಿಭಾಗದ ಪ್ರದಾನ ಕಾರ್ಯದರ್ಶಿ ಚಂದ್ರಕಾಂತ ಡೊಳ್ಳಿ ಮಾತನಾಡಿ, ಈಶಾನ್ಯ ಸಾರಿಗೆ ಸಂಸ್ಥೆಯಲ್ಲಿ ಚಾಲಕ ಮತ್ತು ನಿರ್ವಾಹಕರ ಹುದ್ದೆಗಳು ಕಳೆದ ನಾಲ್ಕು ವರ್ಷದಿಂದ ನೇಮಕವಾಗಿಲ್ಲ. ಸಂಸ್ಥೆ ಸಾಕಷ್ಟು ಸಿಬ್ಬಂದಿ ಕೊರತೆಯನ್ನು ಅನುಭವಿಸುತ್ತಿದೆ. 2400 ನೌಕರರ ಹುದ್ದೆ ನೇಮಕಕ್ಕೆ ಸರ್ಕಾರದ ಅನುಮೋದನೆಗೆ ಕಳಿಸಿರುವ ಮಾಹಿತಿಯಿದೆ ಎಂದರು.

ಸಂಸ್ಥೆಯಲ್ಲಿ ನೌಕರರು ಹೆಚ್ಚು ಸಮಯ ಮೀರಿ ಕೆಲಸ ಮಾಡಿದರೂ ಒಂದು ಕಿರುಕುಳ, ವಾಹನ ಕಡಿಮೆ ಓಡಿದರೂ ತೊಂದರೆಯಿಂದ ನೌಕರರನ್ನು ಸಂಕಷ್ಟಕ್ಕೆ ಸಿಲುಕಿಸದೆ ಮಾನವೀಯವಾಗಿ ಸೇವೆಯನ್ನು ಪಡೆಯಬೇಕು ಎಂದು ಒತ್ತಾಯಿಸಿದರು.

Advertisement

ಅಖೀಲ ಕರ್ನಾಟಕ ರಾಜ್ಯ ಸಾರಿಗೆ ನೌಕರರ ಮಹಾ ಮಂಡಳ ಪ್ರದಾನ ಕಾರ್ಯದರ್ಶಿ ಬಸವರಾಜ ಕಣ್ಣಿ ಮಾತನಾಡಿ, 371(ಜೆ)ಯಡಿ ನೇಮಕಕ್ಕೆ ಸರ್ಕಾರದ ಆರ್ಥಿಕ ಇಲಾಖೆಯ ಅನುಮೋದನೆ ಬೇಕಿಲ್ಲ. ಆದರೂ ಆರ್ಥಿಕ ಇಲಾಖೆಗೆ ಕಳಿಸಿದ್ದರಿಂದ ವರ್ಷಗಟ್ಟಲೇ ಕಡತಗಳು ಕೊಳೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೈಕ ಭಾಗದ 371 (ಜೆ) ಕಲಂ ಕೇವಲ ಚಾಲಕರು, ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿಗೆ ಮಾತ್ರ ಅನ್ವಯವಾಗುತ್ತಿದೆ. ನಮ್ಮಲ್ಲಿ ಅಧಿಕಾರಿ ವರ್ಗಗಳ ನೇಮಕಕ್ಕೆ ಇದು ಅನ್ವಯವಾಗುತ್ತಿಲ್ಲ ಎಂದವರು, ಹೈಕ ಭಾಗದಲ್ಲಿ 92 ಅಧಿಕಾರಿ ಹುದ್ದೆ ಹಾಗೂ 225 ಮೇಲ್ವಿಚಾಕರ ಹುದ್ದೆಗಳು ಖಾಲಿಯಾಗಿದೆ ಎಂದರು. ಅಲ್ಲದೇ ಈಗಾಗಲೇ ಸೇವೆಯಲ್ಲಿರುವ ಸಿಬ್ಬಂದಿಗೆ ಮುಂಬಡ್ತಿಯೂ ಸಿಕ್ಕಿಲ್ಲ. ಹಾಗಾಗಿ ಶೀಘ್ರವೇ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನೌಕರರ ಸಮಸ್ಯೆಗಳ ಈಡೇರಿಸುವಂತೆ ಮನವಿ ಮಾಡಲಿದೆ ಎಂದರು.

ರವೀಂದ್ರನಾಥ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.ಮಾನಯ್ಯ ಹತ್ತಿಗೂಡೂರ, ನಾಗರೆಡ್ಡಿ ಸಾವೂರ, ಸಿದ್ದಣ್ಣ ಗೌಡ ಚನ್ನೂರ, ಸಿದ್ದಣ್ಣ ಸೀಕೆ, ವಿವೇಕಾನಂದ, ಎಸ್‌.ಎಸ್‌. ಸಜ್ಜನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next