Advertisement
ನಗರದ ತಾಪಂ ಕಚೇರಿಯಲ್ಲಿ ನಡೆದ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಶಾಸಕರು, ತಾಲೂಕಿನಲ್ಲಿ ಮೀನುಗಾರರ ಕುಟುಂಬಗಳಿವೆ. ಆದರೆ ಅವರ ಬಳಿ ಲೈಸನ್ಸ್ ಇಲ್ಲದಿರುವುದರಿಂದ ಸರ್ಕಾರಿ ಸೌಕರ್ಯ ಪಡೆಯಲಾಗಲಿಲ್ಲ ಎಂದು ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಮೀನುಗಾರಿಕೆ ಇಲಾಖೆ ಅಧಿಕಾರಿ ಮಹೇಶ, ಮೀನುಗಾರರ ಸಹಕಾರ ಸಂಘವಿದೆ. ಅವರು ಲೈಸನ್ಸ್ ನೀಡುತ್ತಾರೆ ಎಂದು ಸಭೆಗೆ ಮಾಹಿತಿ ನೀಡಿದರು. ಇಲಾಖೆ ಇರುವುದು ಏತಕ್ಕೆ? ಮೀನುಗಾರರ ಕುಟುಂಬಗಳಿಗೆ ಇಲಾಖೆಯಿಂದಲೇ ಲೈಸನ್ಸ್ ನೀಡಬೇಕು ಎಂದು ತಾಕೀತು ಮಾಡಿದರು.
ಬಳಿಕ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲಿಸಿದ ಶಾಸಕರು, ತಮ್ಮ ಕ್ಷೇತ್ರದಲ್ಲಿ ಎಷ್ಟು ಜನರು ಆಯುಷ್ಮಾನ್ ಕಾರ್ಡ್ ಮಾಡಿಸಿಕೊಂಡಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ|ಹಣಮಂತರೆಡ್ಡಿ ಅವರಿಗೆ ಮಾಹಿತಿ ಕೇಳಿದರು. ಅಧಿಕಾರಿ ಆಯುಷ್ಮಾನ್ ಕಾರ್ಡ್ ಫಲಾನುಭವಿಗಳ ಅಂಕಿ ಅಂಶ ನೀಡುವಲ್ಲಿ ವಿಫಲವಾದರು. ಅದಕ್ಕೆ ಅಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಆರೋಗ್ಯ ಇಲಾಖೆ ಬಗ್ಗೆ ಸಾಕಷ್ಟು ದೂರುಗಳಿವೆ. ಸುಧಾರಿಸಿಕೊಂಡು ಕಾಳಜಿಯಿಂದ ಕೆಲಸ ಮಾಡುವಂತೆ ತಾಕೀತು ಮಾಡಿದರು. ಮಹಿಳೆಯರ ಸಂತಾನ ನಿರೋಧ ಶಸ್ತ್ರ ಚಿಕಿತ್ಸೆಯಲ್ಲಿ ಯಾದಗಿರಿ ಶೇ.51 ಸಾಧನೆಯಾಗಿದೆ. ಕಡಿಮೆ ಏಕೆ ಎಂಬ ಪ್ರಶ್ನಿಗೆ ಉತ್ತರಿಸಿದ ಅಧಿಕಾರಿ ತಾಲೂಕಿನಲ್ಲಿ ಒಬ್ಬರೇ ಶಶ÷ ಚಿಕಿತ್ಸಕರು ಇರುವುದರಿಂದ ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ ಎಂದು ವಿವರಿಸಿದರು.
Related Articles
Advertisement
ಲೋಕೋಪಯೋಗಿ ಇಲಾಖೆ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಗುಣಮಟ್ಟದಿಂದ ಆಗುವಂತೆ ನೋಡಿಕೊಳ್ಳಬೇಕು, ಟೆಂಡರ್ ಕಡಿಮೆ ಮೊತ್ತಕ್ಕೆ ಹಾಕಿದ್ದಾರೆ ಎಂದು ಸುಮ್ಮನಿರಬಾರದು. ಕಾಮಗಾರಿ ಹೇಗೆ ಮಾಡಿದ್ದಾರೆ ಎನ್ನುವುದು ಅಧಿಕಾರಿಗಳು ಪರಿಶೀಲಿಸಬೇಕು ಎಂದು ಸೂಚಿಸಿದರು.
ಅರಣ್ಯ ಇಲಾಖೆ ಮತ್ತು ಸಮಾಜಿಕ ಅರಣ್ಯ ಇಲಾಖೆಯಿಂದ ಎಲ್ಲಿ ಸಸಿ ನೆಡುವ ಕಾರ್ಯವಾಗಿದೆ? ಸೋಲಾರ್ ಅಳವಡಿಕೆ ಎಲ್ಲಿಲ್ಲೆ ಅಗಿದೆ? ಸಿಲಿಂಡರ್ ವಿತರಣೆ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದರು. ಪಶುಪಾಲನಾ, ಕೃಷಿ, ಶಿಕ್ಷಣ, ಜೆಸ್ಕಾಂ, ಶಿಶು ಅಭಿವೃದ್ಧಿ ಯೋಜನೆ ಹೇಗೆ ಹಲವು ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ತಾಪಂ ಅಧ್ಯಕ್ಷೆ ಭೀಮವ್ವ ಎಂ. ಅಚ್ಚೋಲಾ, ತಾಪಂ ಅಧಿಕಾರಿ ಬಸವರಾಜ ಎಸ್. ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಇದ್ದರು.