Advertisement
ತಾಲೂಕಿನ ಮುಂಡರಗಿ ಗ್ರಾ.ಪಂ ವ್ಯಾಪ್ತಿಯ ಮುಂಡರಗಿ, ಬೆಳಗೇರಿ, ಅಶೋಕನಗರ ತಾಂಡಾ, ಕುರಕುಂಬಳ ತಾಂಡಾ, ಶಕ್ರಾನಾಯಕ ತಾಂಡಾಗಳಲ್ಲಿ ಒಟ್ಟು 1700 ಕುಟುಂಬಗಳು ವಾಸವಾಗಿವೆ. 10 ಸಾವಿರದಷ್ಟು ಜನಸಂಖ್ಯೆಯಿದೆ. ಚೆಕ್ ಮೂಲಕ ಪಾವತಿ ಮತ್ತು ಫಲಾನುಭವಿಗಳಿಗೆ ನೇರ ಪಾವತಿ ಸೇರಿ ಒಟ್ಟು 1258 ವೈಯಕ್ತಿಕ ಶೌಚಾಲಯಗಳು ನಿರ್ಮಾಣವಾಗಿವೆ.
Related Articles
Advertisement
ಅಧಿಕಾರಿಗಳು ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವುದು ಅಗತ್ಯವಾಗಿದೆ. ಬಯಲಿನಲ್ಲಿ ಶೌಚಕ್ಕೆ ಹೋಗುವುದರಿಂದ ಪರಿಸರ, ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ತಿಳಿಸಿ, ಗ್ರಾಮೀಣ ಜನರು ಶೌಚಾಲಯ ಬಳಸುವಂತೆ ಅವರ ಮನಸ್ಥಿತಿ ಬದಲಾಯಿಸುವುದು ಮುಖ್ಯವಾಗಿದೆ.
ಶೌಚಾಲಯಗಳ ವಿವರ2013-14ರಲ್ಲಿ 58, 14-15ರಲ್ಲಿ 03, 15-16ರಲ್ಲಿ 31, 16-17ರಲ್ಲಿ 291, 17-18ರಲ್ಲಿ 275 ಹಾಗೂ 18-19ರಲ್ಲಿ 487 ವೈಯಕ್ತಿಕ ಶೌಚಾಲಯಗಳು ನಿರ್ಮಾಣವಾಗಿದೆ. ಅಲ್ಲದೇ 2018-19ರಲ್ಲಿ ಬಿಟ್ಟು ಹೋಗಿದ್ದ 113 ಕುಟುಂಬಗಳಿಗೆ ಸೌಕರ್ಯ ಒದಗಿಸಲಾಗಿದ್ದು, ಒಟ್ಟು 1258 ಶೌಚಾಲಯ ನಿರ್ಮಾಣವಾಗಿದೆ. ಮಾದರಿ ಕುಟುಂಬ
ಗ್ರಾಮದಲ್ಲಿ ಬಸವರಾಜ ಮುಂಡರಗಿ ಅವರ ಕುಟುಂಬ ಸುಮಾರು ಏಳು ವರ್ಷಗಳ ಹಿಂದೆಯೇ ಗ್ರಾ.ಪಂ ಪ್ರೋತ್ಸಾಹಧನ ಪಡೆದು, ತಾವು ಒಂದಿಷ್ಟು ಹಣವನ್ನು ಖರ್ಚು ಮಾಡಿ ವ್ಯವಸ್ಥಿತ ಶೌಚಾಲಯ ನಿರ್ಮಿಸಿಕೊಂಡಿದ್ದು ಮಾದರಿಯಾಗಿದೆ. 2013-14ಕ್ಕೆ ಹೋಲಿಸಿದರೆ ಶೌಚಾಲಯ ಬಳಕೆಯಲ್ಲಿ ಬದಲಾವಣೆ ಆಗುತ್ತಿದೆ. ಜನರು ಯಾವ ರೀತಿ ಮೊಬೈಲ್ ಬಳಕೆ ರೂಢಿ ಮಾಡಿಕೊಂಡಿದ್ದಾರೋ ಹಾಗೆಯೇ ಶೌಚಾಲಯ ಬಳಕೆ ಮಾಡಬೇಕು. ಶೌಚಾಲಯ ಬಳಕೆಗೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಜನರ ಮನೋಭಾವ ಬದಲಾಗಬೇಕು.
ಭೀಮರಾಯ, ಪಿಡಿಒ ನಾವು ಶೌಚಾಲಯ ನಿರ್ಮಿಸಿಕೊಂಡು ಏಳು ವರ್ಷಗಳಾದವು. ಮನೆಯವರೆಲ್ಲ ಬಳಸುತ್ತಿದ್ದೇವೆ. ಇದೇ ರೀತಿ ಶೌಚಾಲಯ ನಿರ್ಮಿಸಿಕೊಂಡ ಪ್ರತಿಯೊಬ್ಬರು ಬಳಸಿದರೆ ಒಳ್ಳೆಯದು.
ಬಸವರಾಜ,
ಮುಂಡರಗಿ ಸಿವಾಸಿ ಫಲಾನುಭವಿಗಳೊಂದಿಗೆ ಕರಾರು ಒಪ್ಪಂದ
ಶೌಚಾಲಯ ನಿರ್ಮಿಸಿಕೊಳ್ಳುವ ಫಲಾನುಭವಿಗಳಿಗೆ ನೇರವಾಗಿ ಹಂತ ಹಂತವಾಗಿ ಹಣ ಜಮಾ ಆಗುವುದರಿಂದ ಜನರು ಶೌಚಾಲಯ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈ ಹಿಂದೆಯೇ ಜಿಲ್ಲೆಯಲ್ಲಿ ಫಲಾನುಭವಿ ಹಾಗೂ ಗುತ್ತಿಗೆದಾರರನ್ನು ಹುಡುಕಿ ಕರಾರು ಒಪ್ಪಂದ ಮಾಡಿ ಶೌಚಾಲಯಗಳ ನಿರ್ಮಾಣ ಮಾಡಲಾಗುತ್ತಿದೆ . ಅನೀಲ ಬಸೂದೆ