ಯಾದಗಿರಿ: ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹರಿಪಾದ ಸೇರಿದ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶರಣ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ರವಿವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಸಾಹಿತಿಗಳಾದ ಮಹಾಂತಪ್ಪ ಜಾಗಟೆ, ಅಯ್ಯಣ್ಣ ಹುಂಡೇಕಾರ, ಶೋಭಾ ಸಾಲಮಂಟಪಿ, ಡಾ| ಭೀಮರಾಯ ಲಿಂಗೇರಿ, ಬಸವರಾಜ ಮೋಟ್ನಳ್ಳಿ, ಶ್ರೀಗಳ ಆದರ್ಶ ಜೀವನ ಸಮಾಜಕ್ಕೆ ನೀಡಿದ ಕೊಡುಗೆ ಸ್ಮರಿಸಿದರು.
ಶ್ರೀಗಳು ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀ ರಾಮ ಮಂದಿರಕ್ಕೆ ಅವರದ್ದೇ ಆದ ಸಲಹೆಯೊಂದಿಗೆ ಅದ್ಭುತ ಕೊಡುಗೆ ನೀಡಿದ್ದರು. ಈಗಿನ ರಾಜಕಾರಣಿಗಳು ಮತ್ತು ಮಠಾಧಿಧೀಶರು ಹಾಗೂ ಸಂಪೂರ್ಣ ಮಾನವಕುಲಕ್ಕೆ ಮಾರ್ಗದರ್ಶಕರಾಗಿದ್ದರು ಎಂದು ಹೇಳಿದರು.
ಪೂಜ್ಯರ ಆತ್ಮಕ್ಕೆ ಶಾಂತಿ ಕೋರಿ ಭಕ್ತ ಸಮೂಹಕ್ಕೆ ಆಘಾತ ಸಹಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ| ಸಿದ್ದಪ್ಪ ಹೊಟ್ಟಿ, ಸಂಗಣ್ಣ ಹೋತಪೇಟ, ವಿಶ್ವನಾಥರೆಡ್ಡಿ ಗೊಂದಡಗಿ, ಮಹಾದೇವಪ್ಪ ಹೊಟ್ಟಿ, ಸ್ವಾಮಿ ದೇವ ದಾಸನಕೇರಿ, ಬಸವಂತರಾಯ ಗೌಡ ಮಾಲಿಪಾಟೀಲ, ವಿಶ್ವನಾಥ ಗಣಪೂರು, ಲಕ್ಷ್ಮೀನಾರಾಯಣ ಗುಂಡಾನೋರ, ನೀಲಕಂಠ ಶೀಲವಂತ, ನಾಗೇಂದ್ರ ಜಾಜಿ, ಬಾಲು ನಕ್ಕಲ್, ಗುರುಬಸಪ್ಪ ಗುಂಡಳ್ಳಿ, ದೇವರಾಜ ವರ್ಕನಳ್ಳಿ, ಚಂದ್ರಶೇಖರ ಅರಳಿ, ಶರಣಪ್ಪ ಗುಳಗಿ, ಸುಭಾಷ ಗಂಜಿ, ಸುಭಾಷ್ ಆಯಾರಕರ್ ಪಾಲ್ಗೊಂಡಿದ್ದರು.