Advertisement

ಮಾಲಗತ್ತಿ ಕೆರೆ ನೀರು ಸರಬರಾಜು ಯೋಜನೆ ಕೈಬಿಡಿ

04:06 PM Apr 06, 2019 | Naveen |

ಯಾದಗಿರಿ: ಸುರಪುರ ತಾಲೂಕಿನ ಮಾಲಗತ್ತಿ ಗ್ರಾಮದ ಕೆರೆ ನೀರು
ಬೇರೆ ಗ್ರಾಮಗಳಿಗೆ ಸರಬರಾಜು ಮಾಡುವ ಯೋಜನೆ ರೂಪಿಸಲಾಗಿದೆ. ಇದನ್ನು ಕೈಬಿಟ್ಟು ಮಾಲಗತ್ತಿ ಜನರಿಗೆ
ನೀರಿನ ಬರ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗುವುದನ್ನು ತಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ) ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದೆ.

Advertisement

ಮಾಲಗತ್ತಿ ಗ್ರಾಮ ಘಟಕದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ
ಆಗಮಿಸಿದ ರೈತರು ಆಕ್ರೋಶ ವ್ಯಕ್ತಪಡಿಸಿ ಕಳೆದ ವರ್ಷ ಅಧಿಕಾರಿಗಳು ಯಾವುದೇ ರೈತರ ಸಭೆ, ಗ್ರಾಮಸಭೆ ನಡೆಸದೇ ಈ
ಭಾಗದ ರೈತರ ಅಭಿಪ್ರಾಯ ಕೇಳದೇ ಮಾಲಗತ್ತಿ ಕೆರೆಯಿಂದ 12 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆ ರೂಪಿಸಿ ಅನ್ಯಾಯ ಮಾಡಿದ್ದಾರೆ. ಅಧಿಕಾರಿಗಳು ಮನಸ್ಸಿಗೆ ತೋಚಿದಂತೆ ಯೋಜನೆ ರೂಪಿಸಿ ಜಾರಿಗೆ ತಂದು ಬಿಲ್‌ ಎತ್ತುವ ಹವಣಿಕೆಯಲ್ಲಿದ್ದಾರೆ.

ಆದರೆ ಅಧಿಕಾರಿಗಳು ಬಿಲ್‌ ಎತ್ತಲು ಮಾಡಿದ ಯೋಜನೆ ಇದಾಗಿದೆ ಹೊರತು ಜನರಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಉದ್ದೇಶ ಯೋಜನೆಯಲ್ಲಿ ಎಳ್ಳಷ್ಟು ಇಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಕಳೆದ ವರ್ಷ ಈ ಯೋಜನೆ ಜಾರಿಗೊಳಿಸಲು ಮುಂದಾಗಿದ್ದಾಗ ರೈತ ಸಂಘದಿಂದ ಆಕ್ಷೇಪಣೆ ಸಲ್ಲಿಸಿದಾಗ
ಕಾಮಗಾರಿ ತಡೆಹಿಡಿದಿದ್ದರು. ಆದರೆ ಇದೀಗ ಚುನಾವಣೆ ಮುಂದೆ ಏಕಾಏಕಿ ಈ ಕಾಮಗಾರಿ ಪುನಾರಂಭಿಸಿ ಇನ್ನೊಂದು ಕೆಲಸಕ್ಕೆ ಬಾರದ ಯೋಜನೆ ಪೂರ್ಣಗೊಳಿಸಿ ಹಣ ಎತ್ತಲು ಮುಂದಾಗಿರುವುದು ನಾಚಿಕೆಗೇಡು. ತಕ್ಷಣ ಯೋಜನೆ ಕೈಬಿಡದಿದ್ದರೆ ನಮ್ಮ ಗ್ರಾಮದವರಿಗೆ ಕುಡಿಯುವ ನೀರಿಲ್ಲದೇ ಹಾಹಾಕಾರವಾಗುತ್ತದೆ.

ತಾವು ಮಧ್ಯ ಪ್ರವೇಶಿಸಿ ಕಾಮಗಾರಿ ವಜಾಗೊಳಿಸಬೇಕು. ಇಲ್ಲವಾದಲ್ಲಿ ನಮ್ಮ ಪಾಲಿನ ನೀರಿನ ಹಕ್ಕಿಗಾಗಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

Advertisement

ರೈತ ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಭಾವಿ ನೇತೃತ್ವ ವಹಿಸಿ ಮನವಿ ಸಲ್ಲಿಸಿದರು. ಜಿಲ್ಲಾ ಉಪಾಧ್ಯಕ್ಷ ಹನಮಂತ್ರಾಯ
ಚಂದಲಾಪುರ, ಮಾಲಗತ್ತಿ ಅಧ್ಯಕ್ಷ ವೆಂಕೋಬ ಹವಾಲ್ದಾರ, ಉಪಾಧ್ಯಕ್ಷ ಚಾಂದಪಾಷಾ ಗುತ್ತೇದಾರ, ಗೌರವಾಧ್ಯಕ್ಷ ಬಾಪುಗೌಡ ಮಾಲೀಪಾಟೀಲ, ಕಾರ್ಯದರ್ಶಿ ಭೀಮಣ್ಣ ರಾಂಪುರ, ಮಹಾಂತೇಶ ಸಾಹುಕಾರ, ಬಸವರಾಜ ಯನಗುಂಟಿ, ರವಿ ಚನ್ನೂರು, ಕೃಷ್ಟಪ್ಪ ದೊರೆ, ನಂದಪ್ಪ ನಾಯ್ಕೋಡಿ, ದ್ಯಾವಣ್ಣ
ಖಾನಾಪುರ, ಖುದಾಭಕ್ಷಿ, ಮಕಾಂದಾರ, ಮಲ್ಲಣ್ಣ, ಬಸವರಾಜ ಸತ್ಯಂಪೇಟೆ, ಬಸವರಾಜ ಯಕ್ತಾಪುರ, ಸಂಜೀವಪ್ಪ ದ್ಯಾವಪುರ, ಪಂಪಣ್ಣ ಮಾಲಗತ್ತಿ, ನೀಲಪಪ್ಪ, ರೋಷನ್‌, ಶರಣಪ್ಪ,
ನಬಿಪಟೇಲ್‌, ಹುಸೇನಸಾಬ ಇದ್ದರು.

ರೈತರ ಅಸಮಾಧಾನ
ಮಾಲಗತ್ತಿ ಕೆರೆಯಲ್ಲಿ ಈಗಾಗಲೇ ಹೂಳು ತುಂಬಿ ನೀರು ಸಂಗ್ರಹಣೆ
ಕಡಿಮೆಯಾಗಿದೆ. ಅಲ್ಲದೇ ಸತತ ಬರಗಾಲ ಇರುವ
ಸಂದರ್ಭದಲ್ಲಿಯೇ ಕೆರೆಯಲ್ಲಿರುವ ಅಲ್ಪಸ್ವಲ್ಪ ನೀರನ್ನು 12 ಗ್ರಾಮಗಳಿಗೆ ಸರಬರಾಜು ಮಾಡುವ ಯೋಜನೆ ರೂಪಿಸಿರುವುದೇ
ಹಣ ಹೊಡೆಯಲು ಎಂಬುದು ಅರ್ಥವಾಗುತ್ತದೆ ಎಂದು ರೈತರು
ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next